ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೀಯಾಳಿಗೆ ಬಲೆ ಬೀಸಿರುವ ಸಲ್ಮಾನ್ ರಶ್ದಿ...  Search similar articles
IFM
ಈ ಹಿಂದೆ ನೈಟ್ ಕ್ಲಬ್ ಒಂದರಲ್ಲಿ ಬಾಲಿವುಡ್ ಬೆಡಗಿ ರೀಯಾ ಸೇನ್‌ಳನ್ನು ಭೇಟಿಯಾಗಿದ್ದ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಸಂಜಾತ ವಿವಾದಾಸ್ಪದ ಲೇಖಕ ಸಲ್ಮಾನ್ ರಶ್ದಿ ರೀಯಾಳಿಗೆ ಬಲೆ ಬೀಸುತ್ತಿದ್ದಾರೆ ಎಂಬ ಗುಸುಗುಸುಗಳು ಕೇಳಿಬರುತ್ತಿವೆ.

ನಟಿ, ರೂಪದರ್ಶಿ ಪದ್ಮಲಕ್ಷ್ಮಿಯೊಂದಿಗಿನ ಮೂರು ವರ್ಷದ ಮದುವೆ ಮುರಿದು ಬಿದ್ದ ಬಳಿಕ ರಶ್ದಿ ಮತ್ತೆ ಎಲಿಜಬಲ್ ಬ್ಯಾಚುಲರ್ ಆಗಿದ್ದಾರೆ. ಇವರೀಗ 27ರ ಲಲನೆಯನ್ನು ಬುಟ್ಟಿಗೆ ಹಾಕಿಕೊಳ್ಳವ ಹುನ್ನಾರದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತುತ ನ್ಯೂಯಾರ್ಕ್‌ನಲ್ಲಿರುವ ರಶ್ದಿ ರೀಯಾಳನ್ನು ಅಲ್ಲಿಗೆ ಆಹ್ವಾನಿಸಿದ್ದಾರಂತೆ.

ನಾಲ್ಕು ಬಾರಿ ವಿವಾಹವಾಗಿದ್ದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆ ಅವಶ್ಯಕವಲ್ಲ ಎಂದಿದ್ದ 'ದ ಸೆಟನಿಕ್ ವರ್ಸಸ್'ನ ವಿವಾದಿತ ಕೃತಿಯ ಲೇಖಕ ತನ್ನನ್ನು ನ್ಯೂಯಾರ್ಕ್‌ಗೆ ಆಹ್ವಾನಿಸಿದ್ದಾರೆ ಎನ್ನುವುದನ್ನು ದೃಢಪಡಿಸಿರುವ ರೀಯಾ ತಮ್ಮ ನಡುವೆ 'ಅಂತಹದ್ದೇನಿಲ್ಲ' ಎಂದು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಗುರುವಾರದಂದು ತಮ್ಮ 'ಮಿಡ್‌ನೈಟ್ ಚಿಲ್ಡ್ರನ್'ಗೆ 'ಬೆಸ್ಟ್ ಅಫ್ ದ ಬುಕರ್' ಪ್ರಶಸ್ತಿ ಪಡೆದಿರುವ ರಶ್ದಿ" ವಿಚಿತ್ರವೆಂದರೆ, ನಾನು ನಾಲ್ಕು ಬಾರಿ ಮದುವೆಯಾಗಿದ್ದೇನೆ ಆದರೆ ನನಗೆ ನಿಜವಾಗಿ ಮದುವೆ ಎನ್ನುವುದು ಅಗತ್ಯವಿಲ್ಲ ಎಂದೆನಿಸುತ್ತದೆ." ಎಂದಿದ್ದಾರೆ.

ಅಂದಹಾಗೆ ಸಲ್ಮಾನ್ ರಶ್ದಿಗಿನ್ನೂ 61ರ ಹರೆಯವಷ್ಟೆ........!
ಮತ್ತಷ್ಟು
ವಿಲ್‌ಸ್ಮಿತ್‌ರ ಮೊದಲ ಆಯ್ಕೆ ಐಶ್ ಬೇಬ್
ನಟನೆ ನಿಜಕ್ಕೂ ಆನಂದದಾಯಕ: ಫರಾನ್ ಅಖ್ತರ್
ತಾನ್ಯಾರಿಗೂ ಕೆಟ್ಟದು ಬಯಸೆ: ಅಮೀರ್
ಇಮ್ರಾನ್‍‌ ಖಾನ್ ನಿಜವಾಗ್ಲೂ ಖಾನ್ ಅಲ್ವಂತೆ!
ರಜನಿ V/s ಶಾರೂಖ್ ಚಿತ್ರ ಸಮರ
ಕೆಂಪುಡುಪಿನಲ್ಲಿ ಲಕಲಕಿಸುವ ದಿಯಾ