ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಟಿ ಮೌಶ್ಮಿಯ ತುಟಿಗೆ ತುಟಿಯೊತ್ತಿ ರಕ್ತ ಸುರಿಸಿದ ಅಪರಿಚಿತ! (Maushmi Udeshi | Kiss | Milaga | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Maushmi Udeshi
IFM
ಮೊನ್ನೆ ಮೊನ್ನೆ ಬಾಲಿವುಡ್ ಹಾಟ್ ಸೆಕ್ಸೀ ನಟಿ ಬಿಪಾಶಾಳನ್ನು ಸಾರ್ವಜನಿಕವಾಗಿ ಹಿಡಿದೆಳೆದು ಆಕೆಯ ಖಾಸಗಿ ಅಂಗಗಳ ಮೇಲೆಲ್ಲಾ ಕೈಯಾಡಿಸಿ ಕಾಲ್ಕಿತ್ತ ಘಟನೆ ಮರೆಯಾಗುವ ಮುನ್ನವೇ, ಮೌಶ್ಮಿ ಉದೇಶಿ ಎಂಬ ಹಾಟ್ ಕನ್ಯಾಮಣಿಯ ತುಟಿಗೆ ಅಪರಿಚಿತನೊಬ್ಬ ರಕ್ತ ಸುರಿಯುವಂತೆ ಮುತ್ತು ಕೊಟ್ಟು ಕಚ್ಚಿದ ಘಟನೆ ಮಧುರೈನಲ್ಲಿ ಚಿತ್ರೀಕರಣದ ವೇಳೆ ನಡೆದಿದೆ.

ಮಾಡೆಲ್ ಆಗಿದ್ದ ಮೌಶ್ಮಿ ಉದೇಶಿ ಈಗಷ್ಟೆ ಚಿತ್ರರಂಗಕ್ಕೆ ಧುಮುಕಿದ್ದಾರೆ. ಒಂದೆರಡು ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಧುರೈ ಬಳಿ ತಮಿಳು ಚಿತ್ರ 'ಮಿಳಗ'ಕ್ಕೆ ಚಿತ್ರೀಕರಣ ನಡೆಯುವ ಸಂದರ್ಭ, ಮೌಶ್ಮಿ ನಾಯಕ ನಟನ ಜತೆಗೆ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದರು. ಸಿನಿಮಾ ಚಿತ್ರೀಕರಣವನ್ನು ನೋಡಲು ಸಹಜವಾಗಿಯೇ ಸಾಕಷ್ಟು ಜನಸ್ತೋಮ ನೆರೆದಿತ್ತು. ಇದ್ದಕ್ಕಿದ್ದಂತೆ ಆ ಜನಸ್ತೋಮದ ನಡುವಿನಿಂದ ಜಿಗಿದ ಅಪರಿಚಿತನೊಬ್ಬ ಮೌಶ್ಮಿಯನ್ನು ಹಿಡಿದೆಳೆದು ಆಕೆಯ ತುಟಿಗೆ ತನ್ನ ತುಟಿಯೊತ್ತಿದ. ಅಷ್ಟೇ ಅಲ್ಲ, ಆಕೆಯ ತುಟಿಯಿಂದ ರಕ್ತ ಸುರಿಯುವಂತೆ ಕಚ್ಚಿದ್ದಾನೆ. ಎಲ್ಲರೂ ಏನಾಗುತ್ತಿದೆ ಎಂದು ನೋಡುತ್ತಿರುವಾಗಲೇ ಮೌಶ್ಮಿಗೆ ರೋಷವುಕ್ಕಿ ಆತನ ಕಪಾಳಕ್ಕೆರಡು ಚೆನ್ನಾಗಿ ಬಿಗಿದಿದ್ದಾಳೆ. ಆಕೆ ಬಿಗಿದ ಪೆಟ್ಟಿನ ರಭಸಕ್ಕೆ ಆ ಅಪರಿಚಿತನ ಮೂಗಿನಿಂದ ರಕ್ತ ಸೋರಿದೆ.

ಅಷ್ಟರಲ್ಲಿ ನೆರೆದ ಮಂದಿಯೆಲ್ಲಾ ಸೇರಿ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ. ಥಳಿತದ ಪರಿಣಾತ ಅಪರಿಚಿತ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ನಂತರ ಚಿತ್ರತಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಪೊಲೀಸ್ ವಶಕ್ಕೆ ಒಪ್ಪಿಸಿ ದೂರು ದಾಖಲಿಸಿದ್ದಾರೆ.
Maushmi Udeshi
IFM


ಮೌಶ್ಮಿ ಉದೇಶಿಗೆ ಇಂತಹ ಪ್ರಕರಣ ಹೊಸತೇನಲ್ಲ. ಮೊನ್ನೆ ಮೊನ್ನೆಯಷ್ಟೆ ದೆಹಲಿಯಿಂದ ಮುಂಬೈ ವಿಮಾನಕ್ಕೆ ಹತ್ತಿದಾಗ, ಆಕೆಯ ಹಿಂದಿನ ಸೀಟ್‌ನಲ್ಲಿ ಕುಳಿತ ಯುವಕ ಆಕೆಯ ಭುಜಕ್ಕೆ ತಾಗುವಂತೆ ಕೈಯಿಟ್ಟು ಅಶ್ಲೀಲವೆನಿಸುವ ಶಬ್ದ ಮಾಡುತ್ತಿದ್ದ. ಆಕೆ ಸೀಟ್ ಬದಲಾಯಿಸಲು ಹೊರಟಾಗ ನೇರವಾಗಿ ಭುಜಕ್ಕೆ ಕೈಯೋತ್ತಿ ಆಕೆಯನ್ನು ಅಲ್ಲಿಂದ ಕದಲದಂತೆ ಮಾಡಿಬಿಟ್ಟ. ತಕ್ಷಣ ತಿರುಗಿದ ಆಕೆ ಆತ ಕಪಾಳಕ್ಕೆರಡು ಬಾರಿಸಿದಾಗಲೇ ಗೊತ್ತಾಗಿದ್ದು, ಇದೇ ಮನುಷ್ಯ ಬೋರ್ಡಿಂಗ್ ಸಮಯದಲ್ಲೂ ಆಕೆಯ ಮೇಲೆ ಬಿದ್ದಂತೆ ಎರಡು ಬಾರಿ ತಳ್ಳಿದ್ದ ಎಂದು.

ನಟಿಯರಿಗೆ ಸಾಕಷ್ಟು ಭದ್ರತಾ ಸೌಲಭ್ಯವಿದ್ದರೂ, ತುಂಬಿದ ಜನಸ್ತೋಮದಲ್ಲಿ ಹೀಗೆ ದೈಹಿಕ, ಲೈಂಗಿಕ ದೌರ್ಜನ್ಯದಂತಹ ಸಾಕಷ್ಟು ಪ್ರಕರಣಗಳು ಹಿಂದೆಯೇ ನಡೆದಿವೆ. ಇತ್ತೀಚೆಗೆ ಮೊನ್ನೆ ಮೊನ್ನೆಯಷ್ಟೆ ಮಾಡೆಲ್, ನಟಿ ಮೌಶಮಿ ಉದೇಶಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೌಶ್ಮಿ ಉದೇಶಿ, ಬಾಲಿವುಡ್, ಹಾಟ್, ಮಿಳಗ, ಬಿಪಾಶಾ, ಕಿಸ್