ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೀಪಿಕಾ-ರಣಬೀರ್ ಸರಸಕ್ಕೆ ಅಮ್ಮನ ಗ್ರೀನ್ ಸಿಗ್ನಲ್! (Deepika Padukone | Ranbir Kapoor | Neetu Singh | Rishi Kapoor)
ಸುದ್ದಿ/ಗಾಸಿಪ್
Feedback Print Bookmark and Share
 
Deepika Padukone,| Ranbir Kapoor
IFM
ಕೊನೆಗೂ ಬಾಲಿವುಡ್ಡಿನ ಸುರಸುಂದರಾಂಗ ನಟ, ಯುವತಿಯರ ಹಾಟ್ ಫೇವರಿಟ್ ರಣಬೀರ್ ಕಪೂರ್‌ಗೆ ಕೊನೆಗೂ ತನ್ನ ಹಾಗೂ ದೀಪಿಕಾ ಪಡುಕೋಣೆಯ ನಡುವಿನ ಪ್ರಣಯ ಜೀವನಕ್ಕೆ ಅಪ್ಪ ರಿಷಿ ಕಪೂರ್ ಹಾಗೂ ಅಮ್ಮ ನೀತು ಸಿಂಗ್ ಅವರಿಂದ ಆಶೀರ್ವಾದ ಬಿದ್ದಿದೆ. ಹಾಗಂತ ರಣಬೀರ್ ಕಪೂರ್ ಸ್ವತಃ ಹೇಳಿಕೊಂಡಿದ್ದಾರೆ.

ಲವ್ ಆಜ್ ಕಲ್ ಎಂಬ ಹಿಟ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಿಂಚಿದಷ್ಟೇ ಅಭಿಮಾನಿಗಳ ಕಣ್ಣಲ್ಲಿ ರಣಬೀರ್ ಕಪೂರ್ ಅವರ ಅಪ್ಪ ರಿಷಿ ಕಪೂರ್ ಹಾಗೂ ನೀತು ಚಂದ್ರ ಮಿಂಚಿದ್ದರು. ರಿಷಿ ಕಪೂರ್ ಅವರಿಗೆ ಚಿತ್ರದಲ್ಲಿ ಮುಖ್ಯವಾದ ಪಾತ್ರವಿದ್ದರೆ, ನೀತು ಸಿಂಗ್ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಅಂತ್ಯದಲ್ಲಿ ಬಂದು ಹೋಗುತ್ತಾರೆ. ಆದರೂ, ನೀತು ಸಿಂಗ್ ಅವರಿಗೆ ತನ್ನ ಮಗ ರಣಬೀರ್ ತೆರೆಯ ಹಿಂದೆ ದೀಪಿಕಾ ಪಡುಕೋಣೆ ಜತೆಗೆ ಸಲ್ಲಾಪವಾಡುವುದು ಇಷ್ಟವಿಲ್ಲ. ಹಾಗೂ ದೀಪಿಕಾಳನ್ನು ಕಂಡರೆ ನೀತುಗೆ ಅಷ್ಟಾಗಿ ಆಗುವುದಿಲ್ಲ ಎಂಬ ಸುದ್ದಿಯೂ ಬಾಲಿವುಡ್ಡಿನಲ್ಲಿ ಇತ್ತು.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ದೀಪಿಕಾಗೂ ನಿಮ್ಮಮ್ಮ ನೀತುಗೂ ಸರಿಬರುದಿಲ್ಲವಂತೆ ಹೌದಾ? ಎಂದಾಗ, ರಣಬೀರ್ ಕಪೂರ್ ತನ್ನ ಬೆಳ್ಳನೆ ಮುಖವನ್ನು ಕೆಂಪಗೆ ಮಾಡುತ್ತಾ ಸಣ್ಣಗೆ ನಾಚುತ್ತಾ, ಹಾಗೇನಿಲ್ಲ. ಅಮ್ಮನಿಗೆ ದೀಪಿಕಾಳನ್ನು ಕಂಡರೆ ತುಂಬ ಇಷ್ಟ ಎಂದಷ್ಟೆ ಉಸುರಿ ಮೌನದೇವತೆಯ ಮುಖವಾಡ ಧರಿಸಿದ್ದರು.
Deepika Padukone, Ranbir Kapoor
IFM


ಮಾಧ್ಯಮದ ಮಂದಿ ರಣಬೀರ್ ಹಾಗೂ ದೀಪಿಕಾರ ಮಧುರ ಸಂಬಂಧದ ಬಗ್ಗೆ ಕೇಳಿದಾಗಲೆಲ್ಲಾ ಸಂಯಮದಿಂದ ಉತ್ತರಿಸುತ್ತಲೇ ಇದ್ದ ರಣಬೀರ್ ಈ ಬಾರಿಯೂ ಅಷ್ಟೇ ಸಂಯಮದಿಂದ ಉತ್ತರಿಸಿದ್ದಾರೆ. ಆದರೆ, ನಿಮ್ಮಿಬ್ಬರ ಮದುವೆ ಯಾವಾಗ? ಎಂದಿದ್ದಕ್ಕೆ ಮಾತ್ರ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸರಿಯಾದ ಸಮಯ ಬಂದರೆ ಮದುವೆಯ ಮಾತು ಎಂದು ಉತ್ತರಿಸಿ ಆಗಸದತ್ತ ದೃಷ್ಟಿ ನೆಟ್ಟರು.

ಈ ಹಿಂದೆ ಅಪ್ಪ ರಿಷಿ ಕಪೂರ್ ಮಾತ್ರ ತನ್ನ ಮಗ ರಣಬೀರ್ ಹಾಗೂ ದೀಪಿಕಾ ನಡುವೆ ಸ್ನೇಹ ಬಿಟ್ರೆ ಅಂಥಾದ್ದೇನಿಲ್ಲ. ರಣಬೀರ್‌ನ ಹಲವು ಗೆಳತಿಯರಲ್ಲಿ ದೀಪಿಕಾಳೂ ಒಬ್ಬಳು ಅಷ್ಟೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾಧ್ಯಮದ ಮಂದಿಯನ್ನು ಹೌಹಾರಿಸಿದ್ದರು. ಆದರೆ ಇತ್ತ ರಣಬೀರ್ ಮಾತ್ರ ದೀಪಿಕಾ ವಿಷಯ ಬಂದಾಗಲೆಲ್ಲ ಕೆನ್ನೆ ತುಂಬ ಕೆಂಗುಲಾಬಿ ಚಿಗುರಿದಂತೆ ನಾಚೋದು ನೋಡಿದರೆ..., ದೀಪಿಕಾ ಮೊನ್ನೆ ಮೊನ್ನೆ ರಣಬೀರನ ಮನಗೆಲ್ಲುವಂತಹ ಬೆಲೆಬಾಳುವ ದುಬಾರಿ ಲ್ಯಾಪ್‌ಟಾಪ್ ಉಡುಗೊರೆಯಾಗಿ ನೀಡಿದ್ದು ನೋಡಿದರೆ... ಎಂಥವರಿಗೂ ಪರಿಸ್ಥಿತಿ ಅರ್ಥವಾಗದಿರದು ಬಿಡಿ ಅಂತ ಬಾಲಿವುಡ್ಡಿಗೆ ಬಾಲಿವುಡ್ಡೇ ಗುಸುಗುಸು ಅನ್ನುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ನೀತು ಸಿಂಗ್, ರಿಷಿ ಕಪೂರ್