ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಜಾಹಿರಾತಿನಲ್ಲಿ ರೊಮ್ಯಾಂಟಿಕ್ ಆದ ಅಭಿಷೇಕ್-ಐಶ್ವರ್ಯಾ ರೈ (Aishwarya Rai Bachchan | Abhishek Bachchan | Advertisement)
ಸುದ್ದಿ/ಗಾಸಿಪ್
Feedback Print Bookmark and Share
 
Aishwarya Rai, Abhishek Bachchan
IFM
ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸದ್ಯದ ಹಾಟ್ ದಂಪತಿಗಳು. ಸುಂದರ ದಂಪತಿಗಳು ಎಂಬ ಹೆಗ್ಗಳಿಕೆಯೂ ಇವರಿಗಿದೆ. ಮದುವೆಯಾದ ಮೇಲೂ ಸಿನಿಮಾದಲ್ಲಿ ತನ್ನ ಪ್ರಭುತ್ವವನ್ನು, ಬೇಡಿಕೆಯನ್ನು ಕಳೆದುಕೊಳ್ಳದ, ಮನೆ-ಕುಟುಂಬ-ಉದ್ಯೋಗ ಎಲ್ಲವನ್ನೂ ಸಮಪ್ರಮಾಣದಲ್ಲಿ ತೂಗಿಸಿಕೊಂಡು ಹೋಗುತ್ತಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಯೂ ಈ ಕರಾವಳಿ ಸುಂದರಿ ಐಶ್ವರ್ಯಾಗಿದೆ.

ಐಶ್-ಅಭಿ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡದ್ದನ್ನು ಎಲ್ಲರೂ ನೋಡಿ ಆಗಿದೆ. ಆದರೆ ಜಾಹಿರಾತಿನಲ್ಲಿ ಈ ಇಬ್ಬರು ದಂಪತಿಗಳು ಎಂದೂ ಒಂದಾಗಿರಲಿಲ್ಲ. ಇದೀಗ ಅವರು ಟಿವಿಯಲ್ಲೂ ಒಂದಾಗುವ ಕಾಲ ಬಂದಿದೆ!!!

ಹೌದು. ಖ್ಯಾತ ಬ್ರ್ಯಾಂಡ್ ಒಂದರ ಸಾಬೂನಿನ ಜಾಹಿರಾತಿನಲ್ಲಿ ಅಭಿಷೇಕ್- ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಅದೂ ಕೂಡಾ ಫುಲ್ ರೊಮ್ಯಾಂಟಿಕ್ ದೃಶ್ಯದಲ್ಲಿ. ಐಶ್ವರ್ಯಾ ಕಡೆದಿಟ್ಟ ಶಿಲಾಬಾಲಿಕೆಯಂತೆ ಅದ್ಭುತವಾಗಿ ಈ ಜಾಹಿರಾತಿನಲ್ಲಿ ಕಂಗೊಳಿಸಿದ್ದಾಳೆ. ಅವರಿಬ್ಬರೂ ತಮ್ಮೊಳಗೇ ಕಿಚಾಯಿಸಿಕೊಳ್ಲುತ್ತಾ, ಕಾಲೆಳೆಯುತ್ತಾ ರೊಮ್ಯಾಂಟಿಕ್ ಆದ ಆದರ್ಶ ದಂಪತಿಗಳಂತೆ ಕಂಗೊಳಿಸಿದ್ದಾರಂತೆ.

Aishwarya Rai, Abhishek Bachchan
IFM
ಈ ಇಬ್ಬರು ದಂಪತಿಗಳು ಈ ಪುಟ್ಟ ಜಾಹಿರಾತಿನಲ್ಲಿ ಎಲ್ಲರನ್ನೂ ಸೆಳೆಯಲಿದ್ದಾರಂತೆ. ಕ್ಷಣಕಾಲ ರೊಮ್ಯಾಂಟಿಕ್ ದೃಶ್ಯದಲ್ಲಿ ಕಾಣಿಸಿಕೊಂಡು ತೆರೆಯ ಮೇಲಿನ ಅದ್ಭುತ ಜೋಡಿ ಎನಿಸಿಕೊಳ್ಳಲಿದ್ದಾರೆ. ಹಾಗಾಗಿ ಈ ಜಾಹಿರಾತು ಈಗ ಬಾಲಿವುಡ್ ವಲಯದಲ್ಲಿ ಭಾರೀ ಸುದ್ದಿ ಮಾಡಿದ್ದಷ್ಟೇ ಅಲ್ಲ. ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ರೊಮ್ಯಾಂಟಿಕ್ ಮಧುರ ಹಾಡಿನಲ್ಲಿ ನಿಮಿಷಾರ್ಧದಲ್ಲಿ ಪ್ರತಿದಿನವೂ ಪ್ರತಿಯೊಬ್ಬರ ಮನೆಯಲ್ಲೂ ರೊಮ್ಯಾನ್ಸ್ ಮಾಡಲಿದ್ದಾರೆ ಅಭಿ-ಐಶ್. ಸದ್ಯದಲ್ಲೇ ನಿಮ್ಮ ಮನೆಗೂ ಬರಲಿದ್ದಾರೆ. ಟಿವಿ.ಆನ್ ಮಾಡಿ ಕಾಯುವ ಸರದಿ ನಿಮ್ಮದು!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಶ್ವರ್ಯಾ ರೈ, ಅಬಿಷೇಕ್ ಬಚ್ಚನ್, ಜಾಹಿರಾತು