ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮುಂಬೈನಲ್ಲಿ ನಾಳೆ ಶಿಲ್ಪಾ ಶೆಟ್ಟಿ ನಿಶ್ಚಿತಾರ್ಥ! (Raj Kundra | Shilpa Shetty | Big Brother | Bollywood)
ಸುದ್ದಿ/ಗಾಸಿಪ್
Feedback Print Bookmark and Share
 
Raj Kundra, Shilpa Shetty
IFM
ಕರಾವಳಿಯ ಬಳುಕುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಮದುವೆಯಂತೆ ಎಂದು ಅಂತೆ ಕಂತೆಗಳು ಸುತ್ತುತ್ತಿದ್ದುದು ನಿಜವಾಗಿದೆ. ಶಿಲ್ಪಾ ಶೆಟ್ಟಿ ಭಾರತೀಯ ಮೂಲದ ಲಂಡನ್ ನಿವಾಸಿ ರಾಜ್ ಕುಂದ್ರಾರನ್ನು ಮದುವೆಯಾಗೋದು ಪಕ್ಕಾ ಆಗಿದೆ. ನಾಳೆ( ಅ.24) ಶಿಲ್ಪಾ ಹಾಗೂ ರಾಜ್ ಅವರ ನಿಶ್ಚಿತಾರ್ಥ ನಡೆಯಲಿದೆ.

ಶಿಲ್ಪಾ ಶೆಟ್ಟಿ ಅವರ ಜುಹು ನಿವಾಸದಲ್ಲಿ ನಾಳೆ ಪೋಷಕರು ಹಾಗೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಲಿದೆ. 2007ರಿಂದಲೇ ಶಿಲ್ಪಾ ಹಾಗೂ ರಾಜ್ ಕುಂದ್ರಾ ನಡುವೆ ಪ್ರೀತಿಯ ಮೊಳಕೆಯೊಡೆದು ಈಗ ಹೆಮ್ಮರವಾಗಿದೆ. ಕಳೆದ ಆರೇಳು ತಿಂಗಳುಗಳ ಹಿಂದಿನಿಂದಲೇ ಶಿಲ್ಪಾ ಮದುವೆ ಈ ವರ್ಷಾಂತ್ಯದೊಳಗೆ ನಡೆಯುತ್ತದೆ ಎಂಬ ಊಹಾಪೋಹಗಳೆದ್ದಿದ್ದರೂ, ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳಾಗಿದ್ದರೂ, ಶಿಲ್ಪಾ ಈ ವರ್ಷಾಂತ್ಯದಲ್ಲಿ ಮದುವೆ ಇಲ್ಲ. ಮದುವೆಯಾಗುವ ದಿನಾಂಕ ನಿಗದಿಯಾದ ಮೇಲೆ ನಾನೇ ಪ್ರಕಟಿಸುತ್ತೇನೆ ಎಂದಿದ್ದರು. ಈಗ ನಿಶ್ಚಿತಾರ್ಥ ಹೊರಬಿದ್ದಿದ್ದು ಇನ್ನೂ ಮದುವೆಯ ದಿನಾಂಕ ಹೊರಬಿದ್ದಿಲ್ಲವಾದರೂ, ಮೂಲಗಳ ಪ್ರಕಾರ ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ.

Raj Kundra, Shilpa Shetty
IFM
ಲಂಡನ್‌ನಲ್ಲಿ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜೇಡ್ ಗುಡಿ ಜತೆಗೆ ವಿವಾದವೆಬ್ಬಿಸಿ ಎಲ್ಲರ ಅನುಕಂಪ ಗಿಟ್ಟಿಸಿಕೊಂಡ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಮಿಂಚಿದ್ದಕ್ಕಿಂದ ಆ ಶೋನಲ್ಲಿ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ವಲಯದಲ್ಲಿ ಬಾಲಿವುಡ್ ಮುಖವಾಣಿಯಾಗಿಯೇ ಗುರ್ತಿಸಿಕೊಂಡರು. ಅದಾದ ನಂತರ ತನ್ನದೇ ಹೆಸರಿನ ಬ್ರ್ಯಾಂಡ್‌ನ ಸುಗಂಧವನ್ನು ಬಿಡುಗಡೆ ಮಾಡುವ ಸಂದರ್ಭ ಸುಗಂಧ ವಸ್ತುಗಳ, ಅತ್ಯಮೂಲ್ಯ ಹರಳುಗಳ ಉದ್ಯಮವನ್ನು ಹೊಂದಿರುವ ರಾಜ್ ಕುಂದ್ರಾರನ್ನು ಪರಿಚಯವಾಗಿತ್ತು. ಇತ್ತ ಶಿಲ್ಪಾ ಪರಿಚಯವಾದಾಗ, ಅತ್ತ ರಾಜ್ ಕುಂದ್ರಾರ ವೈವಾಹಿಕ ಜೀವನ ಮುರಿದು ಬಿದ್ದು ವಿಚ್ಛೇದನದಲ್ಲಿ ಅಂತ್ಯವೂ ಆಯ್ತು. ಈ ಹಿಂದೆ ರಾಜ್ ಅವರನ್ನು ಶಿಲ್ಪಾಳಿಗೆ ಒಲಿಯಲು ಕಾರಣವೇನು ಎಂದಾಗ ಅವರು ಶಿಲ್ಪಾಳ ಸುಗಂಧವೇ (ಸುಗಂಧದ ಬ್ರ್ಯಾಂಡ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭ) ನನ್ನನ್ನು ಆಕೆಯೆಡೆಗೆ ಸೆಳೆಯಿತು ಎಂದಿದ್ದರು!!! ಹಾಗೆ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾರ ತೆಕ್ಕೆಯಲ್ಲಿ ಹಿತವಾಗಿ ಕಾಲ ಕಳೆಯಲು ಆರಂಭಿಸಿದಳು.

ಈಗ್ಗೆ ಕೆಲ ತಿಂಗಳ ಹಿಂದೆ ಲಂಡನ್‌ನಲ್ಲಿ ಭಾರೀ ಬಂಗಲೆಯನ್ನೇ ಖರೀದಿಸಿ ತಾನು ರಾಜ್ ಮದುವೆಯಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳುವ ಸುಳಿವನ್ನೂ ಶಿಲ್ಪಾ ನೀಡಿದ್ದಳು. ಈಗ ಅವೆಲ್ಲವಕ್ಕೂ ಅಧಿಕೃತ ಸಹಿ ಬೀಳಲಿದೆ. ಶನಿವಾರ (ಅ.24) ಹಿಂದೂ ಕ್ಯಾಲೆಂಡರ್ ಪ್ರಕಾರ ಅತ್ಯಪೂರ್ವ ದಿನವೆಂದು ಪುರೋಹಿತರು ಹೇಳಿದ್ದರಿಂದ ಶಿಲ್ಪಾ ಹಾಗೂ ರಾಜ್ ಅದೇ ದಿನ ತಾವು ನಿಶ್ಚಿತಾರ್ಥ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಿಶ್ಚಿತಾರ್ಥದಲ್ಲಿ ಶಿಲ್ಪಾ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸೀರೆಯುಟ್ಟು ಕಂಗೊಳಿಸಲಿದ್ದಾರೆ. ಈ ನಿಶ್ಚಿತಾರ್ಥ ಸಂಪೂರ್ಣ ಖಾಸಗಿ ಸಮಾರಂಭವಾಗಿದ್ದು, ಕೇವಲ ಕುಟುಂಬದ ಆತ್ಮೀಯ ನೆಂಟರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನವಿದೆ ಎನ್ನಲಾಗಿದೆ.

ರಾಜ್ ಕುಂದ್ರಾರ ಅಪ್ಪ-ಅಮ್ಮ ಲಂಡನ್‌ನಿಂದ ಮುಂಬೈಗೆ ಬಂದಿದ್ದಾರೆ. ಆದರೆ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ಮಾತ್ರ ಅತ್ತ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವುದರಿಂದ ಸೆಟ್‌ನಿಂದ ಹೊರಬರುವಂತಿಲ್ಲ. ಹಾಗಾಗಿ ತಂಗಿಯ ಗೈರುಹಾಜರಿಯಲ್ಲಿ ಶಿಲ್ಪಾ ತನ್ನಿನಿಯ ರಾಜ್ ಕೈಗೆ ಉಂಗುರ ತೊಡಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಲ್ಪಾ ಶೆಟ್ಟಿ, ಬಾಲಿವುಡ್, ರಾಜ್ ಕುಂದ್ರಾ, ಬಿಗ್ ಬ್ರದರ್