ಹೃತಿಕ್ ರೋಷನ್ ಎಂಬ ಸುಂದರ ವಿವಾಹಿತ ಇನ್ನೂ ಹದಿಹರೆಯದ ಮನಸ್ಸುಗಳಲ್ಲಿ ಅಜರಾಮರವಾಗಿ ಕೂತ ನಟ ಎಂದರೆ ತಪ್ಪಾಗಲಾರದು. ವಿವಾದಗಳಿಂದ, ಗಾಸಿಪ್ಪುಗಳಿಂದ ದೂರವಿರುವ ಡೀಸೆಂಟ್ ನಟ ಎಂದೇ ಹೆಗ್ಗಳಿಕೆ ಪಡೆದಿದ್ದ ಹೃತಿಕ್‌ಗೆ ಕೂಡಾ ಮೊನ್ನೆ ಮೊನ್ನೆ ಗಾಸಿಪ್ ಭೂತ ಬಲವಾಗಿ ಕಾಡಿತ್ತು. ಕಿಡಿಯಿಲ್ಲದೆ, ಬೆಂಕಿ ಹತ್ತಿಕೊಳ್ಳೋದಾದ್ರೂ ಹೇಗೆ ಅಂತಾರಲ್ಲಾ, ಹಾಗೆ. ಒಟ್ಟಾರೆ ಪತ್ನಿ ಪ್ರಿಯ, ಏಕಪತ್ನೀ ವೃತಸ್ಥ ಎಂದೆಲ್ಲಾ ಗುರುತಿಸಿಕೊಂಡಿದ್ದ ಬಾಲಿವುಡ್ಡಿನ ಈ ಸುಂದರನ ಹೆಸರು ಕೆಲವು ತಿಂಗಳ ಹಿಂದೆ ಮೆಕ್ಸಿಕೋದ ಹಾಟ್ ಬೆಡಗಿ ಬರ್ಬರಾ ಮೋರಿ ಜೊತೆಗೆ ಥಳುಕು ಹಾಕಿಕೊಂಡಿದ್ದು ಗೊತ್ತೇ ಇದೆ. ಇಂತಿಪ್ಪ ಸಂದರ್ಭ ಮೊನ್ನೆ ಮೊನ್ನೆ ನಡದ ಹೃತಿಕ್ ಬರ್ತ್‌ಡೇ ದಿನ ಸಲ್ಮಾನ್ ಖಾನ್ ಹೃತಿಕ್‌ಗೆ ಹಿರಿಯಣ್ಣನಂತೆ ಉಪದೇಶ ಮಾಡಿದ್ದಾನೆ. ಅದೇನು ಗೊತ್ತೇ? ''ಪತ್ನಿಯನ್ನು ಪ್ರೀತಿ ಮಾಡಿಕೊಂಡು ಆಕೆಯನ್ನೇ ನೆಚ್ಚಿಕೊಂಡಿರು. ಅದ್ಯಾವಳೋ ಹುಡುಗಿಯ ಸೆರಗಿಗೆ ಬೀಳಬೇಡ. ನನ್ನ ಮಾತ ಮೀರಿ ನೀನು ಎಲ್ಲಾದರೂ ಬೇರೆ ಹುಡುಗಿಯ ಹಿಂದೆ ಹೋದೀಯೋ, ಆಮೇಲೆ ನಾನು ನಿನ್ನಲ್ಲಿ ಮಾತಾಡೋದೇ ಇಲ್ಲ..!''
ಅಬ್ಬಾ..! ಅರೆರೆ, ಸಲ್ಮಾನ್ ಖಾನ್ ಎಂಬ ಬ್ಯಾಡ್ ಬಾಯ್ (ಕು)ಖ್ಯಾತಿಯ ನಟ ಹೀಗೂ ಉಪದೇಶ ನೀಡುತ್ತಾನಾ? ಎಂದು ಹುಬ್ಬೇರಿಸಬೇಡಿ. ಹೌದು. ಇದು ನಿಜ. ಹೃತಿಕ್ ತನ್ನ ಬರ್ತ್‌ಡೇ ಪಾರ್ಟಿಗೆ ಸಲ್ಮಾನ್ ಖಾನ್‌ಗೆ ಆಹ್ವಾನ ನೀಡಿದ್ದರೂ ಸಲ್ಮಾನ್ ಹೋಗಿರಲಿಲ್ಲ. ಪಾರ್ಟಿಗೆ ಶಾರುಖ್ ತನ್ನ ಪತ್ನಿಯ ಜೊತೆಗೆ ಬರುತ್ತಾನೆ ಎಂಬ ಕಾರಣಕ್ಕೆ ಸಲ್ಮಾನ್ ಹೋಗಿಲ್ಲ ಎಂದು ಅಂತೆಕಂತೆಗಳಿದ್ದರೂ, ಸಲ್ಮಾನ್ ನೀಡೋದು ಬೇರೆಯ ಕಾರಣ.
IFM
ಅದೇನೇ ಇರಲಿ. ಬರ್ತ್‌ಡೇಗೆ ಹೋಗಲಾಗಲಿಲ್ಲವಾದರೇನಂತೆ, ಫೋನ್ ಮಾಡಿ ಶುಭಾಷಯ ಕೋರಬಹುದು ಅಲ್ವೇ. ಸಲ್ಮಾನ್ ಮಾಡಿದ್ದೂ ಅದನ್ನೇ. ಹೃತಿಕ್‌ಗೆ ಫೋನ್ ಮಾಡಿ ಶುಭಾಷಯ ಹೇಳಿದ. ಅಷ್ಟೇ ಅಲ್ಲ, ಉಭಯ ಕುಶಲೋಪರಿ ಮಾತಾಡಿ, ನಂತರ ನಿನ್ನ ಹೆಸರಿನ ಜೊತೆಗೆ ಇತ್ತೀಚೆಗೆ ಬರ್ಬರಾ ಮೋರಿಯ ಹೆಸರೂ ಕೇಳಿ ಬರ್ತಿದೆ. ಸ್ವಲ್ಪ ಹುಷಾರಾಗಿರು. ಬೆಂಕಿಯಿಲ್ಲದೆ ಹೊಗೆಯಾಡಲ್ಲ. ನೀನು ನಿನ್ನ ಹೆಂಡತಿಗೆ ನಿಷ್ಟನಾಗಿರೋದೇ ತುಂಬ ಒಳ್ಳೇದು. ಆಕೆಯ ಬಗ್ಗೆ ಕೇರ್ ತೆಗೋ, ತುಂಬ ಪ್ರೀತಿ ಮಾಡು. ಆ ಮೋರಿಯ ಸಹವಾಸ ಬಿಡದಿದ್ದರೆ ನೋಡು, ನಾನು ಖಂಡಿತಾ ನಿನ್ನಲ್ಲಿ ಮಾತಾಡಲ್ಲ. ನಾನು ನಿನ್ನ ಅಣ್ಣನೆಂಬ ಭಾವನೆಯಿಂದ ಹೀಗೆ ಹೇಳಿದ್ದೇನೆ ಎಂದು ಸಲ್ಮಾನ್ ಖಾನ್ ಹೃತಿಕ್‌ಗೆ ಬುದ್ಧಿಮಾತು ಹೇಳಿದನಂತೆ.
ಸಲ್ಮಾನ್‌ಗೆ ಹೃತಿಕ್ ಎಂದರೆ ತುಂಬಾ ಇಷ್ಟವಂತೆ. ತನ್ನ ತಮ್ಮನಂತೆಯೇ ಹೃತಿಕ್‌ನನ್ನೂ ನಡೆಸಿಕೊಳ್ಳುವ ಸಲ್ಮಾನ್ ಯಾವಾಗಲೂ ಹೃತಿಕ್ ಜತೆಗೆ ಖಾಸಗಿ ವಿಚಾರಗಳನ್ನೂ ಹಂಚಿಕೊಳ್ಳುತ್ತಾನಂತೆ. ಆತನ ಸಮಸ್ಯೆಗಳಿಗೂ ಪರಿಹಾರ ನೀಡುತ್ತಾನಂತೆ. ಆದರೆ ಬಾಲಿವುಡ್ಡಿನ ಮಂದಿಯೆಲ್ಲಾ, ಸಲ್ಮಾನ್ ತಾನು ಮದುವೆಯಾಗೋದಕ್ಕೆ ಮೀನ ಮೇಷ ಎಣಿಸುತ್ತಿರುವಾಗ ಇಷ್ಟೊಂದು ಉಪದೇಶಾಮೃತ ಹೇಳೋದು ನೋಡಿ ಮುಸಿ ಮುಸಿ ನಗ್ತಿದಾರಂತೆ.