ಮುಖ್ಯ ಪುಟ  ಮನರಂಜನೆ > ಬಾಲಿವುಡ್‌ > ಸಿನಿಮಾ ಮುನ್ನೋಟ
 
ಬಿಡುಗಡೆಗೆ ಸಿದ್ಧ - ಅಮೀರ್ ಖಾನ್‌ರ "ತಾರೇ..."
PTI
ಅಮೀರ್ ಖಾನ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿರುವ "ತಾರೇ ಜಮೀನ್ ಪರ್" ಡಿಸೆಂಬರ್ 21ರಂದು ಬಿಡುಗಡೆಯಾಗಲಿದೆ. ನಟನೆ, ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಅಮೀರ್ ಮೇಲಿದೆ. ಅಮೀರ್ ಖಾನ್ ಉಳಿದ ಬಾಲಿವುಡ್ ನಟರಿಗಿಂತ ಭಿನ್ನ. ಲಗಾನ್ ನಂತರ ಅವರ ಬ್ಯಾನರ್ ಅಡಿಯಲ್ಲಿ ಗಟ್ಟಿ ಕಥಾವಸ್ತು ಹೊಂದಿರುವ ಚಿತ್ರಗಳೇ ಬಂದಿವೆ. ವರ್ಷಕ್ಕೆ ಸರಾಸರಿ ಒಂದೋ ಇಲ್ಲ ಎರಡು ಮಾತ್ರ ಅವರ ಬ್ಯಾನರ್ ಅಡಿಯಲ್ಲಿ ಚಿತ್ರ ಬರುವುದು ಸಹಜ. ಕಳೆದ ಬಾರಿ ಬಾಲಿವುಡ್‌ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಫನಾ ಮತ್ತು ರಂಗ್‌ದೇ ಬಸಂತಿ ಚಿತ್ರಗಳು.
IFM

ಈ ಬಾರಿ ಅವರ ಬ್ಯಾನರ್ ಅಡಿಯಲ್ಲಿ ತಮಿಳಿನ ಗಜನಿ ಮತ್ತು ತಾರೆ ತಾರೇ ಜಮೀರ್ ಪರ್ ನಿರ್ಮಾಣವಾಗುತ್ತಿವೆ. ಪ್ರಸೂನ್ ಜೋಷಿಯವರ ಗೀತೆ ರಚನೆಗೆ ಖ್ಯಾತ ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಹಿನ್ನಲೆ ಸಂಗೀತ ಮತ್ತು ರಾಗ ಸಂಯೋಜಿಸಿದ್ದಾರೆ ಅಲ್ಲದೇ, ಕೆಲ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಮಹಾದೇವನ್ ಅವರೊಂದಿಗೆ ರಮಣ್ ಮಹಾದೇವನ್, ಶಾನ್, ಅಮೀರ್ ಖಾನ್, ಶಂಕರ್ ಸಚ್‌ದೇವ್, ಅಮೋಲ್ ಗುಪ್ತೆ, ಲಾಯ ಮೆಂಡೊಂಕಾ ಧ್ವನಿ ನೀಡಿದ್ದಾರೆ.

ಇತರ ಬಳಗ
ಸಿನೇಮಾಟೊಗ್ರಾಫಿ : ಸೇತು
ನೃತ್ಯ ನಿರ್ದೇಶನ: ಶಿಯಾಮಕ್ ದೇವ್ರಾ
ಧ್ವನಿ : ನಕುಲ್ ಕಮತೆ
IFM

ಕಿರು ಪರಿಚಯ:
ಅಚ್ಚರಿಗಳಿಂದ ಎಂಟು ವರ್ಷದ ಬಾಲಕ ಇಶಾನ್ ಅವಸ್ಥಿಯ ಜಗತ್ತು ತುಂಬಿರುತ್ತದೆ. ಹೋಮ್ ವರ್ಕ್ ಮಾರ್ಕ್ಸು, ಶಿಸ್ತುಗಳಲ್ಲಿ ಸಮವಯಸ್ಕರು ಮುಳುಗಿದ್ದರೆ, ಇವನದು ಮಾತ್ರ ಬಣ್ಣದ ಮೀನು, ನಾಯಿ, ಬೆಕ್ಕು, ಗಾಳಿ ಪಟಗಳಲ್ಲಿ ಮುಳುಗಿದ ಜೀವನ. ಶಾಲೆಗೆ ಸರಿಯಾಗಿ ಹೋಗುವುದಕ್ಕೆ ಸಿದ್ಧನಿಲ್ಲದ ಇಶಾನ್‌ಗೆ ಮುಂದೆ ಏನಾಗುತ್ತದೆ ಗೊತ್ತಾ ? ಹಾಸ್ಟೆಲ್‌ಗೆ ವರ್ಗಾವಣೆ. ಇಲ್ಲಿಂದ ಕಥೆ ಪ್ರಾರಂಭ.

ಶಿಸ್ತು ಕಲಿಸುವುದಕ್ಕೆ ಅಮ್ಮ- ಅಪ್ಪ ಇಶಾನ್‌ನ್ನು ಹಾಸ್ಟೆಲಿಗೆ ಬಿಡುತ್ತಾರೆ. ಸಮಸ್ಯೆ ಪ್ರಾರಂಭವಾಗುವುದೇ ಇಲ್ಲಿಂದ. ಕಾಡುವ ಅಗಲಿಕೆಯ ನೆನಪುಗಳಲ್ಲಿ ಇಶಾನ್ ಮತ್ತಷ್ಟು ಹಠಮಾರಿಯಾಗುತ್ತಾನೆ

ಒಂದು ದಿನ ರಾಮ್ ಶಂಕರ್ ನಿಕುಂಭ್ ( ಅಮೀರ್ ಖಾನ್) ಕಲಾ ಶಿಕ್ಷಕನಾಗಿ ಬರುತ್ತಾನೆ. ಶಾಲಾ ಮಕ್ಕಳಲ್ಲಿ ಹೊಸ ಭರವಸೆಯನ್ನು ತನ್ನ ಕಲಿಕೆ ವಿಧಾನದ ಮೂಲಕ ನೀಡುತ್ತಾನೆ. ವಿದ್ಯಾರ್ಥಿಗಳನ್ನೇ ಕಲಿಕಾ ಸಾಧನವನ್ನಾಗಿ ಬಳಕೆ ಮಾಡಿಕೊಳ್ಳುತ್ತಾನೆ, ವಿದ್ಯಾರ್ಥಿಗಳಿಗೆ ಕಲ್ಪನಾ ಜಗತ್ತಿನ ಪರಿಚಯ ಮಾಡಿಕೊಡುವುದರ ಮೂಲಕ ನೂತನವಾದ ರೀತಿಯಲ್ಲಿ ಶಿಕ್ಷಣ ನೀಡಲು ಆರಂಭಿಸುತ್ತಾನೆ. ಆದರೆ ಇಶಾನ್ ಮಾತ್ರ ಇವೆಲ್ಲವುಗಳಿಂದ ದೂರ. ನಿಕುಂಭ್‌ಗೆ ಇಶಾನ್ ಪರಿಸ್ಥಿತಿ ಅರಿವಾಗುತ್ತದೆ. ಅಂತಿಮವಾಗಿ ನಿಕುಂಭ್, ಇಶಾನ್‌ಗೆ ಯಾವ ರೀತಿ ಸಹಾಯ ಹಸ್ತ ಚಾಚುತ್ತಾನೆ ಎಂಬುದನ್ನು ತೆರೆಯ ಮೇಲೆ ವೀಕ್ಷಿಸಬಹುದು.
ಮತ್ತಷ್ಟು
ಗುರುದತ್ ಜೀವನಾಧಾರಿತ " ಖೋಯಾ ಖೋಯಾ ಚಾಂದ್ "
ಆಜಾ ನಾಚ್‌ಲೆ ಮಾಧುರಿಯ ಮತ್ತೊಂದು ಝಲಕ್
ಸಾವರಿಯಾ, ಓಂ ಶಾಂತಿ..: ದೀಪಾವಳಿ ಧಮಾಕ
ಅಕ್ಷಯ್-ಕತ್ರೀನಾ ಜೋಡಿಯ ಮೋಡಿ
ಸದಭಿರುಚಿಯ ಚಿತ್ರ ಧೋಖಾ
ಗಾಂಧಿ ಮೈ ಫಾದರ್ ಬಿಡುಗಡೆಗೆ ಸಿದ್ಧ