ಮುಖ್ಯ ಪುಟ  ಮನರಂಜನೆ > ಬಾಲಿವುಡ್‌ > ಸಿನಿಮಾ ಮುನ್ನೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೋಬಿಜ್ ಪ್ರಸಿದ್ಧಿಯ ಇನ್ನೊಂದು ಮುಖ
IFM
ಬಹುಶಃ ಇದು ಬಾಲಿವುಡ್‌ ಜಗತ್ತಿನಲ್ಲಿ ವಿಚಿತ್ರ ಕಥೆ ಎಂದು ಹೇಳಬಹುದು ಏನೋ ? ರಾಜು ಖಾನ್ ನಿರ್ದೇಶನದಲ್ಲಿ ಚಿತ್ರೀಕರಣವಾಗುತ್ತಿರುವ ಶೋಬಿಜ್. ಒಂದು ರೀತಿಯಲ್ಲಿ ಮಧುರ್ ಭಂಡಾರ್ಕರ್ ಅವರ ಪೇಜ್-3 ಚಿತ್ರವನ್ನು ಹೋಲಬಹುದು ಆದರೂ ಚಿತ್ರದಲ್ಲಿ ಬರುವ ವೇಶ್ಯೆ ಮತ್ತು ಪ್ರಸಿದ್ಧಿಗೆ ಬಂದ ಖ್ಯಾತ ನಟ ಮತ್ತು ಅವನ ಹಿಂದೆ ಬಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಯ ಪಾಪಾರಜ್ಜಿಗಳು ಮತ್ತು ವೇಶ್ಯೆಯ ಸಾವಿನ ನಂತರ ಸೇಡಿಗೆ ತಹತಹಿಸುವ ಕಥೆಯೇ ಶೋ ಬಿಜ್. ಹಾಗಿದ್ದರೆ ನಾಯಕ ಯಾರ ವಿರುದ್ಧ ಸೇಡಿಗೆ ತಹ ತಹಿಸುತ್ತಾನೆ ಎನ್ನುವುದೇ ಚಿತ್ರದ ಕಥಾ ವಸ್ತು.

ರೋಹಣ್ (ತುಷಾರ್ ಜಲೋಟಾ) ಜೀವನದಲ್ಲಿ ತಾನು ಎಣಿಸಿದ, ಬಯಸಿದ್ದೆಲ್ಲವನ್ನೂ ಪಡೆದುಕೊಂಡವ. ಪ್ರಸಿದ್ಧಿ, ಹಣ, ಖ್ಯಾತಿ, ಸುಂದರಿಯಾದ ಗೆಳತಿ, ಎಲ್ಲವೂ ಇದೆ. ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ ಸಮಯದಲ್ಲಿ ಎದುರಾಗುವ ಕಷ್ಟಗಳನ್ನು ರೋಹಣ್ ಹೇಗೆ ಎದುರಿಸುತ್ತಾನೆ ? ಎನ್ನುವುದನ್ನು ವಿಭಿನ್ನ ಶೈಲಿಯಲ್ಲಿ ನಿರೂಪಿಸಲಾಗಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ರೋಹಣ್ ಆರ್ಯನ ಹಿಂದೆ ಗಾಸಿಪ್ ಪತ್ರಕರ್ತರು ಹಿಂದೆ ಬೀಳುತ್ತಾರೆ. ಅವರ ಕೈಗೆ ಸಿಗದೇ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿರುತ್ತದೆ. ರೋಹಣ್ ಆರ್ಯ, ತಾರಾ ಎನ್ನುವ ವೇಶ್ಯೆಯ ಹುಡುಕಾಟದಲ್ಲಿ ಇರುತ್ತಾನೆ. ಈ ಸುದ್ದಿಹೇಗೋ ವಿವಾದ ಹುಟ್ಟು ಹಾಕುವ ಟ್ಯಾಬ್ಲಾಯ್ಡ್ ಪಾಪಾರಜ್ಜಿ ತಲುಪುತ್ತದೆ. ತಾರಾಳನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ರೋಹಣ್ ಮಿಂಚಿನ ವೇಗದಲ್ಲಿ ಗಾಡಿ ಓಡಿಸುತ್ತಾನೆ. ಮೈನವಿರೇಳಿಸುವ ಚೇಸಿಂಗ್‍ನಲ್ಲಿ ರೋಹಣ್ ಅಪಘಾತಕ್ಕೆ ಈಡಾಗುತ್ತಾನೆ. ಅವನೊಂದಿಗೆ ತಾರಾ ಅಫಘಾತದ ಆಘಾತಕ್ಕೆ ಸಿಲುಕಿ ಕೋಮಾ ಸ್ಥಿತಿಗೆ ಹೋಗುತ್ತಾಳೆ. ತಾರಾ ಯಾರು ? ತಾರಾಳಿಗೂ ಇವನಿಗೂ ಏನು ಸಂಬಂಧ ?

ಕವಲು ದಾರಿಯಲ್ಲಿ ನಿಂತಿರುವ ರೋಹಣ್ ಏನು ಮಾಡುತ್ತಾನೆ. ಕಾನೂನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆಯೇ ? ನ್ಯಾಯ ಅವನಿಗೆ ದೊರೆಯುತ್ತದೆಯೇ ? ಮಾಧ್ಯಮದ ಇನ್ನೊಂದು ಕರಾಳ ಮುಖವನ್ನು ಬಯಲಿಗೆ ತರುತ್ತಾನೋ ಅಥವಾ ಪಾಪಾರಜ್ಜಿಗಳು ಈ ಬಾರಿಯೂ ತಪ್ಪಿಸಿಕೊಳ್ಳುತ್ತಾರೊ?

ಕಥೆಯ ಯಾವುದೋ ಒಂದು ಮೂಲೆ ಡಯಾನಾ ಮತ್ತು ಅಲ್ ದೋದಿ ಫಯಾದ್ ಅಪಘಾತವನ್ನು ನೆನಪಿಸುತ್ತದೆ.
ಮತ್ತಷ್ಟು
ಬಿಡುಗಡೆಗೆ ಸಿದ್ಧ - ಅಮೀರ್ ಖಾನ್‌ರ "ತಾರೇ..."
ಗುರುದತ್ ಜೀವನಾಧಾರಿತ " ಖೋಯಾ ಖೋಯಾ ಚಾಂದ್ "
ಆಜಾ ನಾಚ್‌ಲೆ ಮಾಧುರಿಯ ಮತ್ತೊಂದು ಝಲಕ್
ಸಾವರಿಯಾ, ಓಂ ಶಾಂತಿ..: ದೀಪಾವಳಿ ಧಮಾಕ
ಅಕ್ಷಯ್-ಕತ್ರೀನಾ ಜೋಡಿಯ ಮೋಡಿ
ಸದಭಿರುಚಿಯ ಚಿತ್ರ ಧೋಖಾ