ವಿಶ್ವಾದ್ಯಂತ ವೀಕ್ಷಕರ ಮನಗೆದ್ದು ಧಾರ್ಮಿಕ ಭಾವನೆಗಳನ್ನು ಉದ್ದೀಪನಗೊಳಿಸಿದ್ದ ರಾಮಾಯಣ ಮತ್ತೊಮ್ಮೆ ಕಿರುತೆರೆಯಲ್ಲಿ ಬರಲಿದೆ. ಆದರೆ ಇದು ಸಂಪೂರ್ಣ ರಾಮಾಯಣವಲ್ಲ, ಇದು ಸೀತಾಯಣ!ಈ ಸೀತಾಯಣದ ಕಥನವೇ ಹೊಸ ರಾಮಾಯಣದ ವಿಶಿಷ್ಟ ಲಕ್ಷಣ ಎನ್ನುತ್ತಾರೆ ಮುಂಬರುವ ದಿನಗಳಲ್ಲಿ ಕಿರುತೆರೆಯಲ್ಲಿ ಕಾಣಲಿರುವ ರಾಮಾಯಣದ ನಿರ್ಮಾಪಕ, ನಿರ್ದೇಶಕ ಪ್ರೇಮ್ ಸಾಗರ್.ಈ ಬಾರಿ ರಾಮಾಯಣದಲ್ಲಿ ವಿಶೇಷ ಕಥನ ಒಳ್ಳಗೊಳ್ಳಲಿದೆ. ಅದೆಂದರೆ ಹಿಂದಿನದರಲ್ಲಿ ತಪ್ಪಿಹೋಗಿದ್ದ ಸೀತೆಯ ಬಾಲ್ಯದ ಬದುಕು ಎಂದು ದೂರದರ್ಶನದ ರಾಮಾಯಣ ನಿರ್ದೇಶಕ ರಮಾನಂದ ಸಾಗರ್ ಅವರ