ಡಾ. ಜಾಕೀರ್ ಹುಸೇನ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾದ ರಜನ್ ಮಾಥುರ್( ಅನಿಲ್ ಕಪೂರ್) ಪತ್ನಿ ರೋಮಾ ಮಾಥುರ್ ( ಶೆಫಾಲಿ ಶಾಹ್ )ಳೊಂದಿಗೆ ಚಾಂದನಿ ಚೌಕ್‌ನಲ್ಲಿ ನೆಲೆಸಿರುತ್ತಾನೆ.
ಮಾಥುರ್‌ಗೆ ಒಂದು ದಿನ ನುಮೇರ್ ಖಾಜಿ ಎನ್ನುವ ಯುವಕನ ಪರಿಚಯವಾಗುತ್ತದೆ. ಖಾಜಿ ತನ್ನನ್ನು ತಾನು ಗುಜರಾತ್‌ನಲ್ಲಿ ನಡೆದ ಕೋಮಗಲಭೆಯ ಸಂತ್ರಸ್ಥ ಎಂದು ಪರಿಚಯಿಸಿಕೊಳ್ಳುತ್ತಾನೆ. ಆದರೆ ಮುಸ್ಲಿಮ್ ಮುಲಭೂತವಾದಿಗಳು ಅಗಸ್ಟ್ 15 ರಂದು ಕೆಂಪುಕೋಟೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲು ನುಮೇರ್ ಖಾಜಿಯನ್ನು ನೇಮಕ ಮಾಡಿರುತ್ತಾರೆ. ಸುಮಾರು ಹದಿನೈದು ದಿನಗಳ ಪರಿಚಯದ ಅವಧಿಯಲ್ಲಿ ಮಾಥುರ್ ದಂಪತಿಗಳಿಗೆ ಖಾಜಿ ತುಂಬಾ ಹತ್ತಿರವಾಗಿ ಅವರ ಮನವನ್ನು ಗೆದ್ದು ಅವರ ಮನೆಯಲ್ಲಿ ವಾಸವಾಗುತ್ತಾನೆ. ನುಮೇರ್‌ನಿಗೆ ಅಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಪ್ರವೇಶ ಪತ್ರ ಪಡೆಯಲು ಸಹಾಯ ಮಾಡಿ ಜಾತ್ಯಾತೀತವಾಗಿ ಆಚರಿಸುವ ಅಗಸ್ಟ್ 15ರ ಮಹತ್ವದ ಕುರಿತಂತೆ ಮಾಹಿತಿ ನೀಡುತ್ತಾನೆ.
ಚಾಂದಿನಿ ಚೌಕ್‌ನಲ್ಲಿ ಭೇಟಿಯಾದ ಆಧುನಿಕ ಮುಸ್ಲಿಮ್ ಯುವತಿ ಶಗುಫಾ ಹಾಗೂ ಪ್ರೋಫೆಸರ್ ಪತ್ನಿ ರೋಮಾ, ಸೂಫಿ ಗಾಯಕ ರಾಹತ್ ಮತ್ತು ತಮಾಷೆ, ಪ್ರೀತಿಯನ್ನು ತೋರುತ್ತಾ ನಗಿಸುವ ಕೀರ್ತನ್ ಸಿಂಗ್ ಅವರುಗಳ ಮಧ್ಯೆ ಕಳೆದುಹೋಗಿದ್ದರೂ ಮುಖಂಡರ ಆದೇಶದಂತೆ ಕೆಂಪುಕೋಟೆಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಯೋಜನೆಗಳನ್ನು ರೂಪಿಸುತ್ತಿರುತ್ತಾನೆ.
ಒಂದೇಡೆ ಜನರ ಪ್ರೀತಿ ಮತ್ತೊಂದೇಡೆ ಉಗ್ರಮತಾಂಧತೆಯ ಮಧ್ಯೆ ತೊಳಲಾಟ ನಡೆಸಿ ಭಾವನಾತ್ಮಕ ಬಿಕ್ಕಟ್ಟಿನಲ್ಲಿ ಸಿಲುಕುವ ನುಮೇರ್ ಖಾಜಿ ಆತ್ಮಾಹುತಿ ದಾಳಿ ನಡೆಸುತ್ತಾನೋ ಅಥವಾ ಜನರ ಪ್ರೀತಿಗೆ ತಲೆಬಾಗಿ ಉಗ್ರವಾದಿತ್ವವನ್ನು ತ್ಯಜಿಸುತ್ತಾನೋ ಎನ್ನುವುದನ್ನು ಚಿತ್ರದಲ್ಲಿ ಕಾದು ನೋಡಿ
|