ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸಿನಿಮಾ ಮುನ್ನೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂತ-ಬಾಲಕನ ಹಂಗಾಮ ಭೂತನಾಥ್
IFM
ಚಿತ್ರ: ಭೂತನಾಥ್
ಬ್ಯಾನರ್: ಬಿ.ಆರ್. ಫಿಲಂಸ್
ಬಿಡುಗಡೆ: 09.05.08
ನಿರ್ಮಾಣ: ರವಿ ಚೋಪ್ರಾ
ನಿರ್ದೇಶನ: ವಿವೇಕ್ ಶರ್ಮಾ
ತಾರೆಗಳು: ಅಮಿತಾಬ್ ಬಚ್ಚನ್, ಜೂಹಿ ಚಾವ್ಲ, ಶಾರೂಕ್ ಖಾನ್(ಅತಿಥಿ ನಟ), ಅಮನ್ ಸಿದ್ಧಿಕ್(ಬಾಲನಟ), ಪ್ರಿಯಾಂಶು ಚಟರ್ಜಿ
ಒಬ್ಬ ಬಾಲಕ(ಅಮನ್ ಸಿದ್ಧಿಕ್) ಮತ್ತು ಭೂತ(ಅಮಿತಾಬ್ ಬಚ್ಚನ್)ದ ಒಡನಾಟದ ಚಿತ್ರ ಭೂತನಾಥ್.
IFM


ಪತಿ- ಪತ್ನಿ ಮತ್ತು ಮಗುವಿರುವ ಸಂಸರಾವೊಂದು ಆ ಬಂಗಲೆಗೆ ವಾಸಕ್ಕಾಗಿ ತೆರಳುತ್ತದೆ. ಆದರೆ ಅದು ಭೂತದ ಬಂಗಲೆ ಎಂಬುದು ಅವರಿಗೆ ತಿಳಿದಿರುವುದಿಲ್ಲ.

ಮನೆಯಲ್ಲಿ ಅತಿಮಾನುಷ ಶಕ್ತಿಯೊಂದು ಸುಳಿದಾಡುತ್ತಿದ್ದು, ತನ್ನ ಆಸ್ತಿಗಳ ಮೇಲೆ ಒಡೆತನ ಹೊಂದಿರುತ್ತದೆ. ಈ ಮನೆಗೆ ವಾಸಕ್ಕೆ ಬಂದ ಸಂಸಾರ ತನ್ನ ಸಾಮ್ರಾಜ್ಯವನ್ನು ಅತಿಕ್ರಮಿಸಿದೆ ಎಂದು ಕಿರಿಕ್‌ಗೊಂಡ ಭೂತ ಅವರನ್ನು ಬೆದರಿಸಲು ಯತ್ನಿಸುತ್ತದೆ.

IFM
ಆದರೆ ಭೂತದ ಲೆಕ್ಕಚಾರ ತಪ್ಪಿ ಭೂತ ಮತ್ತು ಬಾಲಕ ಸ್ನೇಹಿತರಾಗುತ್ತಾರೆ. ಭೂತನಾಥದ ಆತ್ಮ ಯಾಕೆ ಅಂಡಲೆಯುತ್ತದೆ ಎಂದು ಕಂಡುಕೊಳ್ಳಲು ಯತ್ನಿಸಿದ ಬಾಲಕ, ಭೂತಕ್ಕೆ ಸದ್ಗತಿ ದೊರೆಯಲು ಸಹಾಯ ಮಾಡುತ್ತಾನೆ.

ಭೂತ ಮತ್ತು ಬಾಲಕನ ಸಹವಾಸ, ಸಾಹಸಗಳನ್ನು ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ.

ಬಾಲಕ ಬಂಕುವಿನ ಅಮ್ಮನಾಗಿ ಸ್ನಿಗ್ಧ ನಗುವಿನ ಚೆಲುವೆ ಜೂಹಿಚಾವ್ಲಾ ಮತ್ತು ಅಪ್ಪನಾಗಿ ಶಾರೂಕ್ ಖಾನ್ ಅಭಿನಯಿಸಿದ್ದು, ಚಿತ್ರ ಮೇ 8ರಂದು ಬಿಡುಗಡೆಯಾಗಲಿದೆ.
ಮತ್ತಷ್ಟು
ಯೂ, ಮಿ ಔರ್ ಹಮ್: ಪ್ರಿಯ-ಅಜಯ್‌ ಪ್ರೇಮಕಥೆ  
ಬ್ಲ್ಯಾಕ್ ಆಂಡ್ ವೈಟ್
ಕಿರುತೆರೆಯಲ್ಲಿ ಹೊಸ ರಾಮಾಯಣವೂ ಸೀತಾಯಣವೂ...
ಶೋಬಿಜ್ ಪ್ರಸಿದ್ಧಿಯ ಇನ್ನೊಂದು ಮುಖ
ಬಿಡುಗಡೆಗೆ ಸಿದ್ಧ - ಅಮೀರ್ ಖಾನ್‌ರ "ತಾರೇ..."
ಗುರುದತ್ ಜೀವನಾಧಾರಿತ " ಖೋಯಾ ಖೋಯಾ ಚಾಂದ್ "