ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » ಹಿಸ್ಸ್: ಇದು ಮಲ್ಲಿಕಾ ಶೆರಾವತಳ ಭಯಾನಕ ರೂಪ! (Hisss | Irrfan Khan | Cobra | snake woman | Mallika Sherawat)
ಸಿನಿಮಾ ಮುನ್ನೋಟ
Feedback Print Bookmark and Share
 
IFM
ಮಲ್ಲಿಕಾ ಶೆರಾವತ್ ಬಗ್ಗೆ ತಲೆಕೆಡಿಸಿಕೊಂಡು ರಾತ್ರಿಯೆಲ್ಲ ಕನಸು ಕಾಣುತ್ತಾ ಪವಡಿಸುತ್ತಿದ್ದ ಪಡ್ಡೆ ಹೈಕಳಿಗೆ ಇನ್ನು ಮುಂದಿನ ರಾತ್ರಿಗಳೂ ಭಯಂಕರವಾಗಿಯೇ ಇರಲಿವೆ! ಮಲ್ಲಿಕಾ ಶೆರಾವತ್‌ಳ ಮಾದಕ ಭಂಗಿಯ ಸುತ್ತ ಕನಸ ಹೆಣೆಯುತ್ತಿದ್ದ ಯುವಕರಿಗೆ ಮಲ್ಲಿಕಾಳ ಭಯಂಕರ ರೂಪ ದಿಢೀರ್ ಪ್ರತ್ಯಕ್ಷವಾಗಿ ರಾತ್ರಿಗಳಲ್ಲಿ ಭಯ ಹುಟ್ಟಿಸಿದರೂ ಆಶ್ಚರ್ಯವಿಲ್ಲ. ಕಾರಣ, ಮಲ್ಲಿಕಾ ಈಗ 'ನಾಗಿನ್' ಅರ್ಥಾತ್ ನಾಗಕನ್ಯೆ!

ಹೌದು. 'ಹಿಸ್ಸ್' ಚಿತ್ರದಲ್ಲಿ ಮಲ್ಲಿಕಾ ನಾಗಕನ್ಯೆಯಾಗಿದ್ದಾಳೆ. ಈವೆರೆಗೆ ಮಲ್ಲಿಕಾಳನ್ನು ಬೇರೆಯೇ ರೂಪದಲ್ಲಿ ನೋಡಿದ ಆಕೆಯ ಅಭಿಮಾನಿಗಳಿಗೆ ಇದೊಂದು ಡಿಫರೆಂಟ್ ಚಿತ್ರ. ಕೋಬ್ರಾ ನಾಗಕನ್ಯೆಯ ಸೇಡು ತೀರಿಸುವ ಕಥಾನಕವನ್ನು ಹೊಂದಿರುವ ಹಿಸ್ಸ್ ಒಂದು ಹಾರರ್ ಚಿತ್ರ.

ನಾಗಕನ್ಯೆ ಬಗ್ಗೆ ಭಾರತದಲ್ಲಿ ಸಾಕಷ್ಟು ದಂತಕಥೆಗಳಿವೆ. ಮಕ್ಕಳೂ ನಾಗಕನ್ಯೆಯರ ಬಗ್ಗೆ ಹುಟ್ಟಿದಾಗಿನಿಂದ ಸಾಕಷಅಟು ಕಥೆಗಳ್ನನು ಕೇಳಿ ಬೆಳೆದಿರುತ್ತಾರೆ. ಇಂಥದ್ದೇ ಒಂದು ದಂತಕಥೆ ಇಲ್ಲಿ ಚಿತ್ರವಾಗಿದೆ. ಕಥೆಯ ಜೀವಾಳ ಅಡಗಿರುವುದು ಮುಯ್ಯಿ ತೀರಿಸಿಕೊಳ್ಳುವ ನಾಗಕನ್ಯೆಯಲ್ಲಿ. 4000 ವರ್ಷಗಳ ಹಿಂದಿನ ನಾಗಕನ್ಯೆಯ ಮೈ ನವಿರೇಳಿಸುವ ದಂತಕಥೆಗಳಂತೆ ಈ ಕಥೆಯೂ ಸಾಗುತ್ತದೆ.

2009ರ ಇಸವಿಯ ಕಾಲಘಟ್ಟದ್ಲಲಿರುವ ಜಾರ್ಜ್ ಸ್ಟೇಟ್ಸ್ ( ಜೆಫ್ ಡಚೆಟ್) ಎಂಬ ಅಮೆರಿಕನ್ ಪ್ರಜೆ ಭಾರತದ ಘೊಂಡಾರಣ್ಯಗಳಲ್ಲಿ ಅಲೆಯುತ್ತಾನೆ. ಆತ ಬಂದ ಉದ್ದೇಶ ವೈಜ್ಞಾನಿಕವಾಗಿ ಘೋರವಾದುದು. ಅರಣ್ಯದ ಮಧ್ಯದಲ್ಲಿ ಒಂದು ಗಂಡುಕೋಬ್ರಾವನ್ನು ಸೆರೆಹಿಡಿದು ಲ್ಯಾಬ್‌ಗೆ ತರುತ್ತಾನೆ. ಅಲ್ಲಿಂದ ಕಥೆಯ ಭಯಾನಕತೆ ಬಿಚ್ಚಿಕೊಳ್ಳುತ್ತದೆ.

IFM
ಒಂದೇ ಸೆಳೆತಕ್ಕೆ ಆಕರ್ಷಕವೆನ್ನುವ ರೂಪದ ಯುವತಿ ಆಕೆ (ಮಲ್ಲಿಕಾ ಶೆರಾವತ್). ಆಕೆಯ ಸೌಂದರ್ಯಕ್ಕೆ ಯಾರಾದರೂ ಒಂದೇ ನೋಟದಲ್ಲಿ ಮಾರುಹೋಗಬಹುದು. ಅಂತಹ ದೀಪ್ಯಮಾನವಾದ ಸೌಂದರ್ಯ ಆಕೆಯದ್ದು. ಆದರೆ ಆಕೆ ನಾಗಕನ್ಯೆಯೆಂಬ ಒಂದೇ ಒಂದು ಸುಳಿವೂ ಆಕೆಯನ್ನು ಮಾನವರೂಪಿಯಾಗಿ ನೋಡುವಾಗ ಗೊತ್ತಾಗುವುದಿಲ್ಲ. ಪ್ರೇಮಿಯನ್ನು ಹುಡುಕಾಡುತ್ತಾ ನಗರಕ್ಕೆ ಬರುವ ನಾಗಕನ್ಯೆ ತನ್ನ ಭಯಂಕರವಾದ ಸೇಡನ್ನು ತೀರಿಸುವ ಜೈತ್ರಯಾತ್ರೆಗೆ ಹೊರಡುತ್ತಾಳೆ.

ಅತಿ ಭಯಂಕರವೆನ್ನುವ ರಕ್ತದ ಕೋಡಿಯನ್ನು ಹರಿಸುವ ಸಾವುನೋವುಗಳ ಜತೆಗೆ ಮೈನಡುಗಿಸುವ, ರೋಮಾಂಚಕ, ಭಯ ಸೃಷ್ಟಿಸುವ ಚಿತ್ರ ಇದಂತೆ. ಅಷ್ಟೇ ಅಲ್ಲದೆ, ಭಾರತದ ಸಿನಿಮಾ ಇತಿಹಾಸದಲ್ಲಿ ಈವರೆಗೆ ಕಂಡಿರದ ಎಫೆಕ್ಟ್‌ನಲ್ಲಿ ಈ ಚಿತ್ರ ಹೊರಬರುತ್ತಿದೆಯಂತೆ. ಇದರಲ್ಲಿ ವಿಕ್ರಮ್ ಗುಪ್ತಾ ಎಂಬ ಭಾರತೀಯನ ಪಾತ್ರದಲ್ಲಿ ಇರ್ಫಾನ್ ಖಾನ್ ಇದ್ದಾರೆ. ದಿವ್ಯಾದತ್ತಾ ಕೂಡಾ ಪಾತ್ರಧಾರಿ. ಆದರೆ ನಾಗಕನ್ಯೆ ಮಲ್ಲಿಕಾ ಎಂಬ ಸೆಕ್ಸೀ ತಾರೆ.

ಈಗಾಗಲೇ ಈ ಚಿತ್ರ ಸಂಪೂರ್ಣಗೊಂಡಿದೆ. ಚಿತ್ರದ ಮೈ ನವಿರೇಳಿಸುವ ಪ್ರೋಮೋ ಕೂಡಾ ಹೊರಬಂದಿದೆ. ಆಂಗ್ಲ ಹಾಗೂ ಹಿಂದೆಯಲ್ಲಿ ಹೊರಬರುವ ಈ ಚಿತ್ರ ಈಗಾಗಲೇ ಸಾಕಷ್ಟು ಪ್ರಚಾರ ಪಡೆದು ಹಲವರಲ್ಲಿ ಕುತೂಹಲ ಸೃಷ್ಟಿಸಿದೆ. ಆದರೆ ಇನ್ನೂ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ.

ಗೋವಿಂದ್ ಮೆನನ್ ಹಾಗೂ ವಿಕ್ರಮ್ ಸಿಂಗ್ ನಿರ್ಮಾಣದ ಈ ಚಿತ್ರವ್ನನು ಜೆನಿಫರ್ ಲಿಂಚ್ ನಿರ್ದೇಶಿಸಿದ್ದಾರೆ. ಸೆಕ್ಸೀ ಬಾಂಬ್ ಮಲ್ಲಿಕಾ ಶೆರಾವತ್, ಇರ್ಫಾನ್ ಖಾನ್, ಜೆಫ್ ಡಚೆಟ್, ದಿವ್ಯಾ ದತ್ತಾ, ರಾಮನ್ ಟ್ರಿಖಾ ತಾರಾಗಣವಿದೆ. ಅನು ಮಲಿಕ್ ಸಂಗೀತವಿದೆ.

ಹಾಂ, ಅಂದಹಾಗೆ, ಮಲ್ಲಿಕಾಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಆಕೆ ಬೆತ್ತಲೆ ದೃಶ್ಯಗಳಲ್ಲಿ ನಟಿಸಲು ಒಪ್ಪಿದ್ದರಿಂದಲೇ ಅಂತ ಸುದ್ದಿಯಾಗಿತ್ತು. ಜತೆಗೆ ಹಿಸ್ಸ್‌ನಲ್ಲಿ ಮಲ್ಲಿಕಾ ಬೇಕಾಬಿಟ್ಟಿಯಾಗಿ ಬೆತ್ತಲೆಯಾದ ದೃಶ್ಯಗಳಿವೆ ಎಂದೂ ಹೇಳಲಾಗುತ್ತಿದೆ. ಹಾಗಾಗಿ ಮಲ್ಲಿಕಾ ಅಭಿಮಾನಿಗಳು ಹೆದರದೆ ಥಿಯೇಟರ್‌ಗೆ ಧಾರಾಳವಾಗಿ ಹೋಗಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಲ್ಲಿಕಾ ಶೆರಾವತ್, ಹಿಸ್, ಕೋಬ್ರಾ, ನಾಗಕನ್ಯೆ, ಇರ್ಫಾನ್ ಖಾನ್