ಕಳೆದ ಒಂದುವರೆ ದಶಕದಿಂದ ಭಾರತದ ಪಡ್ಡೆ ಹೈದರ ಹೃದಯ ಕದ್ದಿರುವ ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕರ್ನಾಟಕ ರಾಜ್ಯದ ಕರಾವಳಿಯ ಕುವರಿಯೆಂದು ಹೇಳಲು ಹೆಮ್ಮೆ ಎನಿಸುತ್ತದೆ.ಪ್ರಸಕ್ತ ಸಾಲಿನ ಬಹು ಬೇಡಿಕೆಯ ಮತ್ತು ವಿವಾದಿತ ತಾರೆಯಾಗಿರುವ ಶಿಲ್ಪಾ ಶೆಟ್ಟಿ ಜನಿಸಿದ್ದು ಮಂಗಳೂರು ಸಮೀಪದ ನಿಡ್ಡೊಡಿಯಲ್ಲಿ 1975ರ ಜೂನ್ 8ರಂದು. ಮಂಗಳೂರು ನೆಲದ ಮಣ್ಣಿನ ಪರಿಸರವೇ ಅಂತಹುದು, ದೇಶದ ಎಲ್ಲ ಪ್ರತಿಷ್ಠಿತ ರಂಗಗಳಲ್ಲಿ ಶ್ರೇಷ್ಠ ಪ್ರತಿಭೆಗಳ ಕಾಣಿಕೆ ನೀಡಿರುವ ಈ ನೆಲದಿಂದ