ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಬಾಲಿವುಡ್ ಹಾಟ್ ಸೆಕ್ಸೀ ಬಿಪಾಶಾ ಚರಿತ್ರೆ (Bipasha Basu | John Abraham | sexy | Bollywood)
ತಾರಾ ಪರಿಚಯ
Feedback Print Bookmark and Share
 
Bipasha Basu
IFM
ಏಷ್ಯಾದ ಅತಿ ಸೆಕ್ಸೀ ಮಹಿಳೆ ಎಂಬ ಬಿರುದಾಂಕಿತ ಬಾಲಿವುಡ್‌ನ ಹಾಟ್ ಸೆಕ್ಸೀ ನಟಿ, ಕಪ್ಪು ಸುಂದರಿ ಬಿಪಾಶಾ ಬಸು 1979ರ ಜನವರಿ 7ರಂದು ಜನಿಸಿದರು. ಬೆಂಗಾಲಿ ಕುಟುಂಬಲ್ಲಿ ನವದೆಹಲಿಯಲ್ಲಿ ಹುಟ್ಟಿದ ಬಿಪಾಶಾಗೆ ಒಬ್ಬ ಅಕ್ಕ ಹಾಗೂ ಒಬ್ಬ ತಂಗಿ ಇದ್ದಾರೆ. ಅಕ್ಕನ ಹೆಸರು ಬಿದಿಶಾ ಹಾಗೂ ತಂಗಿ ವಿಜಯೇತಾ. ನವದೆಹಲಿಯಿಂದ ಬಿಪಾಶಾ ಕುಟುಂಬ ನಂತರ ಕೊಲ್ಕತ್ತಾಗೆ ಮರಳಿತು.

ಬಿಪಾಶಾ ಬಾಲಿವುಡ್ಡಿಗೆ ಬರುವ ಮೊದಲು ಮಾಡೆಲಿಂಗ್ ಮಾಡುತ್ತಿದ್ದಳು. ಆದರೆ ಬಿಪಾಶಾರೇ ಹೇಳುವಂತೆ ಆಕೆ ಮಾಡೆಲಿಂಗ್ ಜಗತ್ತಿಗೆ ಬಂದಿದ್ದು ತೀರಾ ಆಕಸ್ಮಿಕ. ಅದಕ್ಕೂ ಮೊದಲು ಆಕೆ ಡಾಕ್ಟರಾಗಬೇಕೆಂದು ಅಂದುಕೊಂಡಿದ್ದರಂತೆ. ದ್ವಿತೀಯ ಪಿಯುಸಿವರೆಗೆ ವಿಜ್ಞಾನ ವಿಷಯ ಓದಿದ ಬಿಪಾಶಾ, ನಂತರ ತನ್ನ ನಿರ್ಧಾರ ಬದಲಿಸಿ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯದಲ್ಲಿ ಪದವಿಗೆ ಸೇರಿಕೊಂಡರು. ಪದವಿಯ ಸಂದರ್ಭ ಜತೆಜತೆಗೇ ಕೆಲವು ರ‌್ಯಾಂಪ್‌ಶೋಗಳಲ್ಲೂ ಬಿಪಾಶಾ ಭಾಗವಹಿಸಿದಳು. ಹೀಗೆ ಪದವಿಯಲ್ಲಿ ವಾಣಿಜ್ಯ ವಿಷಯ ಆರಿಸಿದ ಮೇಲೆ ತಾನು ಸಿಎ (ಚಾರ್ಟರ್ಡ್ ಅಕೌಂಟೆನ್ಸಿ) ಓದಬೇಕೆಂದು ಬಿಪಾಶಾ ಕನಸು ಕಂಡಳು.ಹೀಗಿರುವಾಗಲೇ ಆಕೆಗೆ ಕೋಲ್ಕೊತ್ತಾದಲ್ಲಿ 1996ರಲ್ಲಿ ಸೂಪರ್ ಮಾಡೆಲ್ ಮೆಹೆರ್ ಜೆಸ್ಸಿಯಾಳನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಜೆಸ್ಸಿಯಾ ಬಿಪಾಶಾಳಿಗೆ ಫೋರ್ಡ್ ಗೋದ್ರೇಜ್ ಸಿಂಥಾಲ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಲಹೆ ನೀಡಿದ್ದರು. ಈ ಸಲಹೆಯನ್ನು ಸ್ವೀಕರಿಸಿದ ಬಿಪಾಶಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನಕ್ಕೆ ಪಾತ್ರಳಾದಳು. ಇದುವೇ ಬಿಪಾಶಾ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು.

ಫೋರ್ಡ್ ಗೋದ್ರೇಜ್ ಸಿಂಥಾಲ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ವಿಜೇತಳಾದುದೇ ತಡ ಬಿಪಾಶಾ ತನ್ನ 17ನೇ ವಯಸ್ಸಿನಲ್ಲೇ ನ್ಯೂಯಾರ್ಕ್‌ಗೆ ಹಾರಿದಳು. ಅಲ್ಲದೆ ನ್ಯೂಯಾರ್ಕ್‌ನಲ್ಲೂ ಹಲವು ರ‌್ಯಾಂಪ್ ಶೋಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದಳು. ಹೀಗ ಮಾಡೆಲಿಂಗ್ ಜಗತ್ತು ಬಾಲಿವುಡ್‌ಗೆ ಕೈಬೀಸಿ ಕರೆಯಿತು.

Young Bipasha Basu
IFM
ಬಿಪಾಶಾಳ ಮೊದಲ ಚಿತ್ರ ಅಜ್‌ನಬೀ. ಅಕ್ಷಯ್ ಕುಮಾರ್, ಬಾಬಿ ಡಿಯಾಲ್ ಹಾಗೂ ಕರೀನಾ ಕಪೂರ್ ಜತೆಗೆ ನಟಿಸಿದ ಬಿಪಾಶಾಗೆ ಈ ಚಿತ್ರದ ನಟನೆಗೆ ಫಿಲಂಫೇರ್ ಪ್ರಶಸ್ತಿಯೂ ಒಲಿಯಿತು.

2002ರಲ್ಲಿ ಬಸು ತೆಲುಗು ಚಿತ್ರ ಟಕ್ಕರಿ ದೋಂಗಾದಲ್ಲಿ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಜತೆಗೆ ನಟಿಸಿದಳು. ನಂತರ ವಿಕ್ರಮ್ ಭಟ್ ಅವರಥ್ರಿಲ್ಲರ್ ರಾಝ್‌ನಲ್ಲಿ ನಟಿಸಿ ಗಮನ ಸೆಳೆದಳು. ರಾಝ್ ಚಿತ್ರ 2002ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ನಂತರ 2003ರಲ್ಲಿ ಹೊರಬಂದ ಜಿಸ್ಮ್ ಕೂಡಾ ಆಕೆಗೆ ಖ್ಯಾತಿಯನ್ನು ತಂದುಕೊಟ್ಟಿತು.

ನಟನೆ ಜತೆಗೆ ಸೋನು ನಿಗಂ ಅವರ ತೂ ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲೂ ಬಿಪಾಶಾ ಕಾಣಿಸಿಕೊಂಡಿದ್ದರು. ಜೇ ಸಿಯಾನ್ ಅವರ ಮ್ಯೂಸಿಕ್ ವಿಡಿಯೋ ಆಲ್ಬಂ ಸ್ಟೋಲನ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಂಗೊಳಿಸಿದ್ದರು. 2006ರಲ್ಲಿ ಈಕೆಗೆ ಇನ್ನೊಂದು ಅದ್ಭುತ ಪ್ರಶಂಸೆ ತಂದುಕೊಟ್ಟ ಚಿತ್ರ ಓಂಕಾರ. ಓಂಕಾರದ ಬೀಡಿ ಜಲೈಲೇ... ಐಟಂ ಹಾಡು ರಾಷ್ಟ್ರೀಯ ಹಿಟ್ ಹಾಡಾಯಿತು. 2008ರಲ್ಲಿ ಬಸು ನಟಿಸಿದ ರೇಸ್‌ ಕೂಡಾ ಹಿಟ್ ಚಿತ್ರವಾಯಿತು. ನಂತರ ಬಚ್‌ನಾ ಎ ಹಸೀನೋ ಚಿತ್ರಕ್ಕೂ ಬಿಪಾಶಾಗೆ ಅತ್ಯುತ್ತಮ ಪ್ರಶಂಸೆಗಳು ಹೊರಬಂದವು. 2009ರಲ್ಲಿ ಬಸು ಈಗ ಹಾಲಿವುಡ್‌ಗೂ ಕದ ತೆರೆದಿದ್ದಾಳೆ.

Bipasha Basu
IFM
ಬಿಪಾಶಾಳ ಖಾಸಗಿ ಬದುಕೂ ಕೂಡಾ ಆಕೆಯಂತೆಯೇ ಹಾಟ್. ಬಿಪಾಶಾ ರಾಝ್ ಚಿತ್ರದ ಸಂದರ್ಭ ಸಹನಟ ದಿನೋ ಮೊರಿಯೋ ಜತೆಗೆ ಗಾಸಿಪ್ ಕಾಲಂಗಳಲ್ಲಿ ಜಾಗ ಪಡೆದರೂ, ಇವರಿಬ್ಬರ ಸಂಬಂಧ ವರ್ಷದೊಳಗೆ ಮುರಿದು ಬಿತ್ತು. ಆಗ ಅಂಟಿಕೊಂಡದ್ದು ಜಿಸ್ಮ್ ಚಿತ್ರದ ಶೂಟಿಂಗ್‌ನಲ್ಲಿ ಸಹನಟ ಜಾನ್ ಅಬ್ರಹಾಂ ಜತೆಗೆ. 2003ರಲ್ಲೇ ಆರಂಭವಾದ ಜಾನ್ ಬಿಪಾಶಾ ರೊಮ್ಯಾಂಟಿಕ್ ಲವ್ ಸ್ಟೋರಿ ಈಗಲೂ ಮುಂದುವರಿದಿದೆ. ಬಾಲಿವುಡ್‌ನ ಹಾಟ್ ಜೋಡಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.

2006ರಲ್ಲಿ ಬಿಪಾಶಾ ನ್ಯೂಜೆರ್ಸಿಯಲ್ಲಿ ನಡೆದ ಇಂಡಿಯಾ ಡೇ ಪೆರೇಡ್‌ನಲ್ಲಿ ವೇದಿಕೆಯಲ್ಲಿ ಮುಖ್ಯಪಾತ್ರವಾಗಿ ಕಾಣಿಸಿಕೊಳ್ಳಲಿದ್ದರು. ಆದರೆ ಕಾರ್ಯಕ್ರಮ ಆರಂಭವಾಗುವ ಮೊದಲು ತಾನು ಇದರಲ್ಲಿ ಪಾಲ್ಗೊಳ್ಳಬೇಕೆಂದಿದ್ದೆ. ಆದರೆ ಈಗ ಭಾಗವಹಿಸಲಾರೆ ಎಂದು ಹೇಳಿ ಎಲ್ಲರಿಗೆ ದಿಗ್ಭ್ರಮೆ ಮೂಡಿಸಿದ್ದರು. ಜತೆಗೆ, ಅದಕ್ಕೆ ಕಾರಣವನ್ನೂ ಬಿಪಾಶಾ ಹೇಳಿದ್ದರು. ಕಾರ್ಯಕ್ರಮಕ್ಕೆ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬರುವಾಗ ಇಬ್ಬರು ವ್ಯಕ್ತಿಗಳನ್ನು ನನ್ನ ಜತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿ ವಿವಾದಕ್ಕೆ ಸಿಲುಕಿದ್ದರು. ಇದಾಗಿ 2007ರಲ್ಲಿ ಖ್ಯಾತ ಫುಟ್‌ಬಾಲ್ ತಾರೆ ರೊನಾಲ್ಡೋ ಜತೆಗೆ ತುಟಿಗೆ ತುಟಿ ಸೇರಿಸಿ ಚುಂಬಿಸಿ ಸುದ್ದಿ ಮಾಡಿದ್ದರು. ಆದರೆ ಬಿಪಾಶಾ ಮಾತ್ರ ನಾನು ತುಟಿಗೆ ತುಟಿ ಸೇರಿಸಿರಲಿಲ್ಲ. ರೊನಾಲ್ಡೋ ನನ್ನ ಬಳಿ ತುಂಬ ಆತ್ಮೀಯವಾಗಿ ಮುಖದ ಬಳಿ ಬಂದು ಪಿಸು ಮಾತನಾಡಿದರು. ಅದನ್ನು ಕಿಸ್ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು. ಆದರೆ ಈಕೆ ಹೇಳಿದ್ದು ಶುದ್ಧ ಸುಳ್ಳು ಎಂದು ಸ್ವತಃ ಜಾನ್‌ಗೂ ಗೊತ್ತಿತ್ತು. ಈ ಸಂದರ್ಭ ಜಾನ್- ಬಿಪಾಶಾ ಸಂಬಂಧ ಬಹುತೇಕ ಖತಂ ಎಂಬ ಸುದ್ದಿಯೂ ಕೇಳಿಬಂದಿದ್ದರೂ ಆಮೇಲೆ ಎಲ್ಲವೂ ಸರಿಯಾಗಿತ್ತು.

2005 ಹಾಗೂ 2007ರಲ್ಲಿ ಬಿಪಾಶಾ ಎರಡು ಬಾರಿ ಏಷ್ಯಾದ ಅತಿ ಸೆಕ್ಸೀ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿದ್ದರು. ಸದ್ಯ ಈಕೆ ಪಂಖ್ ಹಾಗೂ ಆಲ್ ದಿ ಬೆಸ್ಟ್ ಚಿತ್ರದಲ್ಲಿ ಬ್ಯುಸಿ.
John Abraham, Bipasha Basu
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಪಾಶಾ ಬಸು, ಸೆಕ್ಸೀ ಮಹಿಳೆ, ಜಾನ್ ಅಬ್ರಹಾಂ, ಬೆಂಗಾಲಿ, ಬಾಲಿವುಡ್