ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಕತ್ರಿನಾ ಕೈಫ್ ಕಾಲೇಜು ಮೆಟ್ಟಿಲೇ ಹತ್ತಿಲ್ಲ! (Katrina Kaif | Bollywood | New York | Akshay Kumar)
ತಾರಾ ಪರಿಚಯ
Feedback Print Bookmark and Share
 
Katrina Kaif
IFM
ತನ್ನ ಸ್ನಿಗ್ಧ ಸೌಂದರ್ಯ ಹಾಗೂ ಮುಗ್ಧ ನಗುವಿನಿಂದಲೇ ಚಿತ್ರರಸಿಕರ ಮನಸೂರೆಗೊಂಡಿರುವ ಕತ್ರಿನಾ ಕೈಫ್ ಯುವ ಹೃದಯಗಳ ಪಟ್ಟದರಸಿ ಎಂದೇ ಪ್ರಖ್ಯಾತಿ. ಕತ್ರಿನಾ ಭಾರತ ಮೂಲದವಳಾದರೂ ಹುಟ್ಟಿದ್ದು ಹಾಂಗ್‌ಕಾಂಗ್‌ನಲ್ಲಿ 1984ರ ಜುಲೈ 16ರಂದು. ಬೆಳೆದಿದ್ದು ಇಂಗ್ಲೆಂಡ್‌ನಲ್ಲಿ. ಈಗ್ಗೆ ಕೆಲವು ವರ್ಷಗಳಿಂದ ಭಾರತದಲ್ಲಿ ನೆಲೆಯೂರಿ ತನ್ನ ಅಸ್ತಿತ್ವವನ್ನು ಬಾಲಿವುಡ್ಡಿನಲ್ಲಿ ಕಂಡುಕೊಂಡಿದ್ದಾಳೆ.

ಕತ್ರಿನಾ ಕೈಫ್ ಅಪ್ಪ ಕಾಶ್ಮೀರಿ ಮುಸ್ಲಿಂ. ಹೆಸರು ಮಹಮ್ಮದ್ ಕೈಫ್. ಅಮ್ಮ ಬ್ರಿಟೀಷ್ ಕ್ರಿಶ್ಚಿಯನ್ ಸುಸಾನೆ. ಅಮ್ಮ ಸುಸಾನೆ ಓದಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವಿಷಯವನ್ನು. ಆದರೆ ಕತ್ರಿನಾ ಸಣ್ಣವಳಿದ್ದಾಗ ಅಪ್ಪ- ಅಮ್ಮ ಬೇರೆಬೇರೆಯಾದರು. ನಂತರ ಸಣ್ಣವಯಸ್ಸಿನಲ್ಲೇ ಕತ್ರಿನಾ ಅಮ್ಮನ ಜತೆಗೆ ಇಂಗ್ಲೆಂಡ್‌ಗೆ ಬಂದು ನೆಲೆಸಿದಳು. ಕತ್ರಿನಾಗೆ ಏಳು ಸಹೋದರಿಯರಿದ್ದಾರೆ. 14ನೇ ವಯಸ್ಸಿನಲ್ಲೇ ಕತ್ರಿನಾ ಸ್ಕೂಲ್ ಬಿಟ್ಟು ಮಾಡೆಲಿಂಗ್ ಮಾಡಲು ಶುರು ಮಾಡಿದಳು. ಹಾಗಾಗಿ ಕತ್ರಿನಾ ಕಾಲೇಜು ಮೆಟ್ಟಿಲು ಹತ್ತಲೇ ಇಲ್ಲ. ಓದಿದ್ದೂ ಕೇವಲ 14ನೇ ವಯಸ್ಸಿನವರೆಗೆ ಮಾತ್ರ!

ಕತ್ರಿನಾ ಲಂಡನ್‌ನಲ್ಲಿ ಮಾಡೆಲಿಂಗ್ ಮಾಡುತ್ತಿದ್ದಾಗ 2003ರಲ್ಲಿ ಕೇಝಾದ್ ಗುಸ್ತಾದ್ ಬೂಮ್ ಚಿತ್ರದಲ್ಲಿ ಪಾತ್ರಕ್ಕಾಗಿ ಕತ್ರಿನಾಳನ್ನು ಬಾಲಿವುಡ್ಡಿಗೆ ಆಹ್ವಾನಿಸಿದರು. ಹೀಗೆ ಭಾರತಕ್ಕೆ ಬಂದ ಕತ್ರಿನಾಳಿಗೆ ಮೊದಲು ಅಂತಹ ಅವಕಾಶಗಳೇನೂ ಅರಸಿ ಬರಲಿಲ್ಲ. ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಕತ್ರಿನಾ ಚಿತ್ರಗಳಿಗಿಂತಲೂ ಸಲ್ಮಾನ್ ಖಾನ್ ಜತೆಗಿನ ಗೆಳೆತನದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಳು. ಚಿತ್ರ ನಿರ್ಮಾಪಕರು ಕತ್ರಿನಾಳನ್ನು ಹಾಕಿಕೊಂಡು ಚಿತ್ರ ನಿರ್ಮಿಸಲು ಭಯಪಡುತ್ತಿದ್ದರು. ಕಾರಣ ಆಕೆಯ ಉಚ್ಛಾರಣೆ ಬ್ರಿಟೀಷ್ ಶೈಲಿಯಲ್ಲಿತ್ತು. ಅಲ್ಲದೆ ಆಕೆಗೆ ಹಿಂದಿಯೇ ಬರುತ್ತಿರಲಿಲ್ಲ. ಈಗ ಅಲ್ಪಸ್ವಲ್ಪ ಹಿಂದಿ ಮಾತನಾಡುವಷ್ಟು ಕತ್ರಿನಾ ಹಿಂದಿ ಕಲಿತಿದ್ದಾಳೆ.
Katrina Kaif
IFM


2005ರಲ್ಲಿ ಸಲ್ಮಾನ್ ಖಾನ್ ಜತೆಗೆ ನಟಿಸಿದ ಮೈನೇ ಪ್ಯಾರ್ ಕ್ಯೋಂ ಕಿಯಾ ಚಿತ್ರದ ನಟನೆಗೆ ಆಕೆಗೆ ಸ್ಟಾರ್‌ಡಸ್ಟ್ ಪ್ರಶಸ್ತಿ ಒಲಿಯಿತು. 2007ರಲ್ಲಿ ಕತ್ರಿನಾರ ನಮಸ್ತೇ ಲಂಡನ್‌ನಲ್ಲಿ ಬ್ರಿಟೀಶ್ ಹುಡುಗಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಜತೆಗೆ ನಟಿಸಿದಳು. ಇದರಿಂದ ಕತ್ರಿನಾಗೆ ಅದೃಷ್ಟ ದೇವತೆ ಒಲಿದಳು. ಈ ಚಿತ್ರದ ಜತೆಗೆ ಕತ್ರಿನಾರ ಪಾರ್ಟ್‌ನರ್, ವೆಲ್‌ಕಂ ಚಿತ್ರಗಳು ಸಾಲುಸಾಲಾಗಿ ಹಿಟ್ ಆದುವು.

2008ರಲ್ಲಿ ಆಕ್ಷನ್ ಥ್ರಿಲ್ಲರ್ ಚಿತ್ರ ರೇಸ್‌ನಲ್ಲಿ ನೆಗೆಟಿವ್ ಪಾತ್ರದಲ್ಲೂ ಕತ್ರಿನಾ ನಟಿಸಿದರು. ಅಕ್ಷಯ್ ಕುಮಾರ್ ಹಾಗೂ ಕತ್ರಿನಾರ ಸ್ಕ್ರೀನ್ ಕೆಮಿಸ್ಟ್ರಿ ಜನರಿಗೂ ಇಷ್ಟವಾಗತೊಡಗಿದವು. ಹೀಗಾಗಿ ಸಾಲು ಸಾಲು ಚಿತ್ರಗಳಲ್ಲಿ ಕತ್ರಿನಾ- ಅಕ್ಷಯ್ ಕುಮಾರ್ ಜೋಡಿ ಹಿಟ್ ಜೋಡಿಯಾಗಿ ಕಾಣಿಸಿಕೊಳ್ಳತೊಡಗಿತು. ನಂತರ ಸಲ್ಮಾನ್ ಜತೆಗೆ ಬಂದ ಬಹುನಿರೀಕ್ಷೆಯ ಯುವರಾಜ್ ಚಿತ್ರ ಫ್ಲಾಪ್ ಆಯಿತು. ಈಗಷ್ಟೇ ತೆರೆ ಕಂಡ ಜಾನ್, ನೀಲ್ ನಿತಿನ್ ಜತೆಗೆ ನಟಿಸಿದ ಕತ್ರಿನಾರ ಇನ್ನೊಂದ ಚಿತ್ರ ನ್ಯೂಯಾರ್ಕ್ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿ ಮುನ್ನುಗ್ಗಿದೆ.

ಕತ್ರಿನಾಗೆ ನಟನೆಯೂ ಬರುವುದಿಲ್ಲ, ಹಿಂದಿಯೂ ಬರುವುದಿಲ್ಲ ಎಂದು ಟೀಕೆ ಮಾಡುವವರನ್ನು ಕತ್ರಿನಾ ಬಾಯಿ ಮುಚ್ಚಿಸಲು ಹೊರಟಿದ್ದಾಳೆ. ಈಗ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡುವಷ್ಟು ಹಿಂದಿ ಕಲಿತುಕೊಂಡಿದ್ದಾಳಂತೆ ಕತ್ರಿನಾ. ಜತೆಗೆ ನಟನೆಯಲ್ಲೂ ಪಳಗಿದ್ದಾಳೆ. ಇತ್ತೀಚೆಗೆ ಬಿಡುಗಡೆಯಾದ ನ್ಯೂಯಾರ್ಕ್ ಚಿತ್ರದ ನಟನೆಗೆ ಕತ್ರಿನಾಗೆ ಭರಪೂರ ಪ್ರಶಂಸೆ ದಕ್ಕಿದೆ.

ಕತ್ರಿನಾ 2008ರಲ್ಲಿ ಏಷ್ಯಾದ ಅತಿ ಸೆಕ್ಸೀ ಮಹಿಳೆ ಎಂದು ಆಯ್ಕೆಯಾಗಿದ್ದರು. ಜತೆಗೆ ಕತ್ರಿನಾ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತದ ಸೆಲೆಬ್ರಿಟಿಯಾಗಿದ್ದಾಳೆ. ಕತ್ರಿನಾ ಭಾರತ ಬಾರ್ಬಿ ರೂಪದರ್ಶಿಯೂ ಹೌದು.
Katrina Kaif
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ರಿನಾ ಕೈಫ್, ಅಕ್ಷಯ್ ಕುಮಾರ್, ಬಾಲಿವುಡ್, ನ್ಯೂಯಾರ್ಕ್