Webdunia RSS ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ (Kannada Cinema)
ಸ್ಯಾಂಡಲ್ ವುಡ್
'ಗಾಂಧಿ'ಗಳ ಸೆಕ್ಸಿ ಅವತಾರಕ್ಕೆ ದುಬೈ ಕನ್ನಡಿಗರು ಶಾಕ್
ಪೂಜಾಗಾಂಧಿ
PR

ಮಳೆ ಹುಡುಗಿ ಪೂಜಾ ಗಾಂಧಿ ಸೀಥ್ರೂ ಟಾಪ್‌ಧಾರಿಯಾಗಿದ್ದರು. ಆಕೆಯ ಸಹೋದರಿ ರಾಧಿಕಾ ಗಾಂಧಿ ಹಾಕಿದ್ದ ಬಟ್ಟೆ ಮಂಡಿಯಿಂದ ಒಂದಡಿ ಮೇಲಿತ್ತು! ಇದು ಸಿನಿಮಾದಲ್ಲಿ ಅಂತ ನೀವು ತಿಳಿದುಕೊಂಡಿದ್ದರೆ, ನಿಜವಲ್ಲ. ಕನ್ನಡ ಕಲಾವಿದರೆಂದು ಪ್ರೀತಿಯಿಂದ ಕರೆದಿದ್ದ ಸಮಾರಂಭದಲ್ಲಿ ಹೀಗೆ ನಮ್ಮವರು ಪ್ರತಿಭಾ ಪ್ರದರ್ಶನ ಮಾಡಿದ್ದಾರೆ! ಪೂಜಾ ಗಾಂಧಿ 'ದಂಡುಪಾಳ್ಯ'ದಲ್ಲಿ ಬೆತ್ತಲೆ ಬೆನ್ನನ್ನು ಬಗೆಬಗೆಯಾಗಿ ತೋರಿಸಿದಾಗ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆಕೆ ಸ್ತ್ರೀಕುಲಕ್ಕೇ ಅಪಮಾನ ಎಂದು ಕೆಲವು ಮಹಿಳಾ ಸಂಘಟನೆಗಳು ಕೂಗಿದ್ದವು. ಆಗೆಲ್ಲ ಹೋದಲ್ಲೆಲ್ಲ ಪೂಜಾ ಸ್ಪಷ್ಟನೆ ನೀಡುತ್ತಿದ್ದುದು ಹೀಗೆ: 'ದಂಡುಪಾಳ್ಯ' ಚಿತ್ರದ ಕಥೆಯೇ ಹಾಗಿದೆ. ಪೊಲೀಸರು ಮಹಿಳೆಯೊಬ್ಬಳಿಗೆ ಚಿತ್ರಹಿಂಸೆ ನೀಡುವ ದೃಶ್ಯವದು. ನೈಜತೆಗೆ ಹೆಚ್ಚು ಒತ್ತು ನೀಡಿದ್ದರಿಂದ ಅಂತಹ ದೃಶ್ಯಕ್ಕೆ ಒಪ್ಪಿಕೊಂಡಿದ್ದೇನೆ.
ಗೋಲ್ಡನ್ ಅವಕಾಶ ಮಿಸ್ ಮಾಡಿಕೊಂಡರೇ ಗಣೇಶ್?
ಗಣೇಶ್
PR

ಆಗ ಗಣೇಶ್ ಏನೂ ಆಗಿರಲಿಲ್ಲ. ಒಂದಷ್ಟು ಚಿತ್ರಗಳಲ್ಲಿ ಕೆಲವೇ ಸೆಕುಂಡುಗಳಲ್ಲಿ ಮಾಯವಾಗುವ ಹಾಸ್ಯ ನಟರಾಗಿ ಮುಖ ತೋರಿಸುತ್ತಿದ್ದರು. ಆದರೆ ಅವರ ಹಣೆಬರಹವನ್ನು ಬದಲಾಯಿಸಿದ್ದು ಉದಯ ಟಿವಿಯ 'ಕಾಮಿಡಿ ಟೈಮ್'. ನಂತರ ಗಣೇಶ್ ತಿರುಗಿ ನೋಡಿಯೇ ಇಲ್ಲ. ಚೆಲ್ಲಾಟ, ಮುಂಗಾರು ಮಳೆ ಚಿತ್ರಗಳು ಅವರ ಬದುಕಿಗೆ ಯಾರೂ ನಿರೀಕ್ಷಿಸಿರದ ತಿರುವು ಕೊಟ್ಟಿದ್ದವು. ಹೀಗಿದ್ದ ಗಣೇಶ್ ಅವಕಾಶ ಸಿಕ್ಕಾಗಲೆಲ್ಲ ಉದಯ ಟಿವಿಗೆ ಕೃತಜ್ಞತೆ ಹೇಳುತ್ತಾ ಬಂದವರು. ನನ್ನ ಈ ಏಳ್ಗೆಗೆ 'ಕಾಮಿಡಿ ಟೈಮ್' ಮೂಲ ಕಾರಣ ಎಂದು ಮುಲಾಜಿಲ್ಲದೆ ಹೇಳುತ್ತಿದ್ದವರು. ಆದರೆ ಅದೇ ಗಣೇಶ್ ಈಗ ಉದಯ ಟಿವಿಗೆ ಕೈ ಕೊಟ್ಟಿದ್ದಾರೆ. ಗೋಲ್ಡನ್ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದಾರೆ.