ಯಲಹಂಕದ ರೇವಾ ಕಾಲೇಜಿನ ಬಳಿಯಲ್ಲಿ ಪಿಯುಸಿ ಚಿತ್ರದ ಚಿತ್ರೀಕರಣ ನಡೆಯುವಾಗ ಚಿತ್ರತಂಡದ ಮೇಲೆ ಜೇನುಹುಳುಗಳು ದಾಳಿಯಿಟ್ಟ ಸುದ್ದಿ ವರದಿಯಾಗಿದೆ.
ಚಿತ್ರದ ನಾಯಕ ಚೇತನ್ ಚಂದ್ರ, ನಾಯಕಿಯರಾದ ಹರ್ಷಿಕಾ ಪೂಣಚ್ಚ, ಕರಿಷ್ಮಾ ಅಭಿನಯಿಸುತ್ತಿದ್ದ ಹಾಡಿನ ಸನ್ನಿವೇಶದ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ಜೇನು ಕಡಿತಕ್ಕೊಳಗಾದ ಸುಮಾರು 20 ಮಂದಿ ಆಸ್ಪತ್ರೆ ಸೇರಬೇಕಾಗಿ ಬಂತು ಎಂದು ಚಿತ್ರತಂಡ ತಿಳಿಸಿದೆ.
ಯಶಸ್ವಿ ಚಿತ್ರ ಎ.ಕೆ.47 ಗಾಗಿ ಕಥೆ ಬರೆದಿದ್ದ ಎಸ್ಆರ್ ಬ್ರದರ್ಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕವಿರಾಜ್ ಹಾಡುಗಳನ್ನು ಬರೆದಿದ್ದಾರಂತೆ. ಹದಿ ಹರೆಯದವರ ಭಾವನೆಗಳ ಸುತ್ತ ಹೆಣೆದಿರುವ ಈ ಕಥಾನಕ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆಕರ್ಷಿಸುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.
ವಿಶ್ವಾಸ ನಿಜವಾಗಲಿ. ಪಿಯುಸಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಲಿ!!
|