ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾರಿ ಬದಲಿಸದಿದ್ದರೆ ವಿಜಯ್‌ಗೆ ಕಷ್ಟ ಉಂಟು
MOKSHA
ಎಲ್ಲ ಕಲಾವಿದರೂ ಎಲ್ಲ ಪಾತ್ರವನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಈ ಮಾತಿಗೆ ಅಪವಾದವಾಗಿದ್ದವರು ಡಾ| ರಾಜ್ಕುಮಾರ್ ಒಬ್ಬರೇ. ಬಾಂಡ್ ಪಾತ್ರಗಳಿಂದ ಮೊದಲ್ಗೊಂಡು, ಪೌರಾಣಿಕ, ಸಾಮಾಜಿಕ, ಸಾಹಸ ಹೀಗೆ ಎಲ್ಲ ಪಾತ್ರಗಳಲ್ಲೂ ಮಿಂಚಿ ಮೋಡಿ ಮಾಡಿದವರು ರಾಜಣ್ಣ.

ಆದರೆ ಅವರ ನಂತರದ ಸಾಲಿನ ನಾಯಕ ನಟರು ಒಂದು ಹಂತಕ್ಕೆ ಓ.ಕೆ. ಎನ್ನುವಷ್ಟು ಸ್ಥಾನವನ್ನು ಕಾಯ್ದುಕೊಂಡು ಬಂದರಾದರೂ, ರಾಜಣ್ಣ ಬಿಟ್ಟುಹೋದ ಜಾಗವಿನ್ನೂ ಖಾಲಿಯಾಗಿಯೇ ಉಳಿದಿದೆ ಎಂಬುದು ಅಪ್ರಿಯ ಸತ್ಯ. ಇಂದಿನ ನಾಯಕ ನಟರೇ ವಿವಿಧ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿಲ್ಲವೋ ಅಥವಾ ಉದ್ಯಮವೇ ಅಂತಹ ಸನ್ನಿವೇಶವನ್ನು ಸೃಷ್ಟಿಸುತ್ತಿಲ್ಲವೋ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ಇದನ್ನು ಉದಾಹರಿಸಲು ನಟ ವಿಜಯ್ ಸೂಕ್ತ ವ್ಯಕ್ತಿಯಾಗುತ್ತಾರೆ. ದುನಿಯಾ ಚಿತ್ರ ಬರುವವರೆಗೂ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅವರು ದುನಿಯಾದ ನಂತರ ಚಂಡ, ಯುಗ ಮತ್ತು ಅವ್ವ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಚಂಡ ಚಿತ್ರ ಮಾತ್ರವೇ ಬಿ ಸೆಂಟರ್‌ಗಳಲ್ಲಿ ಒಂದಷ್ಟು ದುಡ್ಡು ಮಾಡಿತು. ಸದ್ಯಕ್ಕೆ ರವಿ ಬೆಳಗೆರೆ ನಿರ್ದೇಶನದ ಮುಖ್ಯಮಂತ್ರಿ ಐ ಲವ್ ಯೂ ಚಿತ್ರವೊಂದೇ ವಿಜಯ್‌ಗೆ ಉಳಿದಿರುವ ಭರವಸೆ. ಪಿರಮಿಡ್ ಸಾಯಿಮಿರಾ ಸಂಸ್ಥೆ ನಿರ್ಮಿಸುತ್ತಿರುವ, ಓಂ ಪ್ರಕಾಶ್ ನಿರ್ದೇಶನದ ಪುಟ್ಟ ಎಂಬ ಚಿತ್ರದಲ್ಲೂ ವಿಜಯ್ ಎಂದಿನ ಶೈಲಿಯ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ.

ಚಿತ್ರಸುದ್ದಿ ಹೇಳುವಂತೆ ಅವರದು ಆಟೋ ಡ್ರೈವರನ ಪಾತ್ರ. ಪಾತ್ರಪೋಷಣೆ ಚೆನ್ನಾಗಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಕಷ್ಟ ಎಂಬುದು ಚಿತ್ರೋದ್ಯಮಿಗಳ ಅಭಿಪ್ರಾಯ. ಹಲವು ವಿಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುವ ಪ್ರಯತ್ನವನ್ನು ವಿಜಯ್‌ರಂಥವರು ಇನ್ನಾದರೂ ಮಾಡಬೇಕು. ಇಲ್ಲದಿದ್ದರೆ ವರ್ಸಟಾಲಿಟಿ ನೀರೀಕ್ಷಿಸಲು ಹೇಗೆ ಸಾಧ್ಯ?
ಮತ್ತಷ್ಟು
ತಯಾರಾಗುತ್ತಿದೆ ಕಾಸರವಳ್ಳಿಯವರ ಗುಲಾಬಿ ಟಾಕೀಸ್
ಕನ್ನಡದಲ್ಲಿ ಗಾಯಕರಿಗೆ ಬರವೇ?
ಫಾರಂ ಕಂಡುಕೊಳ್ಳುತ್ತಿದೆ ರಾಮು ಫಿಲಂಸ್
ಆನಂದ್ ಭವಿಷ್ಯ ಹೊರಳುದಾರಿಯಲ್ಲಿದೆಯೇ?
ಯಶಸ್ಸಿನ ನಿರೀಕ್ಷೆಯಲ್ಲಿ ಶಿವಧ್ವಜ್
ತೆಲುಗಲ್ಲಿ ಹ್ಯಾಪಿಡೇಸ್; ಕನ್ನಡದಲ್ಲಿ ಜಾಲಿಡೇಸ್!!