ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಂ ಚಿತ್ರಕಥೆ, ಶೀರ್ಷಿಕೆಯಲ್ಲಿ ಬದಲಾವಣೆ?
MOKSHA
ಹಾಗಂತ ಒಂದ ಸಣ್ಣ ಸಂದೇಹ ಸಂಬಂಧಪಟ್ಟವರನ್ನು ಕಾಡುತ್ತಿದೆಯಂತೆ. ರಾಜ್ ಪುತ್ರತ್ರಯರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ರವರು ಮೊದಲನೇ ಬಾರಿಗೆ ಒಟ್ಟಿಗೇ ಅಭೀನಯಿಸಲಿರುವ ಚಿತ್ರವಿದು ಎಂದು ಈಗಾಗಲೇ ಪ್ರಚಾರವಾಗಿದೆ.

ಕನ್ನಡ ಚಿತ್ರೋದ್ಯಮದಲ್ಲಿ ಸ್ಪಷ್ಟವಾಗಿ ಬೇರೂರುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿರುವ ಪಿರಮಿಡ್ ಸಾಯಿಮಿರಾ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿದ್ದು ರವಿ ಶ್ರೀವತ್ಸ ನಿರ್ದೇಶನದ ಜವಾಬ್ದಾರಿಯನ್ನು ಹೊರಲಿದ್ದಾರೆ. ಆದರೆ ಚಿತ್ರದ ಶೀರ್ಷಿಕೆ ಕುರಿತು ಮತ್ತು ತಮ್ಮ ಮೂವರು ಮಕ್ಕಳೂ ಒಟ್ಟಿಗೆ ಅಭಿನಯಿಸುತ್ತಿರುವುದಕ್ಕೆ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಅದಕ್ಕೊಂದು ಕಾರಣವೂ ಇದೆ. ಈ ಹಿಂದೆ ಶಿವಮೆಚ್ಚಿದ ಕಣ್ಣಪ್ಪ ಮತ್ತು ಗಂಧದ ಗುಡಿ ಭಾಗ-2 ಚಿತ್ರಗಳಲ್ಲಿ ಶಿವರಾಜ್‌ಕುಮಾರ್‌ ಅವರ ಜೊತೆಯಲ್ಲಿ ಡಾ| ರಾಜ್‌ ಅವರೂ ಅಭಿನಯಿಸಿದ್ದರು. ಆದರೆ ಆ ಚಿತ್ರಗಳು ಹೇಳಿಕೊಳ್ಳುವಂತಹಾ ಯಶಸ್ಸನ್ನು ಕಾಣಲಿಲ್ಲ. ಈ ಕುರಿತು ಪಾರ್ವತಮ್ಮನವರೊಂದಿಗೂ ಅಣ್ಣಾವ್ರು ತಮ್ಮ ನೋವನ್ನು ತೋಡಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ಮತ್ತು ಚಿತ್ರದ ಕಥೆಯೇ ಇನ್ನೂ ಅಂತಿಮವಾಗದಿರುವ ಕಾರಣದಿಂದ ಚಿತ್ರ ಸೆಟ್ಟೇರುವುದು ಕೊಂಚ ವಿಳಂಬವಾಗಬಹುದು ಎನ್ನುತ್ತಿವೆ ಸುದ್ದಿಮೂಲಗಳು. ಹಾಗೇನಾದರೂ ಆಗುವುದಾದಲ್ಲಿ ಚಿತ್ರದ ಶೀರ್ಷಿಕೆ, ಕಥೆಯಷ್ಟೇ ಅಲ್ಲದೇ ತಾರಾಗಣದಲ್ಲೂ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಮತ್ತಷ್ಟು
ದಾರಿ ಬದಲಿಸದಿದ್ದರೆ ವಿಜಯ್‌ಗೆ ಕಷ್ಟ ಉಂಟು
ತಯಾರಾಗುತ್ತಿದೆ ಕಾಸರವಳ್ಳಿಯವರ ಗುಲಾಬಿ ಟಾಕೀಸ್
ಕನ್ನಡದಲ್ಲಿ ಗಾಯಕರಿಗೆ ಬರವೇ?
ಫಾರಂ ಕಂಡುಕೊಳ್ಳುತ್ತಿದೆ ರಾಮು ಫಿಲಂಸ್
ಆನಂದ್ ಭವಿಷ್ಯ ಹೊರಳುದಾರಿಯಲ್ಲಿದೆಯೇ?
ಯಶಸ್ಸಿನ ನಿರೀಕ್ಷೆಯಲ್ಲಿ ಶಿವಧ್ವಜ್