ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಂಚಿನ ಓಟಕ್ಕೆ ಐಟಂ ಸಾಂಗ್ ಬಿಸಿ
ಚಿತ್ರದ ಹೆಸರೇ ಮಿಂಚಿನ ಓಟ. ಅದರ ಜೊತೆಗೆ ಐಟಂ ಸಾಂಗ್ ಬಿಸಿ, ನಶೆ ಸೇರಿದರೆ ಓವರ್‌ಡೋಸ್ ಆಗುವುದಿಲ್ಲವೇ? ಎಂದು ಕೇಳೋದಕ್ಕೆ ಆಗುವುದಿಲ್ಲ. ಕೇಳಿದರೆ, ಏನ್ಮಾಡೋದು ಸ್ವಾಮೀ, ಪ್ರೇಕ್ಷಕ ಕೇಳೋದನ್ನೇ ಕೊಡ್ತೀವಿ ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂಬ ಪೀಠಿಕೆಯೊಂದಿಗೆ ಈ ಸುದ್ದಿ ನೀಡುತ್ತಿದ್ದೇವೆ.

ಸೈನೇಡ್ ಚಿತ್ರ ನಿರ್ದೇಶಿಸಿದ ರಮೇಶ್ ಮಿಂಚಿನ ಓಟ ಚಿತ್ರದ ಮೂಲಕ ಹೊರಳುದಾರಿ ತುಳಿಯುತ್ತಿದ್ದಾರೆ. ಈ ಚಿತ್ರಕ್ಕಾಗಿ ರಗಸ್ಯ ಎಂಬ ಮುಂಬೈ ಬೆಡಗಿ ಐಟಂ ಸಾಗಿಗೆ ಕುಣಿದು ಕುಪ್ಪಳಿಸಿ ಹೋಗಿದ್ದಾರಂತೆ.

ಸಾಹಸಿ ಹುಡುಗರಿಬ್ಬರು ತಮ್ಮ ಗುರಿಯ ಸಾಧನೆಗಾಗಿ ಮತ್ತು ಪ್ರೀತಿಯ ಯಶಸ್ಸಿಗಾಗಿ ನಡೆಸುವ ಚುರುಕು ನಡೆಯೇ ಮಿಂಚಿನ ಓಟದ ಕಥೆಯಂತೆ. ಚಿನ್ನೇಗೌಡರ ಮಕ್ಕಳಾದ ವಿಜಯ್ ರಾಘವೇಂದ್ರ ಹಾಗೂ ಮುರಳಿ ಈ ಚಿತ್ರದಲ್ಲಿ ಪ್ರಥಮ ಬಾರಿಗೆ ಒಟ್ಟಿಗೆ ನಟಿಸುತ್ತಿರುವುದು ಒಂದು ವಿಶೇಷವಾದರೆ 40 ನಿಮಿಷಗಳ ಕ್ಲೈಮ್ಯಾಕ್ಸ್ ಹೊಂದಿರುವುದು ಮತ್ತೊಂದು ವಿಶೇಷ. ಚಿತ್ರದ ಡಬ್ಬಿಂಗ್ ಈಗಾಗಲೇ ಮುಗಿದಿದೆ. ಲಕ್ಷ್ಮೀರೈ ನಾಯಕಿ ಪಾತ್ರದಲ್ಲಿದ್ದಾರೆ.
ಮತ್ತಷ್ಟು
ಓಂ ಚಿತ್ರಕಥೆ, ಶೀರ್ಷಿಕೆಯಲ್ಲಿ ಬದಲಾವಣೆ?
ದಾರಿ ಬದಲಿಸದಿದ್ದರೆ ವಿಜಯ್‌ಗೆ ಕಷ್ಟ ಉಂಟು
ತಯಾರಾಗುತ್ತಿದೆ ಕಾಸರವಳ್ಳಿಯವರ ಗುಲಾಬಿ ಟಾಕೀಸ್
ಕನ್ನಡದಲ್ಲಿ ಗಾಯಕರಿಗೆ ಬರವೇ?
ಫಾರಂ ಕಂಡುಕೊಳ್ಳುತ್ತಿದೆ ರಾಮು ಫಿಲಂಸ್
ಆನಂದ್ ಭವಿಷ್ಯ ಹೊರಳುದಾರಿಯಲ್ಲಿದೆಯೇ?