ಇ.ಚನ್ನಗಂಗಪ್ಪ ನಿರ್ದೇಶನದ ಬಹು ನೀರೀಕ್ಷಿತ ಚಿತ್ರ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಚಿತ್ರದ ದೃಶ್ಯವೊಂದು ಬೆಂಗಳೂರಿನ ಚಂದ್ರೋದಯ ಕಲ್ಯಾಣಮಂಟಪದಲ್ಲಿ ಇತ್ತೀಚೆಗೆ ಚಿತ್ರೀಕರಣಗೊಂಡಿತು. ಶ್ರವಂತ್ ಹಾಗೂ ರಾಧಿಕಾ ಗಾಂಧಿ ಪಾಲ್ಗೊಂಡಿದ್ದ ಮದುವೆ ಸಂಭ್ರಮದ ಚಿತ್ರೀಕರಣದಲ್ಲಿ ಸಿ.ಆರ್.ಸಿಂಹ, ವಿನಯಾ ಪ್ರಕಾಶ್ ಹಾಗೂ 600ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಪೂಜಾ ಗಾಂಧಿಯ ತಂಗಿ ರಾಧಿಕಾ ಗಾಂಧಿ ಅಭಿನಯದ ಪ್ರಥಮ ಚಿತ್ರ ಇದಾಗಿದ್ದು ಈಗಾಗಲೇ ಕರ್ನಾಟಕದ ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚನ್ನಗಂಗಪ್ಪನವರ ಹಿಂದಿನ ಚಿತ್ರವಾದ ಸೌಂದರ್ಯ ಸೋತಿದ್ದರಿಂದ ಈ ಚಿತ್ರದಲ್ಲಿ ಹೆಚ್ಚಿನ ಶ್ರಮವಹಿಸಿ ನಿರೂಪಣೆ ಮಾಡಲಾಗಿದೆ ಎಂಬುದು ಚಿತ್ರತಂಡದ ವಿವರಣೆ.
ವಿ.ಅಶ್ವಥ್, ಡಿ.ರಾಮಚಂದ್ರ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ.ಕಲ್ಯಾಣ್ ಗೀತೆಗಳನ್ನು ರಚಿಸಿ ಸಂಗೀತ ನೀಡಿದ್ದಾರೆ. ಆನಂದ್, ಅವಿನಾಶ್, ಕರಿಬಸವಯ್ಯ, ಎ.ಎಸ್.ಮೂರ್ತಿ, ವಿಜಯಸಾರಥಿ ಮೊದಲಾದವರು ತಾರಾಗಣದಲ್ಲಿರುವ ಇತರರು.
|