ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಕ ತಂಗಿಗೆ ಹಿನ್ನೆಲೆ ಸಂಗೀತ
ಶೃತಿ ಮತ್ತು ರಶ್ಮಿ ಅಭಿನಯದ ಅಕ್ಕ ತಂಗಿ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಇತ್ತೀಚೆಗಷ್ಟೇ ಹಿನ್ನೆಲೆ ಸಂಗೀತ ಲೇಪನದ ಕಾರ್ಯ ಮುಕ್ತಾಯಗೊಂಡಿದೆ. ರಮೇಶ್ ಯಾದವ್ ನಿರ್ಮಾಣದ ಈ ಚಿತ್ರವನ್ನು ಶೃತಿಯವರ ಪತಿ ಮಹೇಂದರ್ ನಿರ್ದೇಶಿಸಿದ್ದಾರೆ.

ಈ ಚಿತ್ರ ಚುನಾವಣೆಗೆ ಮುಂಚಿತವಾಗಿಯೇ ಬಿಡುಗಡೆಯಾಗುವುದೋ ಅಥವಾ ವಿಳಂಬವಾಗುವುದೋ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ಮಹೇಂದರ್ ಈಗಾಗಲೇ ಬಿಜೆಪಿ ಸೇರಿದ್ದು ಚಾಮರಾಜನಗರ ಅಥವಾ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ.

ಸಹೋದರಿಯರ ನಡುವಿನ ಭಾವನಾತ್ಮಕ ಸಂಬಂಧಗಳ ಸನ್ನಿವೇಶವನ್ನೊಳಗೊಂಡಿರುವ ಈ ಚಿತ್ರದ ಕಥೆ ಶೃತಿಯವರದೇ ಅಭಿನಯವಿರುವ ಕರ್ಪೂರದ ಗೊಂಬೆ ಚಿತ್ರದ ಕಥೆಯಂತಿರಬಹುದೇ ಎಂಬ ನೀರೀಕ್ಷೆ ಕೆಲವರದು. ಏಕೆಂದರೆ ಆ ಚಿತ್ರದಲ್ಲೂ ಅಕ್ಕ ತಂಗಿಯರ ಪ್ರೀತಿ-ತ್ಯಾಗದ ಕಥೆಯ ಟ್ರಾಕ್ ಬರುತ್ತದೆ.

ಚಿತ್ರದ ಇತರ ತಾರಾಗಣದಲ್ಲಿ ಮೋಹನ್, ಶರಣ್, ಬಿರಾದಾರ್, ಕಿಶೋರ್, ಎಂ.ಎನ್.ಲಕ್ಷ್ಮೀದೇವಿ, ಕಿಶೋರಿ ಬಲ್ಲಾಳ್ ಮೊದಲಾದವರಿದ್ದಾರೆ. ವಿ.ಮನೋಹರ್ ಅವರ ಸಂಗೀತವಿದೆ.
ಮತ್ತಷ್ಟು
ಖಳನಾಯಕನ ಪಾದವೇ ಗತಿ!!
ರಾಮಗೋಪಾಲ್ ವರ್ಮಾ ಚಿತ್ರದಲ್ಲಿ ಸುದೀಪ್
ಚಿಕ್ಕಮಲ್ಲಿಗೆಗೆ ಮದುವೆಯಾಯ್ತಂತೆ
ಕಡು ಬಿಸಿಲಿನಲ್ಲಿ ಕನ್ನಡದ ಹಾಡಿನ ಚಿತ್ರೀಕರಣ
ಸ್ಟಾರ್ ಹುಡುಕಲು ಹೊರಟವರಿಗೆ ಸಿಕ್ಕಿದೆ ಭರ್ಜರಿ ಅರ್ಜಿ
ಭೀಮೂಸ್‌ಗೆ ಗ್ರಾಫಿಕ್ ವೈಭವ