ನವನಟ ರಾಜೀವ್ ಅಭಿನಯದ ಜಿಂದಗಿ ಚಿತ್ರಕ್ಕೆ ಇತ್ತೀಚೆಗಷ್ಟೇ ವಿಜಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯಿತು. ಎ.ಟಿ.ಲೋಕೇಶ್ ನಿರ್ಮಾಣದ ಈ ಚಿತ್ರವನ್ನು ಮುಗಿಲ್ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯೂ ಅವರದೇ.
ಸುವರ್ಣ ವಾಹಿನಿಯ ಸೀರೆಗೊಂದು ಸವಾಲ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಈಗಾಗಲೇ ಜನಪ್ರಿಯತೆಯನ್ನು ಪಡೆದಿರುವ ಹೇಮಶ್ರೀ ಈ ಚಿತ್ರದ ನಾಯಕಿಯ ಪಾತ್ರದಲ್ಲಿದ್ದಾರೆ. ಉಳಿದಂತೆ ಕಬಡ್ಡಿ ಚಿತ್ರದ ಖ್ಯಾತಿಯ ಕಿಶೋರ್, ಪ್ರಿಯಾಂಕ, ಅವಿನಾಶ್, ಮಂಡ್ಯ ರಮೇಶ್, ನಮಿತಾ ರಾವ್, ಮಿತ್ರ ಮೊದಲಾದವರು ಉಳಿದ ತಾರಾಗಣದಲ್ಲಿದ್ದಾರೆ.
ಚಿತ್ರಕ್ಕೆ ಮೈಸೂರು ಮೋಹನ್ ಅವರ ಸಂಗೀತವಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶಕರು. ಚಿತ್ರದ ಹಾಡುಗಳ ಕುರಿತು ಈಗಾಗಲೇ ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಾಡುಗಳು ಸೂಪರ್ ಹಿಟ್ ಆದರೆ ಚಿತ್ರವೂ ಅದೇ ದಾರಿಯಲ್ಲಿ ಸಾಗುತ್ತದೆ ಎಂಬುದು ಚಿತ್ರೋದ್ಯಮಿಗಳ ಅಭಿಪ್ರಾಯ.ಅವರ ಅಭಿಪ್ರಾಯ ನಿಜವಾಗಲಿ.
|