ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವು ಎಂಬ ತಮಾಷೆಯ ಮೇಷ್ಟ್ರು
MOKSHA
ಖಳನಟನಾಗಿ ವೃತ್ತಿ ಆರಂಭಿಸಿದ ದೇವರಾಜ್ ಕ್ರಮೇಣ ನಾಯಕ ನಟರಾದರು. ದೇವರಾಜ್ ಅವರು ಹಾಸ್ಯ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಅವರನ್ನು ಬಲ್ಲವರ ಅಭಿಪ್ರಾಯವಾಗಿದ್ದರೂ ಅವರಿಗೆ ಹಾಸ್ಯಪಾತ್ರಗಳು ಸಿಕ್ಕಿದ್ದೇ ಕಮ್ಮಿ ಎನ್ನಬೇಕು. ಪೊಲೀಸನ ಹೆಂಡ್ತಿ ಹಾಗೂ ಭಲೇ ಕೇಶವ ಚಿತ್ರಗಳಲ್ಲಿನ ಇವರ ಹಾಸ್ಯಲೇಪಿತ ಪಾತ್ರಗಳು ಜನ ಮೆಚ್ಚುಗೆಯನ್ನು ಪಡೆದಿವೆ. ಹುಲಿಯಾ ಚಿತ್ರವಂತೂ ಅವರ ಸರ್ವಶ್ರೇಷ್ಠ ಅಭಿನಯವನ್ನು ಒಳಗೊಂಡಿದೆ.

ಸದ್ಯಕ್ಕೆ ಮೇಷ್ಟ್ರು ಚಿತ್ರದಲ್ಲಿ ಅಭಿನಯಿಸುತ್ತಿರುವ ದೇವರಾಜ್ ಅದರ ನೃತ್ಯ ಸನ್ನಿವೇಶವೊಂದರಲ್ಲಿ ಭಾಗಿಯಾಗಿದ್ದರು. ಅಪ್ಪಟ ಮರಾಠಿ ಶೈಲಿಯ ಈ ಹಾಡನ್ನು ಮಾಗಡಿ ರಸ್ತೆ ತಾವರೆಕೆರೆಯ ಭೂತಬಂಗಲೆಯೊಂದರಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ದೀಲೀಪ್ ಪೈ, ಭವ್ಯಾ, ಉಷಾ, ಸತೀಶ್, ಶರತ್ ಲೋಹಿತಾಶ್ವ ಇವರೇ ಮೊದಲಾದ ಕಲಾವಿದರು ದೇವರಾಜ್ ಅವರೊಂದಿಗೆ ಹೆಜ್ಜೆ ಹಾಕಿದರು.

ಮಹದೇವ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಸತೀಶ್, ಶೋಗನ್ ಮಂಜು ಮತ್ತು ಮೆಡಿಕಲ್ ಮಂಜು. ಚಿತ್ರಕ್ಕೆ ಕೆ.ಎಂ.ಇಂದ್ರರವರ ಸಾಹಿತ್ಯ ಮತ್ತು ಸಂಗೀತವಿದೆ. ಅನಂತ್ ನಾಗ್, ಭಾನುಪ್ರಿಯ, ಮನ್ಸೂರ್ ಆಲಿಖಾನ್, ಸಿ.ಆರ್.ಸಿಂಹ ತಾರಾಗಣದಲ್ಲಿರುವ ಇತರರು.
ಮತ್ತಷ್ಟು
ಜಿಂದಗಿ ಚಿತ್ರಕ್ಕೆ ರೀರೆಕಾರ್ಡಿಂಗ್
ಅಕ್ಕ ತಂಗಿಗೆ ಹಿನ್ನೆಲೆ ಸಂಗೀತ
ಖಳನಾಯಕನ ಪಾದವೇ ಗತಿ!!
ರಾಮಗೋಪಾಲ್ ವರ್ಮಾ ಚಿತ್ರದಲ್ಲಿ ಸುದೀಪ್
ಚಿಕ್ಕಮಲ್ಲಿಗೆಗೆ ಮದುವೆಯಾಯ್ತಂತೆ
ಕಡು ಬಿಸಿಲಿನಲ್ಲಿ ಕನ್ನಡದ ಹಾಡಿನ ಚಿತ್ರೀಕರಣ