ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರಿನಲ್ಲಿ ಬೀಡುಬಿಟ್ಟ ಟೀಮ್
MOKSHA
ಎಲ್ಲದಕ್ಕೂ ಸರ್ಕಾರದತ್ತ ಮುಖಮಾಡಿ ನಿಲ್ಲುವುದು, ಸರ್ಕಾರ ನಮ್ಮನ್ನು ಉದ್ದಾರ ಮಾಡುತ್ತದೆ ಎಂದು ನೀರೀಕ್ಷಿಸುವುದು ನಮ್ಮಲ್ಲಿ ಬಹುತೇಕರ ಅಭ್ಯಾಸ. ಈ ನೀರೀಕ್ಷೆಯಲ್ಲಿ ಕಾಲ ತಳ್ಳುವುದಕ್ಕಿಂತ ನಮ್ಮ ಕೈಲಾದ ಕೆಲಸವನ್ನು ನಾವೇಮಾಡಿಕೊಳ್ಳುವುದುಮಾಡಿಕೊಳ್ಳುವುದು ಸೂಕ್ತವಲ್ಲವೇ ಎಂಬ ನಿರ್ಧಾರಕ್ಕೆ ಬರುವ ಹೊತ್ತಿಗಾಗಲೇ ಅದೃಷ್ಟ ಮತ್ತು ಅವಕಾಶಗಳು ತಪ್ಪಿಹೋಗಿರುತ್ತವೆ ಎಂಬುದು ಕೆಲವರ ಅನುಭವದ ಮಾತು.

ಇದೇ ಕಥಾತಿರುಳನ್ನು ಹೊಂದಿರುವ ಟೀಮ್ ಎಂಬ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮಹೇಶ್ವರ ಇದರ ನಿರ್ದೇಶಕರು. ಕ್ರಾಂತಿಕಾರಿ ಮನೋಭಾವದ ಚಿತ್ರಗಳು ಅಥವಾ ಮೊನಚಾದ ಸಂಭಾಷಣೆಯನ್ನು ಕಟ್ಟಿಕೊಡುವಲ್ಲಿ ಹೆಸರಾದ ಕೆ.ವಿ.ರಾಜುರವರ ಬಳಿಯಲ್ಲಿ ಮಹೇಶ್ವರ್ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ ಎಂಬುದು ವಿಶೇಷ.

ಒಂದು ತಿಂಗಳ ಹಿಂದೆ ಚಿತ್ರೀಕರಣ ಪ್ರಾರಂಭಿಸಿದ ಚಿತ್ರತಂಡ ಈಗ ಮೈಸೂರಿನಲ್ಲಿ ಬೀಡುಬಿಟ್ಟಿದೆ. ರಂಗಾಯಣ ರಘು, ಅವಿನಾಶ್, ರೋಷನಿ, ಲಕ್ಷ್ಮೀ ಮುಸುರಿ ಮೊದಲಾದವರ ತಾರಾಗಣವಿರುವ ಈ ಚಿತ್ರದಲ್ಲಿ ಟಿವಿ9 ವಾಹಿನಿಯ ಹೀಗೂ ಉಂಟೇ ಕಾರ್ಯಕ್ರಮದ ಖ್ಯಾತಿಯ ನಾರಾಯಣ ಸ್ವಾಮಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಅಂಬರೀಷ್‌ಗೆ ವಿಶೇಷ ಪಾತ್ರವಿದೆಯಂತೆ.
ಮತ್ತಷ್ಟು
ನಮ್ ಏರಿಯಾಲಿ ಒಂದಿನಾ...
ಚೈತ್ರದ ಚಂದ್ರಮದಲ್ಲೂ ಅಮೂಲ್ಯಾಗೊಂದು ಪಾತ್ರ
ಏಪ್ರಿಲ್‌ನಲ್ಲಿ ತೆರೆಗೇರಲಿದ್ದಾನಂತೆ ಕೆಂಪ
ವಂಶಿಗಾಗಿ ಪುನೀತ್-ಪ್ರಕಾಶ್ ಮಿಲನ
ಯುವಜನತೆಗಾಗಿ ತಯಾರುತ್ತಿದೆ ಯುವ
ಬಿಡುಗಡೆಯಂಚಿಗೆ ಬಂದು ನಿಂತ ಸ್ವತಂತ್ರಪಾಳ್ಯ