ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೀಗೂ ಉಂಟೇ ಸ್ವಾಮೀ?!!
MOKSHA
ರಮೇಶ್ ಅರವಿಂದ್‌ಗೆ ಗೋವಾದಲ್ಲೊಂದು ವಿಚಿತ್ರ ಅನುಭವ ಆಯ್ತಂತೆ ಅವರ ಚಿತ್ರ ಆಕ್ಸಿಡೆಂಟ್ ಚಿತ್ರೀಕರಣ ವೇಳೆಯ ಈ ಅನುಭವವನ್ನು ರಮೇಶ್ ಪತ್ರಕರ್ತರೊಂದಿಗೆ ಇತ್ತೀಚೆಗೆ ಹಂಚಿಕೊಂಡರು.

ಒಂದಷ್ಟು ಸಿನಿಮಾ ಸಿಡಿಗಳನ್ನು ಇಟ್ಟುಕೊಂಡು ಸೈಕಲ್ ಏರಿ ಬಂದ ಪೋರನೊಬ್ಬ ರಮೇಶ್ ಬಳಿಗೆ ಬಂದು, "ಕನ್ನಡ ಚಿತ್ರಗಳ ಸಿಡಿ ಇದೆ ಸಾರ್, ಇಪ್ಪತ್ತೇ ರೂಪಾಯಿ, ಬೇಕಾ ಸಾರ್" ಎಂದು ಕೇಳಿದನಂತೆ. ಯಾವ ಸಿನಿಮಾದ್ದು ಇದೆಯಪ್ಪಾ ಅಂತ ಕೇಳಿದರಂತೆ ರಮೇಶ್. ಅವನು ತೋರಿಸಿದ ಸಿಡಿಗಳಲ್ಲಿ ತಮ್ಮದೇ ನಿರ್ದೇಶನದ ರಾಮ ಶಾಮ ಭಾಮ ಚಿತ್ರದ ಸಿಡಿಯೂ ಇದ್ದುದನ್ನು ನೋಡಿ ರಮೇಶ್‌ಗೆ ಗಾಭರಿ-ಆಶ್ಚರ್ಯವಾಯಿತಂತೆ. ಏಕೆಂದರೆ ಈ ಚಿತ್ರದ ಸಿಡಿ ಅಧಿಕೃತವಾಗಿ ಬಿಡುಗಡೆಯಾಗೇ ಇಲ್ಲ.!! ಇದೆಲ್ಲ ಎಲ್ಲಯ್ಯಾ ನಿನಗೆ ಸಿಕ್ತು? ಅಂತ ರಮೇಶ್ ಕೇಳುತ್ತಿದ್ದಂತೆ ಆ ಹುಡುಗನಿಗೆ ಅಪಾಯದ ಅರಿವಾಗಿ ಓಟ ಕಿತ್ತನಂತೆ.

ವಿಡಿಯೋ ಪೈರೆಸಿ ಎಷ್ಟು ಬಲಿಷ್ಠವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಷ್ಟೇ ಅಲ್ಲ ಗೋವಾದಲ್ಲಿಯೂ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಸಿಗುತ್ತಾರೆ ಎಂಬ ಅರಿವೂ ರಮೇಶ್‌ಗಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಮತ್ತು ಮುಂಬೈಗಳಲ್ಲಿ ಆಕ್ಸಿಡೆಂಟ್ ಚಿತ್ರವನ್ನು ರಮೇಶ್ ಬಿಡುಗಡೆ ಮಾಡಲಿದ್ದಾರಂತೆ.
ಮತ್ತಷ್ಟು
ಮೈಸೂರಿನಲ್ಲಿ ಬೀಡುಬಿಟ್ಟ ಟೀಮ್
ನಮ್ ಏರಿಯಾಲಿ ಒಂದಿನಾ...
ಚೈತ್ರದ ಚಂದ್ರಮದಲ್ಲೂ ಅಮೂಲ್ಯಾಗೊಂದು ಪಾತ್ರ
ಏಪ್ರಿಲ್‌ನಲ್ಲಿ ತೆರೆಗೇರಲಿದ್ದಾನಂತೆ ಕೆಂಪ
ವಂಶಿಗಾಗಿ ಪುನೀತ್-ಪ್ರಕಾಶ್ ಮಿಲನ
ಯುವಜನತೆಗಾಗಿ ತಯಾರುತ್ತಿದೆ ಯುವ