ಒಂದು ಚಿತ್ರ ಮುಗಿಯುವವರೆಗೂ ಮತ್ತೊಂದು ಚಿತ್ರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಒಂದು ಚಿತ್ರ, ಮತ್ತೊಂದು ಚಿತ್ರದ ಬಿಡುಗಡೆಯ ನಡುವೆ ಕನಿಷ್ಟ ಮೂರು ತಿಂಗಳಿರುವಂತೆ ನೋಡಿಕೊಳ್ಳುವುದು ಅಥವಾ ಸಂಬಂಧಪಟ್ಟವರಲ್ಲಿ ಆ ರೀತಿ ಕರಾರು ಮಾಡಿಕೊಳ್ಳುವುದು ಪುನೀತ್ ರಾಜ್‌ಕುಮಾರ್ ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ.
ಈ ಕರಾರು ಮುರಿಯಲು ಬಯಸದ ಪುನೀತ್, ಬಿಂದಾಸ್ ಚಿತ್ರದ ಬಿಡುಗಡೆಗೆ ತಮ್ಮದೇ ಮತ್ತೊಂದು ಚಿತ್ರ ತೊಂದರೆ ಉಂಟುಮಾಡಬಾರದೆಂಬ ಕಾರಣದಿಂದಾಗಿ ಗಾಳಿಪಟ ಚಿತ್ರದ ಆಫರನ್ನು ನಿರಾಕರಿಸಿದ್ದರು. ಈ ವಿಷಯ ಪ್ರಸ್ತಾಪಕ್ಕೆ ಬರಲು ಕಾರಣವೆಂದರೆ, ಪ್ರಜ್ವಲ್ ದೇವರಾಜ್ ಅಭಿನಯದ ಗಂಗೆ ಬಾರೆ ತುಂಗೆ ಬಾರೆ ಹಾಗೂ ಮೆರವಣಿಗೆ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಆದರೆ ಒಟ್ಟಿಗೇ ಬಿಡುಗಡೆಯಾದರೆ ಕಷ್ಟ ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಒಂದು ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಬೇಕಾಗುತ್ತದೆ.
ಮೆರವಣಿಗೆಯ ನಾಯಕಿ ಅಂದ್ರಿತಾ ರೇ ಮೂಲತಃ ಬಂಗಾಳಿಯಾದರೂ, ಬಹಳ ವರ್ಷಗಳಿಂದಲೂ ಕರ್ನಾಟಕದಲ್ಲಿ ನೆಲೆಸಿರುವುದರಿಂದ ಕನ್ನಡದಲ್ಲಿ ಸೊಗಸಾಗಿ ಮಾತಾಡುತ್ತಾರೆ. ವಾಸ್ತವವಾಗಿ ಮುಂಗಾರುಮಳೆ ಚಿತ್ರದಲ್ಲಿ ಇವರೇ ನಟಿಸಬೇಕಿತ್ತಂತೆ. ಕಾರಣಾಂತರಗಳಿಂದ ಅವಕಾಶ ತಪ್ಪಿತು ಎನ್ನುತ್ತಾರೆ ಅವರು.
|