ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತರುಣ್‌ಗೆ ಈಗ ಯಶಸ್ಸಿನ ಜರೂರತ್ತಿದೆ
ಹನಿ ಹನಿ ಚಿತ್ರದ ನಾಯಕನಟ ತರುಣ್ ಭವಿಷ್ಯ ಕವಲುದಾರಿಯಲ್ಲಿದೆ ಎನ್ನುತ್ತಿದೆ ಚಿತ್ರೋದ್ಯಮದ ಒಂದು ವಲಯ. ಈಗಾಗಲೇ ಖುಷಿ, ಗೆಳೆಯ, ಹನಿ ಹನಿ ಚಿತ್ರದಲ್ಲಿ ನಟಿಸಿರುವ ತರುಣ್ ಪ್ರಸ್ತುತ ಸೀನ (Cನ ಎಂಬುದು ಪ್ರಚಾರ ಸಾಮಗ್ರಿಯಲ್ಲಿರುವ ಹೆಸರು!!) ಚಿತ್ರದಲ್ಲಿ ನಟಿಸುತ್ತಿರುವ ತರುಣ್‌ಗೆ ಈಗ ಯಶಸ್ಸಿನ ಜರೂರತ್ತಿದೆ.

ಖುಷಿ ಚಿತ್ರದಲ್ಲಿ ಇವರ ಅಭಿನಯ ಎಲ್ಲರಿಗೂ ಖುಷಿ ಕೊಟ್ಟಿದ್ದು, ಚಿತ್ರ ಸೂಪರ್ ಹಿಟ್ ಆದರೂ ಸಹ ಅದು ಚಿತ್ರದ ಇತರ ನಾಯಕರಲ್ಲಿಯೂ ಹಂಚಿಹೋಯಿತು. ಗೆಳೆಯ ಚಿತ್ರದ ಕುರಿತು ನೀರೀಕ್ಷೆಗಳಿದ್ದರೂ ಅದು ಯಶಸ್ಸು ಕಾಣಲಿಲ್ಲ. ಅದೇ ರೀತಿ ಪೂಜಾ ಗಾಂಧಿಯವರೊಂದಿಗೆ ನಟಿಸಿದ ಹನಿ ಹನಿ ಚಿತ್ರ ಕೆಲವೊಂದು ರಂಜನೀಯ ಅಂಶಗಳನ್ನು ಹೊಂದಿದ್ದರೂ ದಡ ಸೇರಲಿಲ್ಲ.

ಕನ್ನಡದ ಕೆಲವೇ ಉತ್ತಮ ಡಾನ್ಸರ್‌ಗಳಲ್ಲಿ ಒಬ್ಬರಾದ ತರುಣ್ ಲವಲವಿಕೆಯ ಮತ್ತು ತರಲೆ ಹುಡುಗನ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಆದರೆ ಅದಷ್ಟೇ ಸಾಲದು ಎಂಬುದು ಅವರಿಗೆ ಅರ್ಥವಾಗಬೇಕಿದೆ ಎನ್ನುತ್ತಾರೆ ಉದ್ಯಮದ ಅವರ ಹಿತೈಷಿಗಳು. ಹೊಸ ಹುಡುಗರ ಚಿತ್ರವೆಂದರೆ ಕಥೆ ಒಂದೇ ರೀತಿಯಲ್ಲಿ, ಅಂದರೆ ಲವ್ ಸಬ್ಜೆಕ್ಟ್ ಅಥವಾ ಮಚ್ಚು-ಲಾಂಗಿನ ಕಥೆಗಳಂತೆ ಸಾಗುವುದರಿಂದ ಹೊಸಬರಿಗೆ ವೃತ್ತಿ ಜೀವನ ರೂಪಿಸಿಕೊಳ್ಳಲು ಸಮರ್ಥ ಮಾರ್ಗದರ್ಶಕರೂ ಸಿಗುತ್ತಿಲ್ಲ ಎಂಬುದು ವಾಸ್ತವತೆ.

ಮುಂಚೆಯಾದರೆ, ಹೊಸಬರನ್ನು ತಿದ್ದಿ ತೀಡಲು ಪುಟ್ಟಣ್ಣ ಕಣಗಾಲ್ ಇರುತ್ತಿದ್ದರು. ಆದರೆ ಈಗ ಎರಡು ಚಿತ್ರಗಳಿಗೆ ಅಸಿಸ್ಟೆಂಟ್ ನಿರ್ದೇಶಕನಾಗಿದ್ದವನು ಮೂರನೇ ಚಿತ್ರದ ವೇಳೆಗೆ ನಿರ್ದೇಶಕನಾಗಿರುತ್ತಾನೆ. ಹೀಗಾಗಿ ಹೆಚ್ಚೂ ಕಮ್ಮಿ ತನ್ನದೇ ವಯಸ್ಸಿನ ನಟರಿಗೆ ಕಮಾಂಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಮತ್ತೊಂದು ಅಭಿಪ್ರಾಯವೂ ಇದೆ.

ಒಟ್ಟಿನಲ್ಲಿ ಕಾಲವೇ ಎಲ್ಲವನ್ನೂ ನಿರ್ಧರಿಸಬೇಕಷ್ಟೇ.
ಮತ್ತಷ್ಟು
ಮತ್ತೆ ಚಿಗಿತುಕೊಳ್ಳುತ್ತಿದ್ದಾರೆ ಶಿವಣ್ಣ
ನಾಯಕ್ ನಹೀಂ... ಖಳ್ ನಾಯಕ್ ಹೂಂ ಮೈಂ....
ಮತ್ತೆ ಬರತೈತೆ ಅನಂತ್-ಕೂಡ್ಲು ಜೋಡಿ
ಮೆರವಣಿಗೆ v/s ಗಂಗೆ: ಮೊದಲ್ಯಾವುದು?
ಹೀಗೂ ಉಂಟೇ ಸ್ವಾಮೀ?!!
ಮೈಸೂರಿನಲ್ಲಿ ಬೀಡುಬಿಟ್ಟ ಟೀಮ್