ತಾಯಿಗೆ ಯಾರಾದರೂ ಅಪಮಾನ ಮಾಡಿದ್ದಾರೆ ಯಾವ ಮಗನಾದರೂ ಸುಮ್ಮನಿರುತ್ತಾನೆಯೆ? ತನ್ನ ಪ್ರಾಣದ ಹಂಗು ತೊರೆದು ಆಕೆಗೆ ಅಪಮಾನ ಮಾಡಿದವರ ವಿರುದ್ದ ಸೇಡು ತೀರಿಸಿಕೊಳ್ಳುತ್ತಾನೆ. ಇಲ್ಲಿಯೂ ಅಷ್ಟೇ ತರಕಾರಿ ಮಾರುಕಟ್ಟೆಯಲ್ಲಿ ತನ್ನ ತಾಯಿಗೆ ಅವಮಾನ ಮಾಡಿದ ರೌಡಿಗಳೊಂದಿಗೆ ಮಗ ಬಂದು ಹೊಡೆದಾಡುತ್ತಾನೆ. ಸುತ್ತಾ ನೂರಾರು ಮಂದಿ ಕೈಕಟ್ಟಿ ನಿಂತಿದ್ದಾರೆಯೇ ಹೊರತು ಯಾರೊಬ್ಬರು ಹೊಡೆದಾಟ ಬಿಡಿಸುವ ಗೋಜಿಗೆ ಹೋಗುವುದಿಲ್ಲ.
ಇದು ಇತ್ತೀಚೆಗೆ ಮಹರ್ಷಿ ಚಿತ್ರಕ್ಕಾಗಿ ನಗರದ ಗವಿಗಂಗಾಧರೇಶ್ವರ ದೇವಾಸ್ಥಾನದ ಬಳಿ ಹಾಕಲಾದ ತರಕಾರಿ ಮಾರುಕಟ್ಟೆಯ ಸೆಟ್‌ನಲ್ಲಿ ಚಿತ್ರೀಕರಿಸಿಕೊಂಡ ದೃಶ್ಯ. ಮಹರ್ಷಿ ಚಿತ್ರದಲ್ಲಿ ಒರಟ ಐ ಲವ್ ಯೂ ಚಿತ್ರದ ನಾಯಕ ಪ್ರಶಾಂತ್ ಹಾಗೂ ನಾಯಕಿ ಪೂಜಾ ಗಾಂಧಿ ನಟಿಸುತ್ತಿದ್ದಾರೆ.
ಇಲ್ಲಿ ನಾಯಕ ಮೂಲತಃ ಸಾಧು ಸ್ವಭಾವದವ. ಆದರೆ ಕೆಲವು ಅನಿವಾರ್ಯ ಸಂದರ್ಭಗಳಿಂದ ಆತ ಮಚ್ಚುಹಿಡಿದು ಹೊಡೆದಾಡಬೇಕಾಗುತ್ತದೆ ಎಂದು ಕಥೆಯ ಸುರುಳಿಯನ್ನು ಬಿಚ್ಚಿಟ್ಟರು ನಿರ್ದೇಶಕ ಕೃಷ್ಣಬ್ರಹ್ಮ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದರು. ರಮೇಶ್ ಹಾಲ್ಬಾಲ್ ಛಾಯಾಗ್ರಾಹಣ, ಕೌರವ ವೆಂಕಟೇಶ್ ಅವರ ಸಾಹಸ ಹಾಗೂ ಫೈವ್‌ಸ್ಟಾರ್ ಗಣೇಶ್ ಅವರ ನೃತ್ಯ ಸಂಯೋಜನೆಯನ್ನು ಚಿತ್ರ ಒಳಗೊಂಡಿದೆ.
|