ಗಣೇಶ್ ಅಭಿನಯದ ಮತ್ತೊಂದು ಚಿತ್ರ ಅರಮನೆ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀಮಂತ ನಿರ್ಮಾಪಕ ಎಂದೇ ಖ್ಯಾತಿ ಹೊಂದಿರುವ ಗಂಡುಗಲಿ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮವನ್ನು ಈಗಾಗಲೇ ಮಾಡಲಾಗಿದೆ.ಚಿತ್ರವನ್ನು ಏಪ್ರಿಲ್ 11ಕ್ಕೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಥಿಯೇಟರ್ ಸಮಸ್ಯೆ ಎದುರಾದರೆ ಮುಂದೂಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ನಿರ್ಮಾಪಕ ಮಂಜು.
ಚಿತ್ರಕ್ಕೆ 25 ಲಕ್ಷ ವೆಚ್ಚದಲ್ಲಿ ಬಂಗಲೆಯ ಭವ್ಯ ಸೆಟ್ ಹಾಕಿ ಚಿತ್ರೀಕರಿಸಲಾಗಿದ್ದು, ಗಣೇಶ್ ಇಲ್ಲಿ ಚಾರ್ಲಿ ಚಾಪ್ಲಿನ್ ತರಹ ನಟಿಸಿದ್ದಾರೆ. ಈ ಹಿಂದೆ ಚಿತ್ರವೊಂದರಲ್ಲಿ ಕಮಲಹಾಸನ್ ಕುಳ್ಳನ ಪಾತ್ರ ಮಾಡಿದ್ದರು. ಇಲ್ಲಿ ಗಣೇಶ್ ಕೂಡಾ ಕೆಲವು ದೃಶ್ಯಗಳಲ್ಲಿ ಮೊಣಕಾಲಿನಲ್ಲಿ ನಡೆದು ಕುಳ್ಳನ ಪಾತ್ರ ವಹಿಸಿದ್ದಾರೆ. ಇದಕ್ಕಾಗಿ ಅವರು ಪೂರ್ವಸಿದ್ಧತೆಗಳನ್ನು ಕೂಡಾ ಮಾಡಿಕೊಂಡಿದ್ದರು. ಆದರೆ ಮೊಣಕಾಲಿನಲ್ಲಿ ನಡೆಯುವ ಕೊನೆಯ ದೃಶ್ಯದಲ್ಲಿ ಸುಸ್ತಾಗಿ ಇನ್ನು ನನಗೆ ಸಾಧ್ಯವಿಲ್ಲವೆಂದು ಬಿದ್ದು ಅತ್ತರು ಎಂದು ನಿರ್ದೇಶಕರು ಹೇಳುತ್ತಾರೆ
ಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲೂ ಯಾವ ಕೊರತೆಯೂ ಕಾಣದಂತೆ ಸಂಕಲನ ಮಾಡಲಾಗಿದೆ ಎಂದ ನಿರ್ಮಾಪಕ ಮಂಜು, ಈ ಚಿತ್ರ ನನಗೆ ಭರ್ಜರಿ ಯಶಸ್ಸನ್ನು ತಂದುಕೊಡುತ್ತದೆಂಬ ನಿರೀಕ್ಷೆ ಇದೆ ಎಂದರು.
|