ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕುಮಾರಿಗಾಗಿ ಒಟ್ಟಾದ ಅಣ್ಣ-ತಮ್ಮ
ಮತ್ತೆ ಅಣ್ಣ-ತಮ್ಮ ಒಟ್ಟಾಗಿದ್ದಾರೆ. ಇಲ್ಲಿ ಇವರಿಬ್ಬರು ರಾಜಕುಮಾರಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ರಾಜಕುಮಾರಿ ಯಾರಿಗೆ ಸಿಗುತ್ತಾಳೆ ಎಂಬುದನ್ನು ಕಾದುನೋಡಬೇಕಷ್ಟೇ. ಈ ಹಿಂದೆ ಭೂಪತಿ ಚಿತ್ರ ನಿರ್ದೇಶಿಸಿದ ಗೋವಿಂದ ರಾಜಕುಮಾರಿ ಎಂಬ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರದಲ್ಲಿ ರವಿಚಂದ್ರನ್ ಹಾಗೂ ಅವರ ತಮ್ಮ ಬಾಲಾಜಿ ನಾಯಕರಾಗಿ ನಟಿಸುತ್ತಿದ್ದಾರೆ. ಇಲ್ಲಿ ಮೂರು ಮಂದಿ ನಾಯಕರಲ್ಲಿ ಇಬ್ಬರನ್ನು ನಾಯಕಿಯರು ಪ್ರೀತಿಸುತ್ತಾರೆ. ಆದರೆ ಆ ಇಬ್ಬರು ಇವರನ್ನು ಪ್ರೀತಿಸುತ್ತಾರಾ ಎಂಬುದು ಕಥೆಯ ತಿರುಳು ಎಂದರು ನಿರ್ದೇಶಕ ಗೋವಿಂದ.

ರವಿಚಂದ್ರನ್ ಮಡಿಕೇರಿಯಲ್ಲಿ ನಡೆದ 22 ದಿನಗಳ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಅದು ಪೂರ್ಣಗೊಂಡ ನಂತರ ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.

ಈ ಹಿಂದೆ ಅಣ್ಣನ ಜೊತೆ ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದೆ. ಈಗ ಮತ್ತೆ ರಾಜಕುಮಾರಿ ಮೂಲಕ ನಾವಿಬ್ಬರು ಒಂದಾಗಿದ್ದೇವೆ ಎಂದರು ಬಾಲಾಜಿ. ಚಿತ್ರದಲ್ಲಿ ತೆಲುಗಿನ ನಿಖಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಯಾವುದೇ ಆಶ್ಲೀಲ ಸಂಭಾಷಣೆ ಇಲ್ಲ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರ ಎಂಬುದು ನಿರ್ಮಾಪಕ ಮಂಜುವಾಣಿ.
ಮತ್ತಷ್ಟು
ಗಣೇಶನ ಅರಮನೆ
ಮಹರ್ಷಿ ಮಚ್ಚು ಹಿಡಿದಾಗ
ಉಪೇಂದ್ರಗೆ ಗೆಲುವಿನ ಅಗತ್ಯವಿದೆ
ಹೇರ್‌ಸ್ಟೈಲ್ ಬದಲಾದರೆ ಚಿತ್ರ ಗೆಲ್ಲುವುದೇ ?
ಬೊಂಬಾಟ್‌ನಲ್ಲಿ ಗಣೇಶ್ ಫೈಟಿಂಗ್ ಇದ್ಯಂತೆ!
'ಹೀಗೂ ಉಂಟೇ' ಹೇಗುಂಟು