ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಯಕಿಯ ಸಿಹಿಮುತ್ತಿಗೆ ಐವರು ನಾಯಕರು
MOKSHA
ಸಿಹಿಮುತ್ತು ಸಿಹಿಮುತ್ತು ಇನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು.... ಎಂಬುದು ಹಳೆಯ ಸಿನಿಮಾ ಹಾಡು. ಈಗ ಸಿಹಿಮುತ್ತು ಹೆಸರಿನ ಚಿತ್ರ ಒಂದು ಸೆಟ್ಟೇರಿದ್ದು, ಇಲ್ಲಿ ನಾಯಕಿಯೊಬ್ಬಳು ಮತ್ತು ಐವರು ನಾಯಕರಂತೆ.

ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರಗಳು ಎಷ್ಟು ಬರುತ್ತಿವೆ? ಬಂದರೂ ಅದರಲ್ಲಿ ಎಷ್ಟು ಚಿತ್ರಗಳು ಗೆಲ್ಲುತ್ತವೆ? ಆದರೆ ಈಗ ಸಿಹಿಮುತ್ತು ಚಿತ್ರದಲ್ಲಿ ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆಯಂತೆ.

ಅಶೋಕ್ ಕಶ್ಯಪ್ ತಾವೊಂದು ಹೊಸ ಪ್ರಯೋಗ ಮಾಡುತ್ತಿದ್ದೇವೆ ಎಂಬ ಸಂತಸದಲ್ಲಿದ್ದಾರೆ. ಈಗಾಗಲೇ ಚಿತ್ರದಲ್ಲಿ ನಾಯಕರಾಗಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಚಾಕಲೆಟ್ ಹೀರೋ ಧ್ಯಾನ್ ಅಭಿನಯಿಸುತ್ತಿದ್ದಾರೆ. ಇವರಿಬ್ಬರೂ ಸೇರಿದಂತೆ ಈ ಚಿತ್ರದಲ್ಲಿ ಒಟ್ಟು ಐದು ಮಂದಿ ನಾಯಕರಿರುತ್ತಾರಂತೆ. ಒಬ್ಬ ನಾಯಕನನ್ನು ಬಾಂಬೆಯಿಂದ
MOKSHA
ಕರೆತರಲಿದ್ದಾರಂತೆ. ಈಗಾಗಲೇ ಕನ್ನಡದ ಶ್ರೇಷ್ಠ ನಟರಾದ ಶಿವರಾಜ್ ಕುಮಾರ್, ಗಣೇಶ್ ಜೊತೆ ಮಾತುಕತೆ ನಡೆಯುತ್ತಿದೆ. ಆದರೆ ಗಣೇಶ್ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಶಿವಣ್ಣ ಇನ್ನೂ ಏನೆಂದು ತಿಳಿಸಿಲ್ಲ. ಆದ್ದರಿಂದ ಉಳಿದ ಮೂವರು ನಾಯಕರಿಗಾಗಿ ಹುಡುಕಾಟ ನಡೆಯುತ್ತಿದೆ.


ತನ್ನನ್ನು ಸಲಹಿದ ವ್ಯಕ್ತಿಯ ಹುಡುಕಾಟದಲ್ಲಿ ಮಲೆನಾಡಿನ ಹುಡುಗಿಗೆ ಐದು ಜನ ನಾಯಕರು ಸಿಗುತ್ತಾರೆ. ಈ ಐವರಲ್ಲಿ ನಾಯಕಿಯ ಸಿಹಿಮುತ್ತು ಯಾರಿಗೆ ಸಿಗುತ್ತದೆಂಬುದು ಚಿತ್ರದ ಸಸ್ಪೆನ್ಸ್ ಎನ್ನುತ್ತಾರೆ ಅಶೋಕ್ ಕಶ್ಯಪ್. ಚಿತ್ರದಲ್ಲಿ ನಾಯಕಿಯಾಗಿ ಪೂನಾದ ಡಿಂಪಲ್ ಚೋಪ್ಡಾ ನಟಿಸುತ್ತಿದ್ದಾರೆ.
ಮತ್ತಷ್ಟು
ಇಕ್ಬಾಲ್ ರಾಜ್ ಚಮತ್ಕಾರಕ್ಕೆ ನಮಸ್ಕಾರ
ರಾಜಕುಮಾರಿಗಾಗಿ ಒಟ್ಟಾದ ಅಣ್ಣ-ತಮ್ಮ
ಗಣೇಶನ ಅರಮನೆ
ಮಹರ್ಷಿ ಮಚ್ಚು ಹಿಡಿದಾಗ
ಉಪೇಂದ್ರಗೆ ಗೆಲುವಿನ ಅಗತ್ಯವಿದೆ
ಹೇರ್‌ಸ್ಟೈಲ್ ಬದಲಾದರೆ ಚಿತ್ರ ಗೆಲ್ಲುವುದೇ ?