ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ಣಾ ಇದು 'ಒಲವಿನ ಬಣ್ಣಾ.....'
ನಾಯಕ ಚಿತ್ರ ಕಲಾವಿದ. ಆತ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊರಡುತ್ತಾನೆ. ಆದರೆ ಕೆಲವು ಸಂದರ್ಭಗಳು ಆತನ ಸಾಧನೆಗೆ ಅಡ್ಡಿಯಾಗುತ್ತದೆ. ಆಗ ನಾಯಕಿ ಸ್ಫೂರ್ತಿಯ ಸೆಲೆಯಾಗಿ ನಿಲ್ಲುತ್ತಾಳೆ. ನಾಯಕನ ಪ್ರತಿ ಸಾಧನೆಯ ಹಿಂದೆ ಆಕೆಯ ಪ್ರೇರಣೆ ಎದ್ದು ಕಾಣುತ್ತದೆ. ಇದು 'ನನ್ನ ಒಲವಿನ ಬಣ್ಣ' ಚಿತ್ರದ ಕಥೆಯ ಒಂದು ಎಳೆ.

ಉಪೇಂದ್ರ ನಿರ್ದೇಶನದ 'ಎ' ಚಿತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡ ಭೂಷಣ್ ಸ್ವತಂತ್ರವಾಗಿ 'ನನ್ನ ಒಲವಿನ ಬಣ್ಣ' ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸೋಮಶೇಖರ್ ನಟಿಸುತ್ತಿದ್ದಾರೆ. ಹಿಂದೆ ಗಾಂಧಿನಗರಕ್ಕೆ ಬಂದು ತನಗೊಂದು ಅವಕಾಶ ಕೊಡಿ ಎಂದು ಅಂಗಲಾಚಿದರೂ ಯಾವ ನಿರ್ಮಾಪಕನೂ ಕೊಡಲಿಲ್ಲ. ಇದರಿಂದ ಬೇಸತ್ತ ಅವರು ತಾವೇ ಸ್ವತ: ಈ ಚಿತ್ರವನ್ನು ನಿರ್ಮಿಸಿ ಈ ಮೂಲಕ ನಾಯಕರಾಗಿ ನಟಿಸುತ್ತಿದ್ದಾರೆ.

ನಿರ್ದೇಶಕ ಭೂಷಣ್ ಇವರ ಸಹಪಾಠಿಯಂತೆ. ಹಿಂದಿನಿಂದಲೇ ಇವರಿಗೆ ಸಿನಿಮಾದ ಹುಚ್ಚಿರುವುದರಿಂದ ನಿರ್ದೇಶನ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದೆ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್. ಚಿತ್ರದಲ್ಲಿ ಆಶ್ವಿನಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಉದ್ಯೋಗದಲ್ಲಿ ನಾಯಕನ ಸಹಪಾಠಿಯಾಗಿ ದೀಪು ನಟಿಸುತ್ತಿದ್ದಾಳೆ.

ಚಿತ್ರದಲ್ಲಿ ವೈಪರ್ ಫಿಲ್ಮ್ 4ಕೆ ಕ್ಯಾಮರ ಬಳಸಿದ್ದು, ಇದರಲ್ಲೇ ಎಡಿಟ್ ಮಾಡುವ ಸೌಲಭ್ಯವಿದೆಯಂತೆ. ಇದೇ ಮೊದಲ ಬಾರಿಗೆ ಈ ರೀತಿಯ ಕ್ಯಾಮರಾ ಬಳಕೆಯನ್ನು ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು ನಿರ್ದೇಶಕ ಭೂಷಣ್.
ಮತ್ತಷ್ಟು
ಪಂಚ್ ನೀಡುವ ಪಂಚ್ಲೈನ್‌ಗಳು
ಆಕೆಯ ಹಿಂದೆ ಈತ, ಈತನ ಹಿಂದೆ ಮತ್ತೊಬ್ಬಾಕೆ
ನಾಯಕಿಯ ಸಿಹಿಮುತ್ತಿಗೆ ಐವರು ನಾಯಕರು
ಇಕ್ಬಾಲ್ ರಾಜ್ ಚಮತ್ಕಾರಕ್ಕೆ ನಮಸ್ಕಾರ
ರಾಜಕುಮಾರಿಗಾಗಿ ಒಟ್ಟಾದ ಅಣ್ಣ-ತಮ್ಮ
ಗಣೇಶನ ಅರಮನೆ