ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರಸುತ್ತುತ್ತಿದ್ದ ಪೂಜಾ ಈಗ ಕ್ರೈಂ ವರದಿಗಾರ್ತಿ!
MOKSHA
ಮುಂಗಾರು ಮಳೆ ಸಿನಿಮಾ ಬಳಿಕ ಏಕಾಏಕಿ ಪ್ರಸಿದ್ಧಿಗೆ ಬಂದ ಪೂಜಾ ಗಾಂಧಿ, ಆ ಬಳಿಕ ಕೇವಲ ಲವರ್ ಬೇಬಿಯಾಗಿ ಮರ ಸುತ್ತುತ್ತಿದ್ದರು. ಆದರೆ ಇದೀಗ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದು, ಕೊಲೆಗಳ ರಹಸ್ಯವನ್ನು ಪತ್ತೆಹಚ್ಚುವ ಕ್ರೈಂ ವರದಿಗಾರ್ತಿಯಾಗುತ್ತಿದ್ದಾರೆ. ಅದೂ ಒಂದೆರಡಲ್ಲ, ಐದು ಕೊಲೆಗಳ ರಹಸ್ಯ ಪತ್ತೆಹಚ್ಚಲು ಮುಂದಾಗಿದ್ದಾರೆ.

ಹೌದು ಇತ್ತೀಚೆಗೆ ಸೆಟ್ಟೇರಿದ 'ಅನು' ಚಿತ್ರದಲ್ಲಿ ಪೂಜಾ ಕ್ರೈಂ ವರದಿಗಾರ್ತಿಯ ಪಾತ್ರವನ್ನು ಮಾಡುತ್ತಿದ್ದಾರೆ. ತಮಿಳಿನ 'ಅನುಸೂಯ' ಚಿತ್ರವನ್ನು ರಿಮೇಕ್ ಮಾಡಿ ಕನ್ನಡದಲ್ಲಿ 'ಅನು' ಎಂಬ ಹೆಸರಿನಲ್ಲಿ ಬಾಲು ನಿರ್ಮಿಸುತ್ತಿದ್ದಾರೆ. ಇವರು ಹೈದಾರಾಬಾದಿನಲ್ಲಿ ಅನುಸೂಯ ಚಿತ್ರ ನೋಡುತ್ತಿದ್ದಾಗ, ಈ ಚಿತ್ರವನ್ನು ಕನ್ನಡದಲ್ಲಿ ಯಾಕೆ ನಿರ್ಮಿಸಬಾರದೆಂಬ ಆಲೋಚನೆ ಬಂತಂತೆ. ನಂತರ ಅದರ ನಿರ್ಮಾಪಕರಿಂದ ಚಿತ್ರದ ಹಕ್ಕು ಪಡೆದು ಈ ಚಿತ್ರವನ್ನು ನಿರ್ಮಿಸಲು ಬಾಲು ಮುಂದಾದರಂತೆ. ಶಿವಗಣಪತಿ ಚಿತ್ರ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಹಿರಿಯ ಪ್ರೊಫೆಸರ್ ಒಬ್ಬರು ಮೂಢನಂಬಿಕೆ ಬೆಳೆಸಿಕೊಂಡು ಕಣ್ಣು ಸೇರಿದಂತೆ ದೇಹದ ಇತರ ಭಾಗಗಳನ್ನು ದಾನ ಮಾಡಬಾರದೆಂಬ ಭಾವನೆ ಬೆಳೆಸಿಕೊಂಡಿರುತ್ತಾರೆ ಎಂದು ಚಿತ್ರದ ಒನ್ಲೈನ್ ಸ್ಟೋರಿಯನ್ನು ಬಿಚ್ಚಿಟ್ಟರು ಬಾಲು. ಮುಖ್ಯವಾಗಿ ಮಹಿಳಾ ಪ್ರೇಕ್ಷಕರನ್ನು ಗುರಿಯಾಗಿರಿಸಿ ಚಿತ್ರ ನಿರ್ಮಿಸುತ್ತಿದ್ದಾರಂತೆ.

ಪೂಜಾ ಇಲ್ಲಿ ಕ್ರೈಂ ವರದಿಗಾರ್ತಿಯಾಗಿ ಚಿತ್ರದಲ್ಲಿ ನಡೆಯುವ ಐದು ಕೊಲೆಗಳ ರಹಸ್ಯವನ್ನು ಭೇದಿಸುವ ಪಾತ್ರವನ್ನು ಮಾಡುತ್ತಾರಂತೆ. "ನಿಜಕ್ಕೂ ಇದು ಚಾಲೆಂಜಿಂಗ್ ಪಾತ್ರ, ಈವರೆಗೆ ನಾನು ಮಾಡದ ಪಾತ್ರವನ್ನು ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಚಿತ್ರದಲ್ಲಿ ನಾನು ಫೈಟ್ ಮಾಡುವ ಸನ್ನಿವೇಶಗಳಿವೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ" ಎಂದಿದ್ದಾರೆ ಪೂಜಾ. ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ದುನಿಯಾದ ಹುಡುಗಿ ರಶ್ಮಿ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಒಂದು ಐಟಂ ಸಾಂಗ್ ಇದೆಯಂತೆ. ಅದಕ್ಕೆ ಬಾಂಬೆಯಿಂದ ನಟಿಯನ್ನು ಕರೆತರುವ ನೀರೀಕ್ಷೆ ಇದೆ ಎಂದರು ನಿರ್ದೇಶಕ ಗಣಪತಿ.
ಮತ್ತಷ್ಟು
ವಿಶಿಷ್ಟ ಪ್ರಚಾರದಲ್ಲಿ ತೊಡಗಿದ ಜಿಂದಗಿ
ಶ್ರೀಧರ್ ಜಾಲಿ ಡೇಸ್
ಇದು ಹಾಡುಗಳ ಸುಗ್ಗಿಯ ಕಾಲ
ಕಿಚ್ಚನಿಗೆ ಶ್ವಾನಗಳೆಂದರೆ ಪ್ರೀತಿಪ್ರೀತಿ
ಹಾಟ್ ಬೇಬಿಗಳ ಐಟಂ ಸಾಂಗ್‌ಗಳು
ಅಣ್ಣಾ ಇದು 'ಒಲವಿನ ಬಣ್ಣಾ.....'