ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದ್ರನಾಗಿ ಕಂಗೊಳಿಸಲಿರುವ ದರ್ಶನ್
MOKSHA
ಮೊನ್ನೆ ಮೊನ್ನೆಯಷ್ಟೇ ಗಜನಾಗಿ ಘರ್ಜಿಸಿದ ದರ್ಶನ್ ಈ ಬಾರಿ ಇಂದ್ರನಾಗಿ ಕಂಗೊಳಿಸಲಿದ್ದಾರೆ. ವಿಷಯವಿಷ್ಟೆ. ದರ್ಶನ್ ಅಭಿಯನದ 'ಇಂದ್ರ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಇಂದ್ರ ತಮಿಳಿನ 'ಅರಸು' ಚಿತ್ರದ ರಿಮೇಕ್ ಎಂದು ದರ್ಶನ್ ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳಿಕೊಂಡರು. ಇಲ್ಲಿ ಅವರದ್ದು ವಿಶಿಷ್ಟ ಗೆಟಪ್. ಮೀನುಗಾರ, ಪೂಜಾರಿ ಸೇರಿದಂತೆ ವಿಭಿನ್ನವಾದ ಐದು ಗೆಟಪ್‌ಗಳಲ್ಲಿ ನಟಿಸಿದ್ದಾರೆ.

ದರ್ಶನ್ ತಮ್ಮ ಬೇರೆ ಬೇರೆ ಗೆಟಪ್‌ಗಳಿಗೆ ತಾವೇ ಸಿದ್ಧವಾಗುತ್ತಿದ್ದರಂತೆ. ಚಿತ್ರದಲ್ಲಿ ಆದಷ್ಟೂ ವಿಗ್ ಬಳಸದಂತೆ ನೋಡಿಕೊಂಡಿದ್ದಾರಂತೆ. ಹಾಡುಗಳ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲಾಗಿದ್ದು, ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ ಎಂದರು ನಿರ್ದೇಶಕ ವಾಸು. ದರ್ಶನ್ ಇಲ್ಲಿ ಮಂಗಳೂರು ಕನ್ನಡವನ್ನು ಕಷ್ಟಪಟ್ಟು ಕಲಿತು ಮಾತನಾಡಿದ್ದಾರಂತೆ.

ದರ್ಶನ್ ಸೂಚಿಸಿದ ವ್ಯಕ್ತಿಗಳನ್ನು ಚಿತ್ರದ ಪ್ರತಿ ವರ್ಗಕ್ಕೂ ಆಯ್ಕೆ ಮಾಡುತ್ತೇವೆ ಎಂಬ ಒಪ್ಪಂದದ ಮೇಲೆ ದರ್ಶನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆದ್ದರಿಂದ ಈ ಚಿತ್ರ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ನಿರ್ದೇಶಕರು.
ಮತ್ತಷ್ಟು
ಮರಸುತ್ತುತ್ತಿದ್ದ ಪೂಜಾ ಈಗ ಕ್ರೈಂ ವರದಿಗಾರ್ತಿ!
ವಿಶಿಷ್ಟ ಪ್ರಚಾರದಲ್ಲಿ ತೊಡಗಿದ ಜಿಂದಗಿ
ಶ್ರೀಧರ್ ಜಾಲಿ ಡೇಸ್
ಇದು ಹಾಡುಗಳ ಸುಗ್ಗಿಯ ಕಾಲ
ಕಿಚ್ಚನಿಗೆ ಶ್ವಾನಗಳೆಂದರೆ ಪ್ರೀತಿಪ್ರೀತಿ
ಹಾಟ್ ಬೇಬಿಗಳ ಐಟಂ ಸಾಂಗ್‌ಗಳು