ಒಂದು ಕಾಲದಲ್ಲಿ ತನ್ನ ಉಕ್ಕಿನಂತಹ ದೇಹ, ಗಡುಸಾದ ಧ್ವನಿ ಹಾಗೂ ಅದಕ್ಕೆ ತಕ್ಕಂತಹ ಅದ್ಬುತ ಅಭಿನಯದಿಂದ ಟೈಗರ್ ಎಂದೇ ಖ್ಯಾತಿ ಹೊಂದಿದ್ದ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ನಟಿಸುತ್ತಿರುವ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ.
ಈ ಹಿಂದೆ ಇವರು ನಟಿಸಿದ 'ಸರ್ಕಲ್ ಇನ್ಸ್ಪೆಕ್ಟರ್' ಚಿತ್ರ ಯಾವುದೇ ಯಶಸ್ಸು ಕಾಣಲಿಲ್ಲ. ಆದರೂ ವಿವಿಧ ಆಫರ್‌ಗಳನ್ನು ಪಡೆಯುತ್ತಿರು ಅದೃಷ್ಟವಂತರಿವರು. ಚಿತ್ರದ ಹೆಸರು ಇನ್ನೂ ಫೈನಲ್ ಆಗಿಲ್ಲ. ಈ ಚಿತ್ರವನ್ನು ನವಭಾರತ, ಕದನ ಚಿತ್ರ ನಿರ್ದೇಶಿದ್ದ ಕೆ.ವಿ. ರಾಜು ನಿರ್ದೇಶಿಸುತ್ತಿದ್ದಾರೆ. ಅಂತ ಚಿತ್ರ ನಿರ್ಮಿಸಿದ್ದ ಕೆ.ಸಿ.ಎನ್ ವೇಣುಗೋಪಾಲ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಹನಿಮೂನ್ ಎಕ್ಸ್‌ಸ್ಪ್ರೆಸ್‌ನಲ್ಲಿ ನಟಿಸಿದ ಸಂತೋಷಿ ಇಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಚಿತ್ರದ ಇಡೀ ಚಿತ್ರೀಕರಣ ನಡೆಯಲಿದೆ. ಬರೀ ಸೋಲಿನಿಂದ ಕನ್ನಡ ಚಿತ್ರರಂಗದಲ್ಲಿ ಮೂಲೆಗುಂಪಾಗಿದ್ದ ವಿನೋದ್ ಪ್ರಭಾಕರ್, ಈ ಚಿತ್ರದ ಮೂಲಕವಾದರೂ ಭದ್ರ ನೆಲೆ ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಷ್ಟೆ.
|