ಕಾಳಿದಾಸ ಲವ್‌ಲಿ ಬಿದ್ದ. ಸರಿ ನೀವು ಊಹಿಸಿದಂತೆ ಇದು ಹೊಸ ಚಿತ್ರದ ಹೆಸರು. ಕನ್ನಡದಲ್ಲಿ ಪ್ರೀತಿ ಪ್ರೇಮದ ಚಿತ್ರಗಳಿಗೇನೂ ಬರವಿಲ್ಲ. ಅದಕ್ಕಿದು ಮತ್ತೊಂದು ಸೇರ್ಪಡೆ.
"ಚಿತ್ರದಲ್ಲಿ ನಾಯಕಿ ದೇವಾಲಯದ ಅಧ್ಯಯನಕ್ಕಾಗಿ ವಿದೇಶ ಸುತ್ತುತ್ತಿರುತ್ತಾಳೆ. ನಾಯಕ ಸಾಫ್ಟ್ವೇರ್ ಇಂಜಿನಿಯರ್. ಸಾಫ್ಟ್ವೇರ್ ಎಂದ ಮೇಲೆ ಹೇಳಬೇಕೆ. ಆತ ಕೂಡಾ ವಿದೇಶ ಸುತ್ತಾಡುತ್ತಿರುತ್ತಾನೆ. ಹೀಗೆ ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ" ಇಷ್ಟು ಮಾತ್ರ ಚಿತ್ರದ ಕತೆಯನ್ನು ನಿರ್ದೇಶಕ ವೆಂಕಟೇಶ ಪಂಚಾಂಗಂ ಬಿಚ್ಚಿಟ್ಟರು.
ನಾಯಕ ತನ್ನ ತಾಯಿಯ ಜೊತೆ ಹುಡುಗಿಯ ಮನೆಗೆ ಮದುವೆ ಪ್ರಸ್ತಾಪಕ್ಕೆ ಬರುವಾಗ ಹುಡುಗಿ ನಾಯಕನಲ್ಲಿ ಲಿಈ ಹುಡುಗಿ ನನಗೆ ಇಷ್ಟವಿಲ್ಲಳಿ ಎಂದು ಹೇಳಿ ಎನ್ನುತ್ತಾಳೆ. ಯಾಕಾಗಿ ಆಕೆ ಆ ರೀತಿ ಹೇಳುತ್ತಾಳೆ. ಚಿತ್ರ ನೋಡಿ ಎನ್ನುತ್ತಾರೆ ಪಂಚಾಂಗಂ.
ಚಿತ್ರವನ್ನು ಕಾಂಬೋಡಿಯಾ ದೇಶದಲ್ಲಿ ಚಿತ್ರೀಕರಿಸಲಾಗಿದೆಯಂತೆ. 18 ದಿನಗಳಲ್ಲಿ 20 ದೃಶ್ಯ ಹಾಗೂ ಒಂದು ಹಾಡಿನ ಸನ್ನಿವೇಶವನ್ನು ಕಾಂಬೋಡಿಯಾದಲ್ಲಿ ಮುಗಿಸಿಕೊಂಡು ಬಂದಿದ್ದಾರಂತೆ. ಅಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಕಷ್ಟ. ಆದರೂ ನಾವು ಹೇಗೋ ಮಾಡಿ ಅನುಮತಿ ಪಡೆದೆವು. 18 ದಿನಗಳ ಶೂಟಿಂಗ್‌ಗೆ 40 ಲಕ್ಷ ಖರ್ಚಾಗಿದೆಯಂತೆ. ಚಿತ್ರದಲ್ಲಿ ಅಮಿತ್ ನಾಯಕರಾಗಿ ನಟಿಸುತ್ತಿದ್ದಾರೆ.
ಚಿತ್ರ ನಿರ್ಮಿಸುತ್ತಿರುವ ಗಿರಿ ಪಂಚಾಂಗಂ ಚಿತ್ರಕ್ಕೆ ಸಂಭಾಷಣೆ, ಸಂಗೀತ ಹಾಗೂ ಸಾಹಿತ್ಯ ನೀಡುವ ಕೆಲಸವನ್ನು ಮಾಡಿದ್ದಾರೆ.
|