ಕನ್ನಡ ಚಿತ್ರರಂಗದ ವಿಚಿತ್ರ ಹೆಸರುಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ, ಮೆಂಟಲ್ ಮಂಜ, ಬಿಡ್ಡ, ದುನಿಯಾ, ಕೆಎ 99 ಬಿ-333 ಹೀಗೆ ವಿಶಿಷ್ಟವಾದ ಹೆಸರುಗಳನ್ನು ಕಾಣುತ್ತಿದೆ. ಆದರೆ ಇನ್ನೊಂದು ಸೇರ್ಪಡೆ 'ಹರಿಶ್ಚಂದ್ರ ಘಾಟ್'.
ಈ ವಿಚಿತ್ರ ನಾಮಾಂಕಿತವನ್ನು ಹೊಂದಿರುವ ಚಿತ್ರವನ್ನು ಶಿವಸಮಯ್ ನಿರ್ದೇಶಿಸುತ್ತಿದ್ದಾರೆ. "ಯಾಕೆ ಈ ರೀತಿಯ ಹೆಸರಿಟ್ಟಿದ್ದೀರೀ? ಈ ಚಿತ್ರ ಓಡಬಹುದೆ?" ಎಂಬ ಪ್ರಶ್ನೆಗೆ, "ನಾನು ಹಿಂದೊಮ್ಮೆ ಹರಿಶ್ಚಂದ್ರಘಾಟ್‌ಗೆ ಸಂಸ್ಕಾರ ಕಾರ್ಯಕ್ಕೆಂದು ಬಂದಿದ್ದೆ. ಆದರೆ ಎಷ್ಟೊತ್ತಾದರೂ ಡೆಡ್ ಬಾಡಿ ಬಂದಿರಲಿಲ್ಲ. ಆ ಸಮಯದಲ್ಲಿ ಈ ಹೆಸರು ಚಿತ್ರಕ್ಕಿಡಲು ತೀರ್ಮಾನಿಸಿದೆ. ಈ ಚಿತ್ರ 200 ದಿನ ಓಡುವುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ತಮ್ಮ ಆತ್ಮವಿಶ್ವಾಸ ಪ್ರದರ್ಶಿಸಿದರು.
ಇಲ್ಲಿ ನಾಯಕನ ಗುಣ ನೋಡಿ ನಾಯಕಿ ಪ್ರೀತಿಸುತ್ತಾಳಂತೆ. ಚಿತ್ರದಲ್ಲಿ ಅಕ್ಷಯ್ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀರಾಂಪುರ ಸ್ಮಶಾನದಲ್ಲಿ ದಿನಕ್ಕೆ ಐದು ಸಾವಿರ ರೂ. ಬಾಡಿಗೆ ಕೊಟ್ಟು ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಪೋಟೋ ಸೆಶನ್ ನಡೆಸಿದ್ದಾರಂತೆ. ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ.
ಚಿತ್ರದಲ್ಲಿ ರಂಗಾಯಣ ರಘು, ಸಂಕೇತ್ ಕಾಶಿ ನಟಿಸುತ್ತಿದ್ದಾರೆ. ಸ್ಯಾಮ್ಸಾನ್ ಹಾಗೂ ಜಯರಾಜ್ ಸಂಗೀತ ನೀಡುತ್ತಿದ್ದಾರೆ.
|