ಸಾಯಿಕುಮಾರ್ ಅಭಿನಯದ 'ಸಿಟಿಜನ್' ಚಿತ್ರ ಅಂತಿಮ ಹಂತ ತಲುಪಿದೆ. ಸಾಯಿಕುಮಾರ್ ಎಂದ ತಕ್ಷಣ ಅಲ್ಲಿ ಸಮಾಜದ ವಿರುದ್ಧ ಹೋರಾಡುವ ದೃಶ್ಯಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ.
ಬಳ್ಳಾರಿಯಲ್ಲಿ ಸಮಾಜ ಘಾತುಕರನ್ನು ಹೆಲಿಕಾಪ್ಟರ‌್‌ಗೆ ಕಟ್ಟಿ ಅವರನ್ನು ಎಳೆದಾಡುವ ದೃಶ್ಯವನ್ನು ಮುಗಿಸಿದ ಚಿತ್ರತಂಡ ಈಗ ಬೆಂಗಳೂರಿಗೆ ಮರಳಿದೆ. ಈ ಚಿತ್ರವನ್ನು ಸಾಯಿಪ್ರಕಾಶ್ ನಿರ್ದೇಶಿಸುತ್ತಿದ್ದಾರೆ.
ಬಾಗೇಪಲ್ಲಿಯಲ್ಲಿ ಒಂದು ದಿನದ ಶೂಟಿಂಗ್ ಮುಗಿಸಿ ನಂತರ ಎರಡು ದಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮುಗಿಸಿದರೆ ಮಾತಿನ ಭಾಗ ಪೂರ್ಣವಾದಂತೆ. ಚಿತ್ರವನ್ನು ತೆಲುಗಿನ ನಿರ್ಮಾಪಕ- ನಿರ್ದೇಶಕರಾದ ಸಿ.ವಿ.ರೆಡ್ಡಿ ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಜಿ.ಎಸ್.ಕೃಷ್ಣ ಛಾಯಾಗ್ರಹಣ, ವಂದೇಮಾತರಂ ಶ್ರೀನಿವಾಸ್ ಅವರ ಸಂಗೀತ, ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆಯಿದೆ. ಚಿತ್ರದಲ್ಲಿ ಆಶಿಷ್ ವಿದ್ಯಾರ್ಥಿ, ರಮೇಶ್ ಭಟ್, ಚಿದಾನಂದ್ ಮೊದಲಾದವರು ಇದ್ದಾರೆ.
|