ರೈತಾಪಿ ವರ್ಗ ಹಾಗೂ ಅಧಿಕಾರಶಾಹಿ ವರ್ಗದ ದಬ್ಬಾಳಿಕೆ ಕುರಿತ ಸಾರವನ್ನೊಳಗೊಂಡ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ ನೀರೀಕ್ಷಿತ ಮಟ್ಟದ ಗೆಲುವು ಸಾಧಿಸಲಿಲ್ಲ. ಇಲ್ಲಿ ಅವರ ಲೆಕ್ಕಾಚಾರವೆಲ್ಲ ತಪ್ಪಿದೆ.
ಲೆಕ್ಕಾಚಾರ ತಪ್ಪಿದ್ದಕ್ಕೆ ಕಾರಣ ಹುಡುಕಿ ಈಗ ಆ ಮಲ್ಲಿಗೆಯ ಪರಿಮಳದಿಂದ ಹೊರ ಬಂದು ಹೊಸ ಲೆಕ್ಕಚಾರ ಆರಂಭಿಸಿ, ಈಗ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. 'ಒಲವೇ ಜೀವನ ಲೆಕ್ಕಾಚಾರ' ಎಂಬ ಹೊಸ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ನಾಯಕ ಪಾತ್ರವನ್ನು ವಹಿಸಲಿದ್ದು ಕೆ.ಮಂಜು ಚಿತ್ರವನ್ನು ನಿರ್ಮಿಸಲಿದ್ದಾರೆ.
ಚಿತ್ರದ ಮುಹೂರ್ತ ಏ.14 ರಂದು ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಆದರೆ ಚಿತ್ರಕಥೆಯ ಬಗ್ಗೆ ನಾಗತಿಹಳ್ಳಿ ಹೆಚ್ಚಿನ ಮಾಹಿತಿ ನೀಡಲಿಲ್ಲ. ಈ ಬಾರಿಯಾದರೂ ಇವರ ಲೆಕ್ಕಾಚಾರ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
|