ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮ್ಮೆಜಮಾನ್ರಿಗೆ ಇನ್ನಷ್ಟು ಸೇರ್ಪಡೆ
ನಮ್ಮೆಜಮಾನ್ರು ಜೊತೆ ಮತ್ತಷ್ಟು ಜನ ಸೇರಿಕೊಂಡಿದ್ದಾರೆ. ಈ ಹಿಂದೆ ನಮ್ಮೆಜಮಾನ್ರು ಚಿತ್ರತಂಡದಲ್ಲಿ ವಿಷ್ಣುವರ್ಧನ್, ವಿಜಯ್ ರಾಘವೇಂದ್ರ ಹಾಗೂ ಅನಂತ್ನಾಗ್ ಹೆಸರುಗಳಷ್ಟೇ ಕೇಳಿಬಂದಿದ್ದವು. ಆದರೆ ಈಗ ಮತ್ತಷ್ಟು ಜನರ ಹೆಸರುಗಳು ಕೇಳಿ ಬರುತ್ತಿದೆ.

ರಮೇಶ್ ಅರವಿಂದ್ ಹೆಸರೂ ಕೂಡಾ ಈ ಚಿತ್ರದಲ್ಲಿ ಕೇಳಿಬರುತ್ತಿದೆ. ಗಜ ಚಿತ್ರದ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆ ಇಟ್ಟ ಲಲನೆ ನವ್ಯಾ ನಾಯರ್ ಕೂಡಾ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಗಜ ಚಿತ್ರದ ನಂತರ ಈಕೆಗಿದು ಎರಡನೆ ಚಿತ್ರ. ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಚಿತ್ರವನ್ನು ಮತ್ತಷ್ಟು ವಿಶಿಷ್ಟವಾಗಿ ನಿರ್ದೇಶಿಸಲು ತೀರ್ಮಾನಿಸಿದ್ದಂತಿದೆ. ಅದಕ್ಕಾಗಿ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಘಟಾನುಘಟಿಗಳನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ.

ಈ ಹಿಂದೆ ಪಾರ್ಥ, ಶಂಭು ಚಿತ್ರಗಳನ್ನು ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಚಿತ್ರಕತೆ, ಸಂಭಾಷಣೆಯನ್ನು ಕೂಡಾ ನಾಗಾಭರಣ ಮಾಡುತ್ತಿದ್ದಾರೆ. ಹಂಸಲೇಖಾ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
ಮತ್ತಷ್ಟು
ಸಿಂಗ್ ಬಾಬು ಮಗನಿಗಾಗಿ ಇನ್ನೊಂದು ಚಿತ್ರ
ಒಲವೇ ಜೀವನ ಲೆಕ್ಕಾಚಾರಕ್ಕೆ ಮುಹೂರ್ತ
ಹೀರೋಗೆ ಸಿನಿಮಾ ಚಿಂತೆ, ಹಿರೋಯಿನ್‌ಗೆ ಪ್ರೀತಿಯ ಚಿಂತೆ
ಆ ದಿನಗಳ ಈ ಹುಡುಗನಿಗೆ ಬಂದ ಆಫರ್‌ಗಳೆಷ್ಟು ಗೊತ್ತಾ?
ಪತ್ರಕರ್ತರೊಂದಿಗೆ ಜಗಳಕ್ಕೆ ನಿಂತ ಆದಿಲೋಕೇಶ್
ಪ್ರಾಣಿಪ್ರಿಯ ದರ್ಶನ್ ನಿಮಗೆ ಗೊತ್ತಾ?