ಕಿರುತೆರೆಯಲ್ಲಿ ಕ್ರಿಯಾಶೀಲ ನಿರ್ದೇಶಕರೆಂದೇ ಖ್ಯಾತಿ ಹೊಂದಿರುವ ಟಿ.ಎನ್. ಸೀತಾರಾಂ ಏನಾದರೂ ಒಂದು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಮಾಯಾಮೃಗ, ಮುಕ್ತದಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿದ ಅವರು ಈಗ ಮತ್ತೊಂದು ಹೊಸ ಮುಕ್ತ...ಮುಕ್ತ ಎಂಬ ಧಾರಾವಾಹಿಯನ್ನು ನಿರ್ದೇಶಿಸಲು ಹೊರಟ್ಟಿದ್ದಾರೆ.
ಈ ಹಿಂದೆ ಮೀರಾ ಮಾಧವ ರಾಘವ ಚಿತ್ರ ನಿರ್ಮಿಸಿ ಸೋತಿದ್ದ ಸೀತಾರಾಂ ಈಗ ಈ ಹೊಸ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ.
ಸಾಮಾಜಿಕ ಸಮಸ್ಯೆಗಳನ್ನಿಟ್ಟುಕೊಂಡು ಧಾರವಾಹಿ ನಿರ್ಮಿಸುವುದರಲ್ಲಿ ಸೀತಾರಾಂ ಅವರನ್ನು ಮೀರಿಸುವವರಿಲ್ಲ ಎಂದು ಬಂಡಾಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಡಾ. ಸಿದ್ಧಲಿಂಗಯ್ಯರವರುಗಳು ಇತ್ತೀಚೆಗೆ ನಡೆದ ಧಾರಾವಾಹಿ ಮುಹೂರ್ತ ಸಮಾರಂಭದಲ್ಲಿ ಬಣ್ಣಿಸಿದರು.
ಮುಕ್ತ...ಮುಕ್ತದಲ್ಲೂ ಅದೇ ಸಾಮಾಜಿಕ ಸಮಸ್ಯೆ ಇರುವ ಥೀಮ್ ಇಟ್ಟುಕೊಂಡು ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಬ್ಲಾಕ್ ಮನಿ, ಭೂ ಮಾಫಿಯಾಗಳು ಪ್ರಧಾನ ಪಾತ್ರ ವಹಿಸುತ್ತವೆ. ನನ್ನ ಮಾಯಾಮೃಗ, ಮುಕ್ತ ಧಾರಾವಾಹಿಗಳನ್ನು ಕೇವಲ ಒಂದು ವರ್ಗದ ಜನ ಮಾತ್ರ ಇಷ್ಟಪಡಲಿಲ್ಲ. ಸಾಮಾನ್ಯ ವರ್ಗದ ಜನ ಕೂಡಾ ಇಷ್ಟಪಟ್ಟರು. ಕಿರುತೆರೆ ಎಂಥ ಪ್ರಬಲ ಮಾಧ್ಯಮ ಎಂದು ನನಗೆ ಗೊತ್ತಾಗಿದೆ ಎಂದರು ನಿರ್ದೇಶಕ ಟಿ.ಎನ್.ಸೀತಾರಾಂ.
|