ಉಪೇಂದ್ರಗೆ ಕ್ರಿಕೆಟ್ ಅಂದ್ರೆ ತುಂಬಾನೇ ಇಷ್ಟ ಅಂತೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಕ್ರಿಕೆಟ್ ಮ್ಯಾಚ್ ನೋಡ್ತಾರಂತೆ. ಇವರು ಕಪಿಲ್ ದೇವ್‌ರನ್ನು ತುಂಬಾ ಇಷ್ಟಪಡುತ್ತಿದ್ದು, ಅವರಂತೆ ತಾನೂ ಒಬ್ಬ ಆಟಗಾರ ಆಗಬೇಕೆಂದು ಬಯಸಿದ್ದರಂತೆ. ಆದರೆ ಇವರು ಸೂಪರ್ ಸ್ಟಾರ್ ಸಿನಿಮಾ ನಟ ಆದರು. ಈಗ ಇವರು ಧೋನಿಯನ್ನು ತುಂಬಾ ಇಷ್ಟಪಡುತ್ತಾರೆ.
ಮತ್ತೊಂದು ವಿಷ್ಯ ಅಂದ್ರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕ್ರಿಕೆಟಿಗರ ಜೊತೆ ಸಿನಿಮಾ ಮಂದಿಯನ್ನು ನೋಡಬಹುದು. ಬೆಂಗಳೂರು ತಂಡವನ್ನು ಉಪೇಂದ್ರ ಹುರಿದುಂಬಿಸಲಿದ್ದಾರೆ. ಇವರ ಜೊತೆ ನಟಿ ರಮ್ಯಾ ಕೂಡಾ ಇರುತ್ತಾರೆ. ಇವರೊಂದಿಗೆ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಕೂಡಾ ಜತೆಯಾಗಲಿದ್ದಾರೆ.
ವಿಜಯ್ ಮಲ್ಯಗೂ ಉಪೇಂದ್ರಗೂ ಹಿಂದಿನ ನಂಟು. ಯುಬಿ ಬ್ರಾಂಡಿಗೆ ಉಪೇಂದ್ರ ಅಂಬಾಸಿಡರ್. ಆದ್ದರಿಂದ ಸಹಜವಾಗಿಯೇ ಇವರು ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಏಳು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಏಪ್ರಿಲ್ 18 ರಿಂದ ಇವು ಆರಂಭ. ಕನಿಷ್ಠ ಎರಡು ಪಂದ್ಯಗಳಲ್ಲಿ ಉಪ್ಪಿ ಭಾಗವಹಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದ್ದಾರೆ.
|