ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೈವಿಕ ಶಕ್ತಿಯ ಶಿವಮಣಿಗೆ ಅದ್ಭುತ ಶಕ್ತಿ
ಆ ಮಣಿ ಅವನ ಜೊತೆ ಇರುವವರೆಗೆ ಅವನನ್ನು ಯಾರೂ ಏನೂ ಮಾಡಲಾರರು. ಆ ಮಣಿಗೆ ದೈವಿಕ ಶಕ್ತಿ ಇರುತ್ತದೆ. ಸಾಮಾನ್ಯ ಮನುಷ್ಯನಿಗೆ ಮಾಡಲು ಸಾಧ್ಯವಾಗದ್ದನ್ನು ಅವನು ಮಾಡುತ್ತಾನೆ.ಆದರೆ ಈ ವಿಷಯ ಆತನಿಗೆ ಗೊತ್ತಿರುವುದಿಲ್ಲ.


ಇದು ಶಿವಮಣಿ ಚಿತ್ರದ ಒನ್ ಲೈನ್ ಸ್ಟೋರಿ. ಮುರಳಿ ಹಾಗೂ ಶರ್ಮಿಳಾ ಅಭಿನಯದ ಶಿವಮಣಿ ಚಿತ್ರವನ್ನು ಅಮರ್‌ನಾಥ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಮಣಿ ಮುಖ್ಯ ಪಾತ್ರ ವಹಿಸುತ್ತದೆ. ಮಣಿಯ ನಿರ್ದೇಶನದಲ್ಲಿ ನಾಯಕ ನಡೆಯುತ್ತಾನೆ. ಚಿತ್ರದಲ್ಲಿ ಎಲ್ಲೂ ಆಶ್ಲೀಲತೆ ಇಲ್ಲ. ಇಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು ನಿರ್ದೇಶಕ. ಇವರು ಹಿಂದೆ ಸೈ, ಡೆಡ್ಲಿ ಸೋಮ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಮನುಷ್ಯ ತನ್ನಲ್ಲಿರುವ ಶಕ್ತಿಯನ್ನು ಯಾವ ಕಾರಣಕ್ಕೆ ಉಪಯೋಗಿಸುತ್ತಾನೋ ಆ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂಬುದು ಚಿತ್ರದ ಸಂದೇಶ ಎಂದರು. ಚಿತ್ರ ನೋಡಿದ ಪ್ರತಿಯೊಬ್ಬರು ತಮಗೂ ಇಂಥ ಮಗ ಇರಬೇಕಿತ್ತು ಎಂದು ಭಾವಿಸುತ್ತಾರೆ. ಆ ರೀತಿ ಚಿತ್ರಕಥೆ ಇದೆ ಎಂದು ಅಮರ್ನಾಥ್ ಹೇಳಿದರು.

ಮುರಳಿಗೆ ಧರ್ಮ ಹಾಗೂ ಆಧ್ಯಾತ್ಮಿಕತೆಯ ಮೇಲೆ ಹೆಚ್ಚು ನಂಬಿಕೆ ಇದ್ದ ಕಾರಣ ಈ ಚಿತ್ರವನ್ನು ಒಪ್ಪಿಕೊಂಡರಂತೆ. ವೀರ್ ಸಮರ್ಥ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರ 65 ದಿನಗಳಲ್ಲಿ ಮುಗಿಯಲಿದೆ. ಪೈ ಗ್ರೂಪ್ ಹೊಟೇಲ್ ಮಾಲೀಕ ಜಗನ್ನಾಥ್ ಪೈ ಚಿತ್ರ ನಿರ್ಮಿಸುತ್ತಿದ್ದಾರೆ.
ಮತ್ತಷ್ಟು
ಉದಯ್ ದರೋಡೆಯಲ್ಲಿ 50 ಮಂದಿ
ಬಿಡುಗಡೆಗೆ ಸಜ್ಜಾಗಿ ನಿಂತಿರುವ ಕಲಾತ್ಮಕ ಚಿತ್ರಗಳು
ನಿರ್ದೇಶಕ ಸೂರಿಯಿಂದ ಮತ್ತೊಂದು ಚಿತ್ರ
ಹೊಸ ಕನ್ನಡ ಚಿತ್ರಗಳ ಸುರಿಮಳೆ
ರಾಯಲ್ ಚಾಲೆಂಜರ್ಸ್ ಪ್ರೋತ್ಸಾಹಕ್ಕೆ ಉಪ್ಪಿ
ಮತ್ತೊಂದು ಹೊಸ ಮುಕ್ತ...ಮುಕ್ತ