ಒಂದಿಬ್ಬರು ನಾಯಕರು. ಒಬ್ಬಳು ನಾಯಕಿ. ಆಕೆಯ ಪ್ರೀತಿಗೆ ಇವರಿಬ್ಬರು ದುಂಬಾಲು ಬೀಳುವುದು. ಇಂತಹುದೇ ಚಿತ್ರಕಥೆಯನ್ನೊಳಗೊಂಡ ಚಿತ್ರ 'ವಸಂತಕಾಲ'.
ಇಬ್ಬರು ನಾಯಕರು, ಒಬ್ಬಳು ನಾಯಕಿ. ಇವರು ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ನಾಯಕಿ ಯಾರನ್ನು ಪ್ರೀತಿಸುತ್ತಾಳೆ. ಇದು ಸಸ್ಪೆನ್ಸ್. ಈ ತ್ರಿಕೋನ ಪ್ರೇಮಕಥೆಯುಳ್ಳ ಚಿತ್ರವನ್ನು ವಡ್ಡನಹಳ್ಳಿ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.
ಇಲ್ಲಿ ಚಿತ್ರಕಥೆ ವಿಶಿಷ್ಟವಾಗಿದೆಯಂತೆ. ಇಂದಿನ ಯುವ ಜನರ ಮನಸ್ಸನ್ನು ಕಥೆ ನಾಟುತ್ತದಂತೆ. ಚಿತ್ರದಲ್ಲಿ ಸೆಂಟಿಮೆಂಟ್ ದೃಶ್ಯ ಅದ್ಬುತವಾಗಿದೆಯಂತೆ. ಪ್ರೇಯಸಿಯ ಪ್ರೀತಿಯ ಜೊತೆಗೆ ಇಲ್ಲಿ ತಾಯಿ ಪ್ರೀತಿಯನ್ನು ಬಿಂಬಿಸಲಾಗಿದೆ ಎಂದರು ನಿರ್ದೇಶಕರು.
ಇತ್ತೀಚೆಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆಯ ಸೆಟ್ ಹಾಕಿ ಹಾಡೊಂದನ್ನು ಚಿತ್ರೀಕರಿಸಿದರಂತೆ. ಇತರ ಚಿತ್ರಗಳಲ್ಲಿ ಎಸ್ಟೇಟ್‌ಗಳಲ್ಲಿ ಚಿತ್ರೀಕರಿಸಿದ ದೃಶ್ಯಗಳಿದ್ದರೆ, ನಮ್ಮ ಚಿತ್ರದಲ್ಲಿ ಎಸ್ಟೇಟ್ ದಾಟಿದ ಸುಂದರ ಹಸಿರು ಬೆಟ್ಟದಲ್ಲಿ ಚಿತ್ರೀಕರಿಸಿದ ದೃಶ್ಯಗಳಿವೆ. ಈವರೆಗೆ ಇದನ್ನು ಯಾರೂ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡರು ನಿರ್ದೇಶಕ ಶ್ರೀನಿವಾಸ್. ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.
|