ನವೀನ್ ಕೃಷ್ಣಗೆ ಧಿಮಾಕು. ಇದು ಅವರ ಸ್ವಭಾವ ಅಲ್ಲ. ಮುಂದಿನ ಚಿತ್ರ. ನಾಯಕ ತನ್ನ ಜಾಣ್ಮೆಯಿಂದ ಆಕೆಯನ್ನು ಪ್ರೀತಿಸುತ್ತಾನೆ. ಮೊದ ಮೊದಲು ತಿರಸ್ಕರಿಸುತ್ತಿದ್ದ ಆಕೆ ಈತನ ಜಾಣ್ಮೆ ನೋಡಿ ಪ್ರೀತಿಸುತ್ತಾಳೆ. ಇದು ಧಿಮಾಕು ಚಿತ್ರದ ಕಥೆಯ ಎಳೆ.
ಚಿತ್ರವನ್ನು ಮುರುಗೇಶ್ ನಿರ್ದೇಶಿಸುತ್ತಿದ್ದಾರೆ. ನವೀಲ್‌ಕೃಷ್ಣಗೆ ಗಾಂಧಿನಗರದಲ್ಲಿ ಒಂದು ನೆಲೆ ಸಿಕ್ಕಿರಲಿಲ್ಲ. ಕಿರುತೆರೆಯಲ್ಲಿ ಹಾಗೂ ಚಿತ್ರಗಳಲ್ಲಿ ಖಳನಾಯಕನಾಗಿ ಅಥವಾ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ತಮ್ಮ ಮಗನಿಗೆ ಒಂದು ಉತ್ತಮ ಅವಕಾಶವನ್ನು ಸೃಷ್ಟಿಸಿ ಒಂದು ಸ್ಥಾನ ಕಲ್ಪಿಸಬೇಕೆಂದು ನವೀನ್ ಕೃಷ್ಣ ಅವರ ತಂದೆ ಶ್ರೀನಿವಾಸ್ ಮೂರ್ತಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ನವೀನ್ ಕೃಷ್ಣ ಇಲ್ಲಿ ಶ್ರದ್ದೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಕೆ.ಜಿ.ಎಫ್‌ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ನವೀನ್ ಕೃಷ್ಣ ಇಲ್ಲಿ ಕೇವಲ ನಟನೆ ಮಾಡದೇ ಅದರ ಜೊತೆಗೆ ಹಾಡೊಂದಕ್ಕೆ ಸಾಹಿತ್ಯ ಬರೆದು ಅದಕ್ಕೆ ಕಂಠದಾನ ಕೂಡಾ ಮಾಡಿದ್ದಾರೆ. ಚಿತ್ರಕಥೆ ಬರೆಯುವಲ್ಲಿ ಕೂಡಾ ಸಹಕರಿಸಿದ್ದಾರೆ. 60 ದಿನ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ರಮೇಶ್ ಭಟ್, ಜಗ್ಗೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
|