ಕನ್ನಡ ಚಿತ್ರರಂಗದಲ್ಲಿ ಐಟಂಸಾಂಗ್ಗೆ ಬಾಂಬೆಯಿಂದ ಹಾಟ್ ಬೇಬಿಗಳನ್ನು ಕರೆಸುವುದೇನೋ ಸರಿ. ಆದರೆ ಕರೆಸಿಯೂ ಅವರನ್ನು ಸರಿಯಾಗಿ ಕುಣಿಸದಿದ್ದರೆ? ಹೌದು, ಗೆಳೆಯ ಚಿತ್ರದ ನಿರ್ದೇಶಕ ಹರ್ಷಗೆ ಇಂತಹ ಅನೇಕ ಪ್ರಶ್ನೆಗಳು ಎದುರಾದವಂತೆ.
ಗೆಳೆಯ ಚಿತ್ರದ ಹಾಡೊಂದಕ್ಕೆ ಹರ್ಷ ರಾಖಿ ಸಾವಂತ್ಳನ್ನು ಬಾಂಬೆಯಿಂದ ಕರೆಸಿದ್ದರು. ಚಿತ್ರವೂ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಈ ಸಂದರ್ಭದಲ್ಲಿ ವಾಹಿನಿಯೊಂದರ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಪ್ರೇಕ್ಷಕರು ಹರ್ಷರನ್ನು ತೀವ್ರ ತರಾಟೆಗೆ ತಗೊಂಡರಂತೆ. "ಐಟಂಸಾಂಗ್ಲ್ಲಿ ರಾಖಿಯನ್ನು ಇನ್ನೂ ಚೆನ್ನಾಗಿ ತೋರಿಸಬಹುದಿತ್ತು. ಆದರೆ ನೀವು ನನ್ನ ಲುಕ್ ಬೇರೆನೇ.... ಎಂದು ಬರೀ ಪ್ರಜ್ವಲ್ ಬೆನ್ನನ್ನಷ್ಟೆ ತೋರಿಸಿದ್ದೀರಿ"ಎಂಬ ಸಲಹೆ ಹಾಗೂ ಪ್ರಶ್ನೆಗಳು ಬಂತಂತೆ.
ನೀವೇ ಯೋಚಿಸಿ, ಒಬ್ಬಳು ಐಟಂಸಾಂಗ್‌ನಲ್ಲಿ ಕುಣಿಯುವ ನಾಯಕಿಯನ್ನು ಇನ್ನೂ ಚೆನ್ನಾಗಿ ತೋರಿಸುವುದು ಎಂದರೆ ಹೇಗೆ? ಇನ್ನೂ ಕಡಿಮೆ ಬಟ್ಟೆ ಹಾಕಿಸಿ ಕುಣಿಸಬೇಕಿತ್ತು ಎಂಬ ಅರ್ಥ ತಾನೇ? ನೇರವಾಗಿ ಹೇಳಲು ಮುಜುಗರವಾದ್ದರಿಂದ ಪಾಪ, ಪ್ರೇಕ್ಷಕನೋರ್ವ ಈ ರೀತಿ ಹೇಳಿರಬೇಕು. ಇದೆ ಸಮಸ್ಯೆಯನ್ನು ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಸೆಕ್ಸಿ ಬಾಂಬ್ ಮಲ್ಲಿಕಾ ಶೆರಾವತ್ಳನ್ನು ತರಿಸಿ ಕುಣಿಸಿದ ನಿರ್ದೇಶಕ ಪ್ರೇಮ್ ಕೂಡಾ ಎದುರಿಸಿರಬಹುದೇ?
|