ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುನೀತ್‌ರಿಂದ ಅಪ್ಪಾಜಿಗೆ ಪುಸ್ತಕ ಕಾಣಿಕೆ
ಪುನೀತ್ ರಾಜ್‌ಕುಮಾರ್ ತಮ್ಮ ಅಪ್ಪಾಜಿಯ ಆತ್ಮಕ್ಕೆ ಒಂದು ಕಾಣಿಕೆ ಸಲ್ಲಿಸಲು ಮುಂದಾಗಿದ್ದಾರೆ. ಈ ಕಾಣಿಕೆ ಯಾವುದೇ ವಸ್ತು ರೂಪದ್ದಲ್ಲ. ಅಕ್ಷರ ರೂಪದ್ದು. ಹೌದು ಪುನೀತ್, ಡಾ.ರಾಜ್ ಜೀವನದ ಕುರಿತು ಒಂದು ಪುಸ್ತಕ ಬರೆಯುತ್ತಿದಾರೆ.

ಇಲ್ಲಿ ಡಾ.ರಾಜ್ ಅವರ ಹಲವು ಮುಖಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಅಪ್ಪಾಜಿಯ ಪ್ರೀತಿಯ ಮಗ ಅಪ್ಪು ಮಾಡುತ್ತಿದ್ದಾರೆ. ಸುಮಾರು ಏಳು ವರ್ಷಗಳ ಹಿಂದೆಯೇ ಈ ಕುರಿತು ಅವರು ಆಲೋಚಿಸಿದ್ದಾರಂತೆ. ಖುದ್ದಾಗಿ ಈ ಪುಸ್ತಕ ಬರೆದು ಅಪ್ಪಾಜಿ ಹುಟ್ಟುಹಬ್ಬಕ್ಕೆ ಅವರ ಜೀವನವನ್ನು ಅಕ್ಷರ ರೂಪದಲ್ಲಿ ನೀಡಬೇಕೆಂದು ಭಾವಿಸಿದರಂತೆ. ಆದರೆ ವಿಧಿ ಬೇರೆಯೇ ಬಗೆಯಿತು ಎನ್ನುತ್ತಾ ಭಾವುಕರಾಗುತ್ತಾರೆ.

ಡಾ.ರಾಜ್ಕುಮಾರ್ ವ್ಯಕ್ತಿಯ ವ್ಯಕ್ತಿತ್ವ ಎಂಬ ಹೆಸರಿನಲ್ಲಿ ಈ ಪುಸ್ತಕವನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಹೊರತರಲಿದ್ದಾರೆ. ಈಗಾಗಲೇ ಅಪ್ಪಾಜಿ ಕ್ರಿಕೆಟ್ ಆಡುತ್ತಿರುವ ಹಾಗೂ ವಿಶಿಷ್ಟ ವಿನ್ಯಾಸದ ಉಡುಗೆ ತೊಟ್ಟಿರುವ ವಿಶೇಷ ಭಂಗಿಯ 4 ಸಾವಿರ ಭಾವಚಿತ್ರಗಳನ್ನು ಸಂಗ್ರಹಿಸಿದ್ದಾರೆ.

ಅಪ್ಪಾಜಿ ತಮ್ಮ ಮನಸಿನ ಭಾವನೆಗಳನ್ನು ಅವರ ಆಪ್ತರೊಡನೆ ಹೇಳಿಕೊಂಡಿರುತ್ತಾರೆ. ಅಂತವರನ್ನು ಸಂದರ್ಶಿಸಿ ಬರೆಯುವ ಪ್ರಯತ್ನದಲ್ಲಿದ್ದಾರೆ ಪುನೀತ್. ಪುಸ್ತಕದಲ್ಲಿ ಅಪರೂಪದ ಭಾವಚಿತ್ರಗಳು ಕಂಡುಬರಲಿವೆ. ಪುಸ್ತಕಕ್ಕೆ ಪುನೀತ್ ರಾಜ್‌ಕುಮಾರ್ ಮುನ್ನುಡಿ ಬರೆಯಲಿದ್ದಾರೆ. ಪುಸ್ತಕ ಮುಂದಿನ ವರ್ಷದ ಏಪ್ರಿಲ್ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಮತ್ತಷ್ಟು
ಮಿಸ್ಟರ್ ಗರಗಸನಿಗೆ ಜ್ವರ ಬಂದಿತ್ತಂತೆ
ಬಾಬಾನಲ್ಲಿ ಮಚ್ಚಿನ ಜತೆಗೆ ಪ್ರೀತಿಯೂ ಐತೆ!
ಇನ್ನೂ ಚೆನ್ನಾಗಿ ತೋರಿಸಬಹುದಿತ್ತು.....
ನವೀನ್ ಕೃಷ್ಣರ 'ಧಿಮಾಕು' ನೋಡಿ
ವಸಂತಕಾಲದಲ್ಲಿ ಅವಳ್ಯಾರನ್ನು ಪ್ರೀತಿಸುತ್ತಾಳೆ?
ದೈವಿಕ ಶಕ್ತಿಯ ಶಿವಮಣಿಗೆ ಅದ್ಭುತ ಶಕ್ತಿ