ನಾಯಕಿಯರಿಗೆ ಏನಾದರೂ ಒಂದು ಚೂರು ಶೀತ ಅಥವಾ ಜ್ವರ ಬಂದರೆ ಅವರು ಶೂಟಿಂಗ್‌ಗೆ ಬರುತ್ತಾರೆಯೇ? ಖಂಡಿತಾ ಇಲ್ಲ. ತಮ್ಮನ್ನು ದೊಡ್ಡ ಆಸ್ಪತ್ರೆಗೆ ಸೇರಿಸುವಂತೆ ಹೇಳುತ್ತಾರೆ. ಆದರೆ ಮೆರವಣಿಗೆ ಚಿತ್ರದ ನಾಯಕಿ ಅಂದ್ರಿತಾ ರೇ ಇದಕ್ಕೆ ಭಿನ್ನ.
ಇತ್ತೀಚೆಗೆ ಚಿತ್ರೀಕರಣದ ವೇಳೆ ಬಿದ್ದು ಮಂಡಿನ ಚಿಪ್ಪು ತಿರುಗಿತ್ತಂತೆ, ಆದರೂ ಸ್ಪಲ್ವ ಸಾವರಿಸಿಕೊಂಡು ನಂತರ ಪುನ: ಶೂಟಿಂಗ್‌ನಲ್ಲಿ ಪಾಲ್ಗೊಂಡರು ಎಂದು ತಮ್ಮ ಚಿತ್ರದ ನಾಯಕಿಯ ಗುಣಗಾನ ಮಾಡಿದವರು ಮೆರವಣಿಗೆ ಚಿತ್ರದ ನಿರ್ಮಾಪಕ ಕಾಂತರಾಜ್.
ಚಿತ್ರದಲ್ಲಿ ನಟಿಸುವ ನಾಯಕ - ನಾಯಕಿಯರೆಲ್ಲ ಕೇವಲ ದುಡ್ಡಿಗಾಗಿ ಬರುತ್ತಾರೆ. ಆದರೆ ನಮ್ಮ ಚಿತ್ರತಂಡ ನಿಜಕ್ಕೂ ನೈಜ ಪ್ರತಿಭೆ ಹಾಗೂ ಚಿತ್ರದ ಯಶಸ್ಸಿಗಾಗಿ ಶ್ರಮಿಸುತ್ತಿದೆ. ಇಲ್ಲಿ ಯಾರೂ ದುಡ್ಡಿನ ಭೂತಗಳಿಲ್ಲ ಎಂದು ತಮ್ಮ ಚಿತ್ರ ತಂಡವನ್ನು ಹೊಗಳಿದರು.
ಇವರ ಮೆರವಣಿಗೆ ಚಿತ್ರದ ನಾಯಕ ಪ್ರಜ್ವಲ್ ಗಂಗೇ ಬಾರೇ ತುಂಗೆ ಬಾರೇ ಚಿತ್ರಕ್ಕೂ ನಾಯಕ. ಒಬ್ಬನೇ ನಾಯಕನಿರುವ ಎರಡು ಚಿತ್ರ ಒಟ್ಟಿಗೆ ಬಿಡುಗಡೆಯಾದರೆ ಕಷ್ಟವಾಗುತ್ತದೆ ಎಂದು ತಮ್ಮ ಚಿತ್ರ ಬಿಡುಗಡೆಗೆ ವಿಳಂಬವಾದ ಬಗ್ಗೆ ಕಾರಣ ನೀಡಿದರು. ಚಿತ್ರವನ್ನು ಮೇನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಮತ್ತೊಂದು ವಿಷ್ಯ ಅಂದ್ರೆ ಇವರು ಯಶಸ್ವಿ ನಿರ್ದೇಶಕ ಮಹೇಶ್‌ಬಾಬು ಕಾಲ್ಶೀಟ್ ಪಡೆಯಲು ಕೂಡಾ ಕಾದರಂತೆ.
|