ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಸರು ಬದಲಾಯಿಸಿ ಅದೃಷ್ಟ ಗಳಿಸಿ
ಏನೋ ಒಂದು ಹೆಸರಿದ್ದರೆ ಸಾಕು ಎಂದು ನೀವು ಭಾವಿಸಿದರೆ ಅದು ತಪ್ಪು. ಚಿತ್ರರಂಗದ ಮಂದಿ ಹೆಸರಿನಿಂದಲೇ ಮೇಲೆ ಬರುತ್ತಾರೆ. ಜ್ಯೋತಿಷಿಗಳನ್ನು ಭೇಟಿಯಾಗುತ್ತಾರೆ. ಅವರೇನಾದರೂ ನಿಮ್ಮ ಹೆಸರಿನ ಗ್ರಹಗತಿ ಸರಿಯಿಲ್ಲ ಎಂದರೆ ತಟ್ಟನೆ ತಮ್ಮ ಹೆಸರಿಗೆ ಒಂದು ಪದ ಸೇರಿಸುತ್ತಾರೆ. ಆಗಲಾದರೂ ಅವಕಾಶ ಖುಲಾಯಿಸುತ್ತೋ ಇಲ್ಲವೋ ನೋಡೋಣವೆಂದು.

ಇತ್ತೀಚೆಗೆ ಇಂತಿ ನಿನ್ನ ಪ್ರೀತಿಯ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ತಮ್ಮ ಹೆಸರನ್ನು ಕೃಷ್ಣ ಎಂದು ಬದಲಾಯಿಸಿದರು. ಆದರೆ ಆ ಚಿತ್ರ ಮಾತ್ರ ಗೆಲ್ಲಲಿಲ್ಲ. ಆದರೆ ಇವರಿಗೆ ನಾಗತಿಹಳ್ಳಿ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಎಂಬ ಮತ್ತೊಂದು ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಎರಡು ವರ್ಷದಿಂದ ಖಾಲಿ ಕುಳಿತಿದ್ದ ಮುರಳಿಗೆ ಯಾರೋ ಜ್ಯೋತಿಷಿಗಳು ಹೇಳಿದರೆಂದು ತಮ್ಮ ಹೆಸರನ್ನು ಶ್ರೀಮುರಳಿ ಎಂದು ಬದಲಿಸಿದ್ದಾರೆ.

ಹೆಸರು ಬದಲಿಸಿದ್ದೇ ತಡ, ಇವರಿಗೆ ಕೆಲವು ಅವಕಾಶಗಳು ಬಂದವು. ಮಿಂಚಿನ ಓಟ ಚಿತ್ರದಲ್ಲಿ ನಟಿಸುತ್ತಿದ್ದಂತೆ ಸಿಹಿಗಾಳಿಯಲ್ಲಿ ನಟಿಸಿದರು. ಈಗ ಶಿವಮಣಿಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುವ ಅವಕಾಶ ಲಭಿಸಿದೆ.

ಚಿತ್ರರಂಗಕ್ಕೆ ಬಂದ ಕೂಡಲೇ ಹೆಸರು ಬದಲಾಯಿಸುವುದು ಸಾಮಾನ್ಯ. ಶ್ವೇತಾ ರಕ್ಷಿತಾ ಆಗಿ ಮಾರ್ಪಟ್ಟರೆ, ಸ್ಪಂದನಾ ರಮ್ಯಾ ಆದಳು. ಅಂದಹಾಗೆ ನಮ್ಮ ಬಿಜೆಪಿ ಮುಖಂಡ ಯಡಿಯೂರಪ್ಪ ಕೂಡ ತಮ್ಮ ಹೆಸರನ್ನು ಯಡ್ಯೂರಪ್ಪ ಎಂದು ತಿರುಚಿಕೊಂಡು ಒಂದು ವಾರಕ್ಕೆ ಮುಖ್ಯಮಂತ್ರಿಯಾದರು.

ನೀವು ಕೂಡಾ ಹೆಸರು ಬದಲಿಸಿ ನೋಡಿ ಅದೃಷ್ಟ ಖುಲಾಯಿಸಬಹುದು.
ಮತ್ತಷ್ಟು
ಪೆಟ್ಟಾದರೂ ಅಂದ್ರಿತಾ ಶೂಟಿಂಗ್‌ಗೆ ಬಂದರಂತೆ
ಪುನೀತ್‌ರಿಂದ ಅಪ್ಪಾಜಿಗೆ ಪುಸ್ತಕ ಕಾಣಿಕೆ
ಮಿಸ್ಟರ್ ಗರಗಸನಿಗೆ ಜ್ವರ ಬಂದಿತ್ತಂತೆ
ಬಾಬಾನಲ್ಲಿ ಮಚ್ಚಿನ ಜತೆಗೆ ಪ್ರೀತಿಯೂ ಐತೆ!
ಇನ್ನೂ ಚೆನ್ನಾಗಿ ತೋರಿಸಬಹುದಿತ್ತು.....
ನವೀನ್ ಕೃಷ್ಣರ 'ಧಿಮಾಕು' ನೋಡಿ